ಕರಾವಳಿ

ಯಕ್ಷ ಸಂಘಟಕ ಪಳ್ಳಿ ಕಿಶನ್ ಹೆಗ್ಡೆ ಅವರಿಗೆ ಕಲ್ಕೂರ ಯಜಮಾನ ಸಿರಿ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮಂಗಳೂರು : ಖ್ಯಾತಯಕ್ಷ ಸಂಘಟಕ ಸಾಲಿಗ್ರಾಮ ಮೇಳ ಸಹಿತ‌ ಎಂಟು ತಿರುಗಾಟದ ಮೇಳಗಳ ಯಜಮಾನಿಕೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಯಶಸ್ಸಿನ ಸರದಾರಕಲಾಪೋಷಕರಾದ ಪಳ್ಳಿ ಕಿಶನ್ ಹೆಗಡೆ‌ಅವರಿಗೆಕಲ್ಕೂರ ಪ್ರತಿಷ್ಠಾನದಿಂದ ‘ಕಲ್ಕೂರ ಯಜಮಾನ ಸಿರಿ ಪ್ರಶಸ್ತಿ ನೀಡಿಗೌರವಿಸಲಾಯ್ತು.

ಇತ್ತೀಚೆಗೆ ನಗರದ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ‌ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪ್ರಶಸ್ತಿಪ್ರದಾನ ಮಾಡಲಾಯ್ತು.ಕಲ್ಕೂರ ಪ್ರತಿಷ್ಠಾನ (ರಿ) ಹಾಗೂ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ‌ಎಸ್. ಪ್ರದೀಪಕುಮಾರಕಲ್ಕೂರ‌ಅವರು‌ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಮಹಾಬಲೇಶ್ವರ‌ಎಂ.ಎಸ್.ಅವರು ಪ್ರಶಸ್ತಿ ಪ್ರದಾನ ಮಾಡಿಕಿಶನ್ ಹೆಗಡೆಯವರನ್ನು ಅಭಿನಂದಿಸಿದರು.

ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ್‌ರಮಾನಾಥ ಹೆಗ್ಡೆ, ಹಳೆಕೋಟೆ ಮಾರಿಯಮ್ಮದೇವಸ್ಥಾನದ ಮೊಕ್ತೇಸರ್‌ತಾರಾನಾಥ ಶೆಟ್ಟಿ ಬೋಳಾರ, ಉದ್ಯಮಿಗಳಾದ ರತ್ನಾಕರಜೈನ್, ಪ್ರಶಾಂತ್ ಶೇಟ್, ಯಕ್ಷಗಾನ ಬಯಲಾಟ‌ಅಕಾಡೆಮಿಯ ಮಾಜಿ‌ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ, ಪೊಳಲಿ ನಿತ್ಯಾನಂದಕಾರಂತ, ಕದ್ರಿ ನವನೀತ ಶೆಟ್ಟಿ, ಸುಧಾಕರರಾವ್ ಪೇಜಾವರ, ಜನಾರ್ದನ ಹಂದೆ, ಶ್ರೀಮತಿ ವಿಜಯಲಕ್ಷ್ಮೀ ಶೆಟ್ಟಿ ಹಾಗೂ ಪೂರ್ಣಿಮಾರಾವ್ ಪೇಜಾವರ ಮೊದಲಾದವರು ಉಪಸ್ಥಿತರಿದ್ದರು.

Comments are closed.