ಕರಾವಳಿ

ತಾಜಾ ಅನಾನಸ್ ಹಣ್ಣಿನಿಂದ ಸಿಗುವ ಉಪಯೋಗ ಬಲ್ಲಿರಾ..?

Pinterest LinkedIn Tumblr

* ದಿನವೂ ಊಟದ ನಂತರ ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಕರಿಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಅಜೀರ್ಣ ರೋಗ ದೂರವಾಗುತ್ತದೆ.
*ಅನಾನಸ್ ಪಿತ್ತವನ್ನು ಶಮನಗೊಳಿಸುತ್ತದೆ. ಇದನ್ನು ಬರಿಹೊಟ್ಟೆಯಲ್ಲಿ ಯಾವಾಗಲೂ ತಿನ್ನಬಾರದು. ಗರ್ಭಿಣಿ ಸ್ತ್ರೀಯರು ಅನಾನಸ್ನ್ನು ಎಂದಿಗೂ ತಿನ್ನಬಾರದು. ಇದು ಗರ್ಭವನ್ನು ಬೆಳೆಯಲು ಬಿಡುವುದಿಲ್ಲ ಅದನ್ನು ಸಂಕುಚಿತಗೊಲಿಸುತ್ತದೆ. ಅದರಿಂದಾಗಿ ಗರ್ಭಸ್ರಾವ ಆಗುವ ಸಂಭವಗಳುಂಟು.
* ಅನಾನಸು ಹಣ್ಣನ್ನು ಚಿಕ್ಕ ಮಕ್ಕಳು ತಪ್ಪದೆ ಉಪಯೋಗಿಸಿದರೆ ಅವರಿಗೆ ಗಂಟಲಿನ ರೋಗವು ಬರುವುದಿಲ್ಲ.
* ಆನೆಕಾಲು ರೋಗ, ಕುಸ್ಟ,ಕಜ್ಜಿ, ಎಕ್ಸಿಮ ರೋಗಗಳಲ್ಲಿ ಅನಾನಸು ಹಣ್ಣಿನ ರಸವನ್ನು ಲೇಪಿಸಿದರೆ ಹಿತಕರ.
* ಕಾಮಾಲೆ, ಯಕೃತ್ ವಿಕಾರ, ಗನೋರಿಯ,ಮೂತ್ರಕೋಶ ವ್ಯಾಧಿ, ಮೂತ್ರಾಷ್ಮರಿ,ಹೃದಯದ ಅನಿಯಮಿತ ಬಡಿತ…ಇತ್ಯಾದಿಗಳಲ್ಲಿ ಅನಾನಸಿನಿಂದ ಮಹತ್ತರವಾದ ಗುಣ ಕಂಡು ಬಂದಿದೆ
* ಊಟದ ನಂತರ ಈ ಹಣ್ಣನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.
* ಅನನಾಸಿನಲ್ಲಿ ಹೇರಳವಾಗಿ ನೈಸರ್ಗಿಕ ಪೊಟ್ಯಾಸಿಯಂ ಇರುವುದರಿಂದ ಮೂತ್ರ ಕಟ್ಟುವಿಕೆ, ಉರಿ ಮೂತ್ರ ಮುಂತಾದ ರೋಗಗಳಲ್ಲಿ ಗುಣಕಾರಿ.
* ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಧೂಮಪಾನದಿಂದ ಉಂಟಾಗುವ ಅನೇಕ ದುಷ್ಪರಿಣಾಮಗಳು ದೂರವಾಗುತ್ತವೆ.
* ಅನಾನಸ್ ಹಣ್ಣಿನ ರಸವನ್ನು ಕಜ್ಜಿ, ತುರಿಕೆ ಇದ್ದಲ್ಲಿ ಹಚ್ಚಿ ತಿಕ್ಕಿದರೆ ವಾಸಿಯಾಗುತ್ತವೆ.
* ಅನಾನಸ್ ಹಣ್ಣಿಗೆ ಕರಿಮೆಣಸಿನ ಪುಡಿಯನ್ನು ಹಾಕಿ ಸೇವಿಸಿದರೆ ಕೆಮ್ಮು, ಕಫಾ ಕಡಿಮೆ ಆಗುತ್ತದೆ.
*ಅನಾನಸ್ ಹಣ್ಣಿನ ಹೋಳುಗಳನ್ನು ಜೇನುತುಪ್ಪದೊಡನೆ ಸೇವಿಸುವುದರಿಂದ ಯಕೃತ್ತಿನ ದೋಷ ಮತ್ತು ಅರಿಶಿನ ಕಾಮಾಲೆ ಗುಣವಾಗುತ್ತದೆ.
* ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಆಮ್ಲಪಿತ್ತ ( ಅಸಿಡಿಟಿ ) ದೂರವಾಗುತ್ತದೆ.
* ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಗಂಟಲುಬೇನೆ ಗುಣವಾಗುತ್ತದೆ. ಪ್ರತಿದಿನ ತಾಜಾ ಅನಾನಸ್ ಹಣ್ಣನ್ನು ಸೇವಿಸುವುದರಿಂದ ಹೃದಯದ ದುರ್ಬಲತೆ ದೂರವಾಗುತ್ತದೆ.
* ಮೂತ್ರ ಕಟ್ಟುವುದು, ಪಿತ್ತಕೋಶ ಊದಿಕೊಳ್ಳುವುದು, ಕಣ್ಣಿನ ಸುತ್ತಮುತ್ತ ಊದಿಕೊಳ್ಳುವುದು ಮುಂತಾದ ತೊಂದರೆಗಳಿಗೆ ತಾಜಾ ಅನಾನಸ್ ಹಣ್ಣನ್ನು ತಿಂದು ಹಾಲು ಕುಡಿಯಬೇಕು. ಬೇರೆ ಏನನ್ನೂ ಸೇವಿಸಬಾರದು. ಹೀಗೆ ಮಾಡುವುದರಿಂದ ಒಂದು ವಾರದಲ್ಲಿ ಗುಣವಾಗುವುದು.

Comments are closed.