ಕರಾವಳಿ

ಮಂಗಳೂರು ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೈ ಭರತ್ ಶೆಟ್ಟಿ ಭರ್ಜರಿ ಜಯ : ಮೊಯ್ದಿನ್ ಬಾವ ಪರಾಜಯ

Pinterest LinkedIn Tumblr

ಮಂಗಳೂರು, ಮೇ.15 : ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೈಯಲ್ಲಿದ್ದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಕೂಡ ಅಚ್ಚರಿಯ ಫಲಿತಾಂಶದೊಂದಿಗೆ ಈ ಬಾರಿ ಬಿಜೆಪಿ ಪಾಲಾಗಿದೆ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಡಾ.ವೈ ಭರತ್ ಶೆಟ್ಟಿ ಅವರು ತಮ್ಮ ಪ್ರತಿಸ್ಫರ್ಧಿ ವಿರುದ್ಧ ಸುಮಾರು 11 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಡಾ.ವೈ ಭರತ್ ಶೆಟ್ಟಿ ಅವರು 39372 ಮತಗಳನ್ನು ಪಡೆದರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಮೊಯ್ದಿನ್ ಬಾವ 27932 ಮತಗಳನ್ನು ಪಡೆಯುವ ಮೂಲಕ ಇಲ್ಲಿ ಪರಾಜಯಗೊಂಡಿದ್ದಾರೆ.

ಮೊಯ್ದಿನ್ ಬಾವ

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐ ಎಂ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮುನೀರ್ ಕಾಟಿಪಳ್ಳ ಅವರು ಬರೀ 880 ಮತಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ.

Comments are closed.