ಕರಾವಳಿ

ಶಾಸಕ ವೇದವ್ಯಾಸ್ ಕಾಮತ್‌ರಿಂದ ಮಳೆಯಿಂದ ಹಾನಿಗೊಳಗಾದ ಅತ್ತಾವರ ಹಾಗೂ ಅಶೋಕನಗರ ಪ್ರದೇಶ ಪರಿಶೀಲನೆ

Pinterest LinkedIn Tumblr

ಮಂಗಳೂರು : ಮಂಗಳೂರಿನಲ್ಲಿ ಧಾರಕರವಾಗಿ ಸುರಿದ ಮಳೆಗೆ ಅತ್ತಾವರ ಕಟ್ಟಪುಣಿಯಲ್ಲಿ ಎರಡು ಮನೆಗಳು ಸಂಪೂರ್ಣವಾಗಿ ಧರೆಗುರುಳಿ ಬಿದ್ದಿದೆ. ಅದೇ ರೀತಿ ಅಶೋಕನಗರ ದೈವಜ್ಞ ಸಭಾಂಗಣದ ಪಕ್ಕದಲ್ಲಿ ಹಲವಾರು ಕಡೆ ಆವರಣ ಗೋಡೆಗಳು ಕುಸಿದಿದೆ. ಈ ಎಲ್ಲಾ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸಿದರು.

ಈ ಸಂಧರ್ಭ ಮಂಗಳೂರು ನಗರ ದಕ್ಷಿಣ ಪ್ರಧಾನ ಕಾರ್ಯದರ್ಶಿ ರಮೇಶ್ ಕಂಡೆಟ್ಟು,ಮಂಗಳೂರು ಉತ್ತರ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ,ಮಂಗಳೂರು ಪಶ್ಚಿಮ ಶಕ್ತಿ ಕೇಂದ್ರ ಅಧ್ಯಕ್ಷ ಅನಿಲ್,ಮಂಗಳೂರು ಪಶ್ಚಿಮ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ದೇವದಾಸ್ ಶೆಟ್ಟಿ,ಮಂಗಳೂರು ಪೂರ್ವ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅಜಯ್,ಕಾರ್ಯದರ್ಶಿ ರಿತೇಶ್ ದಾಸ್,ಶಕ್ತಿ ಕೇಂದ್ರ ಪ್ರಮುಖ್ ಕಿಶೋರ್,ದೇರೆಬೇಲ್ ನೈರುತ್ಯ ವಾರ್ಡ್ ಕಾರ್ಯದರ್ಶಿ ಕಿರಣ್ ಶೆಟ್ಟಿ ಉರ್ವ,ವಾರ್ಡ್ ಉಸ್ತುವಾರಿ ಗಣೇಶ್ ಮತ್ತಿತರ ಪ್ರಮುಖರು ಜೊತೆಗಿದ್ದರು.

ಅತ್ತಾವರ ಕಟ್ಟಪುಣಿ ಪರಿಸರದಲ್ಲಿ ಪರಿಶೀಲನೆ :

ವೈದ್ಯನಾಥ ನಗರ ಅತ್ತಾವರ ಕಟ್ಟಪುಣಿ ಪರಿಸರದಲ್ಲಿ ಮೊನ್ನೆ ಸುರಿದ ಎರಡು ಮನೆಗಳು ಸಂಪೂರ್ಣವಾಗಿ ಧರೆಗುರುಳಿದೆ.ಮನೆ ಮಂದಿ ಹೊರಗಿದ್ದ ಸಂಧರ್ಭ ಅವಘಡ ಸಂಭವಿಸಿದೆ.ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.ಸ್ಥಳಕ್ಕೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೇಟಿ ನೀಡಿ ಮನೆ ಮಂದಿಯನ್ನು ಸಂತೈಸಿದರು.

ಸ್ಥಳೀಯ ಕಾರ್ಪೋರೇಟರ್ ದಿವಾಕರ್ ಪಾಂಡೇಶ್ವರ ಅವರ ನೇತೃತ್ವದಲ್ಲಿ ಮತ್ತು ಶಾಸಕರ ಸಹಭಾಗಿತ್ವದಲ್ಲಿ ನೊಂದ ಕುಟುಂಬಕ್ಕೆ ಅಕ್ಕಿ ವಿತರಿಸಲಾಯಿತು.ಈ ಸಂಧರ್ಭ ಸ್ಥಳೀಯ ಕಾರ್ಪೋರೇಟರ್ ದಿವಾಕರ್,ಭಾರತೀಯ ಜನತಾ ಪಕ್ಷದ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ,ಶಕ್ತಿ ಕೇಂದ್ರ ಅಧ್ಯಕ್ಷ ಅನಿಲ್,ಪ್ರಧಾನ ಕಾರ್ಯದರ್ಶಿ ನಿತಿನ್ ಮತ್ತು ಮುಖಂಡರಾದ ಪ್ರಶಾಂತ್,ಅಶ್ವಿನ್ ಉಪಸ್ಥಿತರಿದ್ದರು.

Comments are closed.