ಕರಾವಳಿ

ಮಂಗಳೂರಿನಲ್ಲಿ ಒಬ್ಬನೇ ವ್ಯಕ್ತಿ ಎರಡು ಕಡೆ ನಕಲಿ ಮತದಾನಕ್ಕೆ ಯತ್ನ : ಪ್ರಕರಣ ದಾಖಲು

Pinterest LinkedIn Tumblr

ಮಂಗಳೂರು, ಮೇ 13: ಒಂದೇ ವ್ಯಕ್ತಿ ಎರಡು ಕಡೆ ಅಕ್ರಮ ಮತ ಚಲಾವಣೆ ಮಾಡಲು ಯತ್ನಿಸಿದ್ದಾನೆ ಎಂಬ ದೂರಿನ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಮಂಗಳೂರಿನ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಕಡೆ ಅಕ್ರಮ ಮತ ಚಲಾವಣೆಗೆ ಯತ್ನಿಸಿದ ಆರೋಪಿಯನ್ನು ಮನೋಜ್ ಬಂಗೇರಾ ಎನ್ನಲಾಗಿದ್ದು, ಈತ ಮಂಗಳೂರು ಶನಿವಾರ ನಡೆದ ಮತದಾನ ಸಂದರ್ಭದಲ್ಲಿ ದಕ್ಷಿಣ ಭಾಗ ಸಂಖ್ಯೆ 75ರಲ್ಲಿ ಕ್ರಮಸಂಖ್ಯೆ 1144, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ 71ರ ಕ್ರಮಸಂಖ್ಯೆ 943ರಲ್ಲಿ ಅಕ್ರಮ ಮತಚಲಾವಣೆಗೆ ಪ್ರಯತ್ನಿಸಿದ್ದಾನೆಂದು ಆರೋಪಿಸಲಾಗಿದೆ.

ನಕಲಿ ಮತದಾನಕ್ಕೆ ಯತ್ನಿಸಿರುವ ಆರೋಪಿಯ ಬಗ್ಗೆ ಸುನೀಲ್ ಕೊಂಚಾಡಿ ಎಂಬವರು ಉರ್ವ ಠಾಣೆಗೆ ದೂರು ನೀಡಿದ್ದು, ಉರ್ವ ಠಾಣಾ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.