ಕರಾವಳಿ

ಗರ್ಭಧಾರಣೆಯಲ್ಲಿ ಪನೀರ್ ಸೇವನೆಯ ಉಪಯೋಗಗಳು ಮತ್ತು ತೆಗೆದುಕೊಳ್ಳಬೇಕಾದ ಎಚ್ಚರಿಕೆ..!

Pinterest LinkedIn Tumblr

ಪನೀರ್ ಒಂದು ಜನಪ್ರಿಯ ಆಹಾರ. ಅದರಲ್ಲೂ ದಕ್ಷಿಣ ಏಷ್ಯಾದಲ್ಲಿ ಇದನ್ನು ಬಹಳಷ್ಟು ಜನರು ಇಷ್ಟಪಟ್ಟು ಸೇವಿಸುತ್ತಾರೆ. ಹಾಲಿನ ಉತ್ಪನ್ನವಾದ ಇದು ಗರ್ಭಧಾರಣೆಯಲ್ಲಿ ನಿಮ್ಮ ಆಹಾರ ಪಟ್ಟಿಯಲ್ಲಿ ಇರಬೇಕಾ ಎಂಬುದೇ ಇಲ್ಲಿನ ಪ್ರಶ್ನೆ. ಗರ್ಭಧಾರಣೆಯಲ್ಲಿ ಪನೀರ್ ಸೇವನೆ ಇಂದ ಆಗುವ ಉಪಯೋಗಗಳು, ಅಡ್ಡಪರಿಣಾಮಗಳು ಮತ್ತು ಸೇವಿಸುವಾಗ ನೀವು ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕ್ರಮಗಳು ಏನು ಎಂಬುದನ್ನು ನಾವು ಹೇಳುತ್ತೇವೆ ನೋಡಿ.

ಪನೀರ್ ಸೇವನೆಯಿಂದ ಉಂಟಾಗುವ ಉಪಯೋಗಗಳು
೧. ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನ ಒದಗಿಸುತ್ತದೆ: ನಿಮ್ಮ ಮಗುವಿನ ಉತ್ತಮವಾದ ಸ್ನಾಯುಗಳು ಮತ್ತು ಅಂಗಾಂಶಗಳ ಬೆಳವಣಿಗೆಗಾಗಿ ಗರ್ಭಧಾರಣೆಯ ಮೊದಲ ಹಂತಗಳಲ್ಲಿ ಪನೀರ್ ಸೇವಿಸುವುದು ತುಂಬಾನೇ ಒಳ್ಳೆಯದು. ಎಲ್ಲದಕ್ಕಿಂತ ಮಿಗಿಲಾಗಿ ಇದರಲ್ಲಿ ವಿಟಮಿನ್ B, ಫೋಸ್ಫೋರೌಸ್ ಇರುವುದರಿಂದ ಪನೀರ್ ಸೇವನೆ ಒಳ್ಳೆಯದು.

೨. ತೂಕ ಸಂಭಾಳಿಸುವುದರಲ್ಲಿ ಸಹಾಯ ಮಾಡುತ್ತದೆ: ನಿಮಗೆ ತಡರಾತ್ರಿ ಏನಾದರೂ ತಿನ್ನಬೇಕೆಂಬ ಬಯಕೆ ಉಂಟಾದಾಗ, ಹಸಿ ಮೊಟ್ಟೆ ಅಥವಾ ಇನ್ನೇನಾದರೂ ತಿನ್ನುವ ಬದಲು, ಪರ್ಯಾಯವಾಗಿ ಪನೀರ್ ಸೇವಿಸಬಹುದು. ಇದು ಒಂದು ಅತ್ಯುತ್ತಮವಾದ ಸ್ನ್ಯಾಕ್ ಆಗಿದ್ದು, ಇದು ನಿಮ್ಮ ದೇಹಕ್ಕೆ ಹೆಚ್ಚುವರಿ ಕ್ಯಾಲೊರಿಗಳನ್ನೂ ಸೇರಿಸುವುದಿಲ್ಲ. ಹೀಗಾಗಿ ನಿಮಗೆ ಏನಾದರೂ ಕುರುಕಲು ತಿನ್ನಬೇಕು ಎಂದೆನಿಸಿದರೆ ಆರೋಗ್ಯಕರವಾದ ಪನೀರ್ ಮೊರೆ ಹೋಗಿ.

೩. ಮಗುವಿನ ಹಲ್ಲುಗಳು ಮತ್ತು ಮೂಳೆಗಳ ಬೆಳವಣಿಗೆಗೆ ಸಹಕಾರಿ:ಪನೀರ್ ಅಲ್ಲಿ ಯೆಥೇಚ್ಛವಾಗಿ ಫೋಸ್ಫೋರೌಸ್ ಮತ್ತು ಕ್ಯಾಲ್ಸಿಯಂ ಇರುವ ಕಾರಣ, ಇದು ಭ್ರೂಣದ ಆರೋಗ್ಯಕರ ದಂತ ಮತ್ತು ಮೂಳೆಗಳ ಬೆಳವಣಿಗೆಗೆ ತುಂಬಾನೇ ಸಹಕಾರಿ. ಅಲ್ಲದೆ ಪನೀರ್ ಇಂದ ಗರ್ಭಿಣಿ ದೇಹದಲ್ಲಿ ಉಂಟಾಗುವ ಡಿಮಿನರಲೈಸೇಶನ್ ಅನ್ನು ಕೂಡ ತಡೆಗಟ್ಟುತ್ತದೆ.

೪. ಅದ್ಭುತವಾದ ಕ್ಯಾಲ್ಸಿಯಂ ಪೂರೈಕೆ: ಗರ್ಭಧಾರಣೆ ವೇಳೆ ತುಂಬಾನೇ ಮುಖ್ಯವಾದ ಮತ್ತು ಗಮನವಹಿಸಬೇಕಾದ ಮಿನರಲ್ ಎಂದರೆ ಅದು ಕ್ಯಾಲ್ಸಿಯಂ ಆಗಿರುತ್ತದೆ. ಕ್ಯಾಲ್ಸಿಯಂ ಕೇವಲ ನಿಮ್ಮ ಮೊಲೆಗಳನ್ನ ಗಟ್ಟಿ ಮಾಡುವುದಷ್ಟೇ ಅಲ್ಲದೆ, ಇದು ನಿಮ್ಮ ನರಮಂಡಲ ಮತ್ತು ರಕ್ತಪರಿಚಲನೆಯ ಕಾರ್ಯಗಳನ್ನ ವೃದ್ಧಿಸುತ್ತದೆ.

೫. ಬರ್ತ್ ಡಿಫೆಕ್ಟ್ಸ್ ಅನ್ನು ದೂರ ಇಡುತ್ತದೆ:ಪನೀರ್ ಅಲ್ಲಿ ಉತ್ತಮ ಪ್ರಮಾಣದ ಒಮೇಗಾ-3 ಫ್ಯಾಟಿ ಆಮ್ಲ ಇದ್ದು, ಇದು ಅಕಾಲಿಕ ಹೆರಿಗೆ ಹೊಂದುವ ಸಾಧ್ಯತೆಗಳನ್ನು ದೂರ ಇಡುತ್ತದೆ.

Comments are closed.