ಉಡುಪಿ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ -2018 ಕ್ಕೆ ಸಂಬಂಧಿಸಿದಂತೆ, ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಸಲುವಾಗಿ ಮತದಾನ ದಿನದಂದು ಮತದಾರರಿಗೆ ಅನಾನುಕೂಲತೆಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಡೆಯುವ ಸಂತೆ, ಜಾತ್ರೆ,ದನಗಳ ಜಾತ್ರೆ ಇತ್ಯಾದಿಗಳನ್ನು ನಿಷೇಧಿಸುವುದು ಅಗತ್ಯವಾಗಿರುತ್ತದೆ.
ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು ಮೇ 12 ರ ಮತದಾನ ದಿನದಂದು , ಉಡುಪಿ ಜಿಲ್ಲೆಯಲ್ಲಿ ಜರುಗುವ ಸಂತೆ,ಜಾತ್ರೆ,ದನಗಳ ಜಾತ್ರೆ ಇತ್ಯಾದಿಗಳನ್ನು ನಿಷೇಧಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವೆಂದು ಮನಗಂಡು ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144(1) ರನ್ವಯ ಪ್ರದತ್ತವಾದ ಅಧಿಕಾರದಂತೆ ಮತದಾನ ದಿನದಂದು, ಉಡುಪಿ ಜಿಲ್ಲೆಯ ಕುಂದಾಪುರ ಎಪಿಎಂಸಿ ಯಾರ್ಡ ಸಂತೆ ( ವಾರದ ಸಂತೆ) ,ಚೇರ್ಕಾಡಿ(ಪೇತ್ರಿ) ಸಂತೆ ( ವಾರದ ಸಂತೆ) , ಕಾಪು ಯೇಣಗುಡ್ಡೆ(ಕಟಪಾಡಿ) ಸಂತೆ ( ವಾರದ ಸಂತೆ) ,ಕಾರ್ಕಳ ಪುರಸಭಾ ವ್ಯಾಪ್ತಿ ಸಂತೆ ( ವಾರದ ಸಂತೆ) ,ಕಾರ್ಕಳ ಅಜೆಕಾರು ಫಿರ್ಕಾದ ಮುದ್ರಾಡಿ ಗ್ರಾಮದ ಸಂತೆ ( ವಾರದ ಸಂತೆ) ಹಾಗೂ ಉಡುಪಿ ಜಿಲ್ಲೆಯ ಇತರೆ ಎಲ್ಲಾ ಸ್ಥಳಗಳಲ್ಲಿ ಜರುಗುವ ಸಂತೆ, ಜಾತ್ರೆ,ದನಗಳ ಜಾತ್ರೆ ಇತ್ಯಾದಿಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿರುತ್ತಾರೆ.
Comments are closed.