ಕರಾವಳಿ

ಮತದಾರ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್

Pinterest LinkedIn Tumblr

ಮಂಗಳೂರು ,ಮೇ. 12: ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಶನಿವಾರ ಮತ ಚಲಾಯಿಸಿ , ಬೆಂಬಲಿಸಿರುವ ಎಲ್ಲ ಮತದಾರ ಬಂಧುಗಳಿಗೆ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್ ಕೃತಜ್ಞತೆ ಸಲ್ಲಿಸಿದ್ದಾರೆ.

ಅತ್ಯಂತ ಉತ್ಸಾಹದಿಂದ ಬೆಳಗ್ಗೆಯಿಂದಲೇ ಮತಗಟ್ಟೆಗಳಿಗೆ ತೆರಳಿ ಅಧಿಕ ಪ್ರಮಾಣದಲ್ಲಿ ಮತದಾನವಾಗಲು ಕ್ಷೇತ್ರದ ಜನರು ಕಾರಣಿಕರ್ತರಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅವರು ಇಟ್ಟಿರುವ ನಂಬಿಕೆಗೆ ಇದು ಸಾಕ್ಷಿಯಾಗಿದೆ. ಮತದಾರ ಬಂಧುಗಳ ಪ್ರೋತ್ಸಾಹ , ಬೆಂಬಲ ಇದೇ ರೀತಿಯಲ್ಲಿ ಮುಂದುವರಿಯಲಿ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ಹಲವು ತಿಂಗಳಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು ನಾಯಕರು ಹಗಲಿರುಳು ಯಾವುದೇ ಫಲಾಪೇಕ್ಷೆಯಿಲ್ಲದೆ ದುಡಿದಿದ್ದಾರೆ. ಪಕ್ಷಕ್ಕೆ ಇದಕ್ಕಿಂತ ದೊಡ್ಡ ಬಲ ಮತ್ತೊಂದಿಲ್ಲ. ಪ್ರಚಾರಕ್ಕಾಗಿ ಮನೆ ಮನೆಗೆ ಹೋದಾಗ ಜನರು ತೋರಿದ ಪ್ರೀತಿ – ವಿಶ್ವಾಸಗಳಿಗೂ ನಾನು ಚಿರಋಣಿಯಾಗಿದ್ದೇನೆ. ಮುಂದೆಯೂ ಸದಾ ನಿಮ್ಮ ಸೇವಕನಾಗಿ, ಮನೆ ಮಗನಾಗಿ ಸೇವೆಗೆ ಸಿದ್ದ ಎಂದು ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.