ಕರಾವಳಿ

ಅನುಮಾನಾಸ್ಪದವಾಗಿ ಮೃತಪಟ್ಟ ದನದ ವ್ಯಾಪಾರಿ; ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬಿಕರು

Pinterest LinkedIn Tumblr

ಉಡುಪಿ: ಉಡುಪಿಯಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ದನದ ವ್ಯಾಪರಿಯೋರ್ವರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಉಡುಪಿಯ ಪೆರ್ಡೂರು ಎಂಬಲ್ಲಿ ನಿನ್ನೆ ತಡ ರಾತ್ರಿ ಸ್ಕೋರ್ಪಿಯೋ ಹಾಗೂ ಒಮ್ನಿ ಕಾರಿನಲ್ಲಿ ಸುಮಾರು 12 ಕರುಗಳನ್ನ ಅಕ್ರಮವಾಗಿ ಸಾಗಿಸ್ತಾ ಇದ್ರು. ಈ ಸಂದರ್ಭದಲ್ಲಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರನ್ನ‌ ಕಂಡ ದನಗಳ್ಳರು ವಾಹನ ರಿವರ್ಸ್ ಓಡಿಸಿದ್ದಾರೆ.

ಇದರ ಮಧ್ಯೆ ಸ್ಕಾರ್ಪಿಯೋ ಕಾರು‌ ಮಗುಚಿ ಬಿದ್ದ ಪರಿಣಾಮ ಗಾಡಿಯಲ್ಲಿದ್ದ ಮೂವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಪರಾರಿಯಾಗಿದ್ದಾರೆ. ಆದರೆ ಗಾಡಿಯಲ್ಲಿದ್ದ ಹುಸೇನಬ್ಬ ಇನ್ನೊಂದು ಕಡೆಗೆ ಓಡಿದ್ದರು. ಆದರೆ ಹುಸೆನಬ್ಬ ಶವ ಪಕ್ಕದಲ್ಲೆ ಇದ್ದ ತೋಟದಲ್ಲಿ ಪತ್ತೆಯಾಗಿದೆ.

ಸುಮಾರು ೬೫ ವರುಷದ ಹುಸೆನಬ್ಬ ಮೂಲತಃ ಮಂಗಳೂರಿನ ಜೋಕಟ್ಟೆ ನಿವಾಸಿಯಾಗಿದ್ದು ಕಳೆದ ಮೂವತ್ತು ವರುಷಗಳಿಂದ ದನದ ವ್ಯಾಪರ ಮಾಡುತ್ತಿದ್ದು ಉಡುಪಿಯ ಪೆರ್ಡೂರು ಭಾಗದಲ್ಲಿ ಚಿರ ಪರಿಚಿತರಾಗಿದ್ದರು ಅಂತಾರೆ ಹುಸೇನಬ್ಬ ಸಂಬಂಧಿಕರು. ಈ ಹಿಂದೆ ಕೂಡ ಹುಸೇನಬ್ಬರಿಗೆ ಕೆಲವೊಂದು ಸಂಘಟನೆ ಯವರು ಹಲ್ಲೆ‌ ನಡೆಸಿ ದೌರ್ಜನ್ಯ ಎಸಗಿದ್ದರು. ನಿನ್ನೆ ನಡೆದ ಘಟನೆಯಲ್ಲು ಸ್ಥಳೀಯ ಯುವಕರ ಕೈವಾಡವಿದೆ,ಹುಸೇನಬ್ಬ ತಲೆ ಹಾಗೂ ಕಣ್ಣಿನ ಭಾಗದಲ್ಲಿ ಗಾಯದ ಗುರುತು ಇದೆ.ಹೀಗಾಗಿ ಅಪರಿಚಿತರ ಗುಂಪು ಹುಸೈನಬ್ಬ ರನ್ನ‌ ಹಲ್ಲೆ ನಡೆಸಿ‌ಕೊಲೆಗೈದಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೀಗ ಸಂಬಂಧಿಕರು ಪೆರ್ಡೂರು ಠಾಣೆಯಲ್ಲಿ ಈ ಬಗ್ಗೆ ದೂರನ್ನು ಕೂಡ ದಾಖಲಿಸಿದ್ದಾರೆ. ಎಸ್ಪಿ ಕೂಡ ಈ ಬಗ್ಗೆ ಪರಿಶೀಲನೆ ನಡೆಸಿ ಕೂಲಂಕುಷ ತನಿಖೆ ಭರವಸೆ ನೀಡಿದ್ದಾರೆ.

ಪೊಲೀಸರು ದನ‌ಗಳ್ಳತನ ಪ್ರಕರಣ ಹಾಗೂ ಸಂಶಯಸ್ಪದವಾಗಿ‌ ಕೊಲೆ ಯಾಗಿರುವ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ.

Comments are closed.