ಕರಾವಳಿ

ಕುದ್ರೋಳಿಯಲ್ಲಿ ಮನೆಗೆ ನುಗ್ಗಿ ಮಹಿಳೆಗೆ ಚೂರಿ ಇರಿತ : ಆರೋಪಿ ಸುಹೈಲ್‌ಗಾಗಿ ವ್ಯಾಪಕ ಶೋಧ

Pinterest LinkedIn Tumblr

ಮಂಗಳೂರು, ಮೇ 26: ಮನೆಯೊಂದಕ್ಕೆ ನುಗ್ಗಿದ ಯುವಕನೋರ್ವ ಮಹಿಳೆಗೆ ಚೂರಿಯಿಂದ ಇರಿದು ಹಲ್ಲೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ ನಗರದ ಕುದ್ರೋಳಿಯಲ್ಲಿ ನಡೆದಿದ್ದು, ತಲೆ ಮರೆಸಿರುವ ಆರೋಪಿಗಾಗಿ ಬರ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಚೂರಿಯಿಂದ ಇರಿದು ಪರಾರಿಯಾದ ಆರೋಪಿಯನ್ನು ಉಪ್ಪಳದ ಫಿರ್ದೊಝ್‌ನಗರ ನಿವಾಸಿ ಸುಹೈಲ್ (40) ಎಂದು ಗುರುತಿಸಲಾಗಿದೆ.

ಕುದ್ರೋಳಿ ಜಾಮಿಯಾ ಮಸೀದಿ ಬಳಿಯ ನಿವಾಸಿಯಾಗಿರುವ ವಿವಾಹಿತ ಮಹಿಳೆಯು ಚೂರಿ ಇರಿತದಿಂದ ಗಾಯಗೊಂಡಿದ್ದು, ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಗೊಂಡ ಮಹಿಳೆಯ ಗಂಡ ಮತ್ತು ಮಕ್ಕಳು ಗುರುವಾರ ರಾತ್ರಿ 9:45ರ ವೇಳೆಗೆ ಮಸೀದಿಗೆ ತೆರಳಿದ ಸಂದರ್ಭ ನೋಡಿದ ಆರೋಪಿಯು ಸದ್ರಿ ಮನೆಯ ಬಾಗಿಲು ಬಡಿದಿದ್ದ. ಆವಾಗ ಮಹಿಳೆಯು ಮಸೀದಿಯಿಂದ ಗಂಡ ಮತ್ತು ಮಕ್ಕಳು ಬಂದಿರಬೇಕು ಎಂದು ಭಾವಿಸಿದ್ದರು. ಅಲ್ಲದೆ ಮನೆಯೊಳಗಿದ್ದ ಮಗನೊಬ್ಬ ಬಾಗಿಲು ತೆರೆದಿದ್ದ. ಅಷ್ಟರಲ್ಲಿ ಒಳನುಗ್ಗಿದ ಆರೋಪಿ ಸುಹೈಲ್ ಏಕಾಏಕಿ ಮನೆಯ ಒಳಗೆ ಪ್ರವೇಶಿಸಿ ಮಹಿಳೆಗೆ ಬೆದರಿಕೆ ಹಾಕಿದ್ದಲ್ಲದೆ ಹಲ್ಲೆಗೆ ಯತ್ನಿಸಿದ್ದ. ಅಲ್ಲದೆ ಅಡುಗೆ ಮನೆಗೆ ನುಗ್ಗಿ ಚೂರಿ ತಂದು ಇರಿಯಲು ಮುಂದಾದಾಗ, ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಮಹಿಳೆಯ ಕೈಗಳಿಗೆ ಗಾಯವಾಗಿದೆ.

ಅಪಾಯದ ಮುನ್ಸೂಚನೆ ಅರಿತ ಮಹಿಳೆ ಮತ್ತು ಆಕೆಯ ಮಗ ಬೊಬ್ಬೆ ಹಾಕಿದ ವೇಳೆ ಆರೋಪಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ತಕ್ಷಣ ಸ್ಥಳೀಯರು ಆಗಮಿಸಿ ಮಹಿಳೆ ಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಶೋಧ ಮುಂದುವರಿದಿದೆ.

Comments are closed.