ಕರಾವಳಿ

ಕೆಮ್ಮಿನಿಂದ ಅಕಸ್ಮಿಕ ಬರುವ ಎದೆ ನೋವು ನಿವಾರಣೆ

Pinterest LinkedIn Tumblr

ಇಂದಿನ ದಿನಗಳಲ್ಲಿ ಹೃದಯರೋಗಗಳಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ಕಾಲದಲ್ಲಿ 60 ವರ್ಷ ವಯಸ್ಸಿನ ನಂತರವೇ ಬರುತ್ತಿದ್ದ ಹೃದಯಾಘಾತ, ಇಂದು ಸಣ್ಣ ವಯಸ್ಸಿಗೇ ಬರುತ್ತಿದೆ. ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಕೊಲೆಸ್ಟ್ರಾಲ್ , ಮಾನಸಿಕ ಒತ್ತಡ ಕಾರಣವಾಗುತ್ತಿವೆ. ಊಟದ ನಂತರ,ಮೆಟ್ಟಿಲು ಹತ್ತುವಾಗ ಹೀಗೆ ಹಲವು ಸಂದರ್ಭಗಳಲ್ಲಿ ಎದೆ ನೋವು ಕಾಣಿಸಿಕೊಳ್ಳಬಹುದು. ನೋವಿನ ತೀವ್ರತೆಗೆ ಅನುಗುಣವಾಗಿ ಬ್ಯಪಾಸ್ ಸರ್ಜರಿ ಇಲ್ಲವೆ ಆಮಜಿಯೋಪ್ಲಾಸ್ಟಡೀ ಮಾಡುತ್ತಾರೆ. ಇದಕ್ಕೆ ಬದಲಿಯೇ ಇಇಸಿಪಿ.

1.ರಾತ್ರಿ 7.25 ರ ಸಮಯ ಎಂದಿಗಿಂತಲೂ ಅಂದು ಹೆಚ್ಚಿಗೆ ಕೆಲಸಮಾಡಿ ವಾಪಸ್ಸಾಗುತ್ತೀರಿ.
2. ನೀವು ಬಹಳ ಸುಸ್ತಾಗಿದ್ದೀರಿ.
3. ಇದ್ದಕ್ಕಿದ್ದಂತೆ ನಿಮ್ಮ ಎದೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ನೋವು ನಿಮ್ಮ ದವಡೆಯಿಂದ ನಿಮ್ಮ ಕೈಗಳ ವರೆಗೂ ಹರಡುತ್ತದೆ. ನಿಮ್ಮ ಮನೆಯಿಂದ ಆಸ್ಪತ್ರೆ 5 ಕಿ.ಮೀ ದೂರದಲ್ಲಿದೆ ಎಂದು ಭಾವಿಸೋಣ.
4. ದುರದೃಷ್ಟವಶಾತ್ . ನೀವು ಅಲ್ಲಿಗೆ ಸೇರಬಹುದೋ ಇಲ್ಲವೋ ನಿಮಗೆ ಗೊತ್ತಾಗುತ್ತಿಲ್ಲ.
5. ನೀವು ಸಿಪಿಆರ್ ಶಿಕ್ಷಣ ಪಡೆದಿರುತ್ತೀರಿ. ಆದರೂ ಅದನ್ನು ನಿಮಗೆ ನೀವು ಹೇಗೆ ಮಾಡಿಕೊಳ್ಳಬೇಕೆಂದು ತಿಳಿಯುತ್ತಿಲ್ಲ.
6. ನಿಮ್ಮೊಂದಿಗೆ ಯಾರೂ ಇಲ್ಲ. ಹೃದಯದ ನೋವನ್ನು ಭರಿಸುವುದಾದರೂ ಹೇಗೆ. ಹೃದಯದ ಬಡಿತದಲ್ಲಿ ಏರಿಳಿತ ವುಂಟಾಗುತ್ತಿದೆ. ಬಹಳ ಸುಸ್ತಾಗಿದ್ದೀರಿ. ಇನ್ನು ನೀವು ಪ್ರಜ್ಞಾಹಿನರಾಗಲು ಕೇವಲ 10 ಸೆಕೆಂಡ್ ಗಳು ಮಾತ್ರ ಇವೆ.
7. ಆದರೂ ಸಹ ರೋಗಿ ಪದೇ ಪದೇ ಕೆಮ್ಮಿ ತಮಗೆ ತಾವೇ ಸಹಾಯ ಮಾಡಿಕೊಳ್ಳಬಹುದು.
ಕೆಮ್ಮುವಾಗ ದೀರ್ಘವಾಗಿ ಉಸಿರನ್ನು ಎಳೆದುಕೊಳ್ಳಬೇಕು. ಕೆಮ್ಮು ಗಂಟಲಿನ ಒಳಭಾಗದಿಂದ ಬರುವಂತೆ ಇರಬೇಕು. ಪ್ರತೀ ಎರಡು ಸೆಕೆಂಡುಗಳಿಗೊಮ್ಮೆ, ಉಸಿರೆಳೆದುಕೊಳ್ಳುತ್ತಾ ಕೆಮ್ಮುತ್ತಿರಬೇಕು.
8. ಜೋರಾಗಿ ಉಸಿರಾಡುವುದರಿಂದ ಶ್ವಾಸಕೋಶಗಳಿಗೆ ಅಧಿಕ ಆಮ್ಲಜನಕ ಸರಬರಾಜಾಗುತ್ತದೆ. ಹೃದಯದ ಮೇಲೆ ಒತ್ತಡ ಬಿದ್ದು ರಕ್ತಪ್ರಸಾರ ಅಧಿಕವಾಗುತ್ತದೆ. ಹಿಂಡುವಂತಹ ನೋವು ಸಹ ಕಡಿಮೆಯಾಗುತ್ತದೆ. ನಂತರ ಯಾವುದಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು.
9.ಈ ವಿಷಯವನ್ನು ಆದಷ್ಟು ಹೆಚ್ಚು ಮಂದಿಗೆ ತಿಳಿಸಿ. ಅವರ ಪ್ರಾಣವನ್ನು ಕಾಪಾಡಿ.

Comments are closed.