ಮಂಗಳೂರು, ಮೇ.11; ಚುನಾವಣೆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಬ್ಬದ ವಾತವರಣದಂತೆ ಅಲಂಕಾರ ಮಾಡಲಾಗುವುದು ಎಂದು ಚುನಾವಣಾ ಆರಂಭದಲ್ಲಿ ಜಿಲ್ಲಾಧಿಕಾರಿ ಹೇಳಿರುವಂತೆ ಚುನಾವಣಾ ಬಹಿರಂಗ ಪ್ರಚಾರದ ಅಂತಿಮ ದಿನವಾದ ನಿನ್ನೆಯಿಂದ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಹಬ್ಬದಂತೆ ಕಂಗೊಳಿಸುತ್ತಿದೆ.
ಐದು ವರ್ಷಕ್ಕೊಮ್ಮೆ ಬರುವ ಈ ಚುನಾವಣೆಯನ್ನು ವಿಧಾನಸಭೆ ಚುನಾವಣೆಯ ಮತದಾನ ಹಬ್ಬವಾಗಿ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ತೀರ್ಮಾನಿಸಿದೆ. ಪ್ರಮುಖ ಚುನಾವಣಾ ಕಚೇರಿಯಾಗಿರುವ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯನ್ನು ಕಳೆದ ರಾತ್ರಿಯಿಂದಲೇ ಆಕರ್ಷಕವಾಗಿ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ.
ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಬೆನ್ನಿಗೆ ಚುನಾವಣೆಯಲ್ಲಿ ಪಾಲ್ಗೊಳ್ಳಿ, ಚುನಾವಣೆ ಬಂದಿದೆ ಎಂಬ ಸಂದೇಶ ಸಾರಲು ಜಿಲ್ಲಾಧಿಕಾರಿ ಕಚೇರಿಯನ್ನು ವಿದ್ಯುದ್ದೀಪದಿಂದ ಅಲಂಕರಿಸಲಾಗಿದ್ದು, ಇದೀಗ ಬಣ್ಣದ ಬಣ್ಣದ ದೀಪಗಳಿಂದ ಜಿಲ್ಲಾಧಿಕಾರಿ ಕಚೇರಿ ಕಂಗೊಳಿಸುತ್ತಿದೆ.
Comments are closed.