ಕರಾವಳಿ

ದೇವಸ್ಥಾನದ ಕಾಣಿಕೆ ಡಬ್ಬಿ ಕಳವು; ಕೋಟ ಠಾಣೆಯಲ್ಲಿ ದೂರು ದಾಖಲು

Pinterest LinkedIn Tumblr

ಉಡುಪಿ: ಯಕ್ಷೇಶ್ವರಿ ದೇವಸ್ಥಾನದ ಹೊರಭಾಗದ ಕಟ್ಟೆಯ ಮೇಲಿದ್ದ ಕಾಣಿಕೆ ಡಬ್ಬಿ ಒಡೆದು ನಾಲ್ಕು ಸಾವಿರ ಹಣ ಕಳವು ಮಾಡಿದ ಘಟನೆ ಉಡುಪಿ ಜಿಲ್ಲೆಯ ಅಚ್ಲಾಡಿ ಗ್ರಾಮದ ಕೊಲಗೇರಿಯ ಯಕ್ಷೇಶ್ವರಿ ದೇವಸ್ಥಾನದಲ್ಲಿ ನಡೆದಿದೆ.

ರಾಘವೇಂದ್ರ ಗಣಿಗ ಎನ್ನುವವರು ತನ್ನ ಸ್ನೇಹಿತ ಹರೀಶ್‌ ಗಾಣಿಗರವರೊಂದಿಗೆ ಮನೆ ಹತ್ತಿರದ ಯಕ್ಷೇಶ್ವರಿ ದೇವಸ್ಥಾನಕ್ಕೆ ಕೈ ಮುಗಿಯಲು ಹೋದಾಗ ದೇವಸ್ಥಾನದ ಹೊರಭಾಗದಲ್ಲಿರುವ ಚಿಟ್ಟೆಯ ಮೇಲೆ ಇದ್ದ ಕಾಣಿಕೆ ಡಬ್ಬಿಯ ಬೀಗವನ್ನು ಯಾರೋ ಕಳ್ಳರು ಮುರಿದು 4,000/- ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ತಿಳಿದುಬಂದಿದೆ.

ಈ ಕಳ್ಳತನವನ್ನು ಭೀಮ ಹಾಗು ಮೋಹನ ಎಂಬುವವರು ಮಾಡಿರುವುದಾಗಿ ಗುಮಾನಿ ಇರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Comments are closed.