ಉಡುಪಿ: ಜಿಲ್ಲೆಯ ಪೆರ್ಡೂರಿನಲ್ಲಿ ದನದ ವ್ಯಾಪರಿ ಹುಸೈನಬ್ಬ ಅವರ ಸಂಶಯಸ್ಪದ ಸಾವಿನ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂದಿಸಿ ನಾಲ್ವರನ್ನು ಬಂಧಿಸಲಾಗಿದೆಯೆಂದು ಉಡುಪಿಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ. ಸುರೇಶ್ ಮೆಂಡನ್ ಅಲಿಯಾಸ್ ಸೂರಿ, ಹೆಚ್ ಪ್ರಸಾದ್, ದೀಪಕ್ ಅಲಿಯಾಸ್ ಶೆಟ್ಟಿ, ರತನ್ ಬಂಧಿತ ಆರೋಪಿಗಳಾಗಿದ್ದಾರೆ.
ಒಂದೆರಡು ದಿನಗಳ ಹಿಂದೆ ರಾತ್ರಿ ಉಡುಪಿ ಜಿಲ್ಲೆಯ ಪೆರ್ಡರು ಗ್ರಾಮದ ಕೊಟ್ಟಾರು ಹಾಡಿಯಲ್ಲಿ ಹುಸೈನಬ್ಬ ಅವರ ಶವ ಪತ್ತೆಯಾಗಿತ್ತು. ಸ್ಕಾರ್ಪಿಯೋ ವಾಹನದಲ್ಲಿ ಗೋವುಗಳನ್ನು ಸಾಗಿಸಲಾಗುತ್ತಿದ್ದ ಇವರನ್ನು ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ತಡೆದ ಸಂದರ್ಭ ಹುಸೈನಬ್ಬ ತಪ್ಪಿಸಿಕೊಂಡು ಒಡಿದ್ದರು ಎನ್ನಲಾಗಿದೆ.
ಬಳಿಕ ಬೆಳಿಗ್ಗೆ ಹುಸೈನಬ್ಬ ಶವವಾಗಿ ಪತ್ತೆಯಾಗಿದ್ದರು. ಹುಸೈನಬ್ಬ ಸಾವು ಸಹಜ ಸಾವು ಎಂದು ದಾಖಲಾಗಿತ್ತು. ಆದ್ರೆ ಪ್ರಕರಣ ಸಾಕಷ್ಟು ಅನುಮಾನಕ್ಕೆ ಈಡು ಮಾಡಿತ್ತು. ಈ ಮದ್ಯೆ ಹುಸೈನಬ್ಬ ಮನೆಯವರು ಇವರದ್ದು ಸಹಜ ಸಾವು ಅಲ್ಲ ಕೊಲೆ ಎಂದು ಅವರ ಮನೆಯವರು ಅನುಮಾನ ವ್ಯಕ್ತ ಪಡಿಸಿದ್ದರು.
ಭಜರಂಗದಳದ ಮುಖಂಡ ಸೂರಿ ಮತ್ತವರ ಬೆಂಬಲಿಗರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಮನೆಯವರ ದೂರಿನ್ವಯ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಈ ಮದ್ಯೆ ಪ್ರಕರಣವನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಪಿ ಎಸ್ ಐ ಕುಮಾರ್ ಅವರನ್ನು ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಬಂರಗಿ ಅಮಾನತ್ತು ಮಾಡುವಂತೆ ಆದೇಶ ಹೊರಡಿಸಿದ್ದರು.
ಪ್ರಕರಣ ಖಾವು ಹೆಚ್ಚಾಗುತ್ತಿದ್ದಂತೆ ಪ್ರಕರಣ ದಲ್ಲಿ ಭಾಗಿಯಾಗಿದ್ದ ಭಜರಂಗದಳದ ಕಾರ್ಯಕರ್ತರು ತಲೆ ಮರೆಸಿಕೊಂಡಿದ್ದರು. ಬಳ್ಳಾರಿಯತ್ತ ಪಲಾಯನಗೈದ ಮಾಹಿತಿ ಪಡೆದ ಉಡುಪಿ ಎಸ್ಪಿ ಲಕ್ಷಣ್ ನಿಂಬರಗಿ ಅವರನ್ನು ಬಂದಿಸುವಂತೆ ಬಳ್ಳಾರಿ ಎಸ್ಪಿ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ 3 ತಂಡಗಳಾಗಿ ಬಳ್ಳಾರಿಯಲ್ಲಿ ಪೋಲಿಸರು ಪ್ರಕರಣಕ್ಕೆ ಸಂಬಂದಿಸಿ ನಿನ್ನೆ ರಾತ್ರಿ ಎಂಬವರನ್ನು ಪೋಲಿಸರು ಬಂದಿಸಿದ್ದಾರೆ.
Comments are closed.