ಕರಾವಳಿ

ಈಜಲು ಹೋದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು

Pinterest LinkedIn Tumblr

ಕುಂದಾಪುರ: ಹೊಳೆಗೆ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಆವರ್ಸೆ ಸಮೀಪದ ಸೀತಾನದಿ ಆನೆಗುಂಡಿ ಎಂಬಲ್ಲಿ ನಡೆದಿದೆ.

ಮಂದರ್ತಿ ಸಮೀಪದ ಮಣಿಕಲ್ಲು ನಿವಾಸಿಗಳಾದ ಕಿರಣ್ ಪೂಜಾರಿ (22)ಹಾಗೂ ವಿಕ್ರಂ ಪೂಜಾರಿ(22 )ಮೃತ ದುರ್ದೈವಿಗಳು.

ಹೋಟೆಲಿನಲ್ಲಿ‌ ಕೆಲಸ ಮಾಡುತ್ತಿದ್ದ ಕಿರಣ್ ಮನೆ ಸಮೀಪ ಧಾರ್ಮಿಕ ಕಾರ್ಯಕ್ರಮವಿದ್ದ ಕಾರಣ ಕೆಲಸಕೆ ರಜೆ ಮಾಡಿದ್ದು ಸ್ನೇಹಿತ ವಿಕ್ರಮ್ ಜೊತೆಗೆ ಆವರ್ಸೆ ಸಂಬಂಧಿಕರ ಮೆನೆಗೆ ತೆರಳಿದ್ದರು. ಬಳಿಕ ಊಟದ ವೇಳೆ ಕೈಕಾಲು ತೊಳೆಯಲು ಹೊಳೆಗೆ ಇಳಿದಾಗ ಈ ದುರಂತ ನಡೆದಿದೆ. ಸ್ಥಳಿಯರು ಸಹಾಯದಿಂದ ಮೃತ ದೇಹಗಳನ್ನ ಮೇಲಕ್ಕೆತ್ತಿದ ಅಗ್ನಿ ಶಾಮಕ ದಳದವರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು.

ಕೋಟ ಪೊಲೀಸ್ ಠಾಣೆಯಲ್ಲಿ‌ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Comments are closed.