ಕರಾವಳಿ

ಬೀಡಿ ಕಾರ್ಮಿಕರು ಭಯ ಪಡುವ ಅಗತ್ಯವಿಲ್ಲ : ಡಿ.ವೇದವ್ಯಾಸ ಕಾಮತ್

Pinterest LinkedIn Tumblr

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ್ ಕಾಮತ್ ಅವರು ಬೋಳಾರ ವಾರ್ಡ್ ರಲ್ಲಿ ಮನೆ ಮನೆಗೆ ಭೇಟಿ ನೀಡಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುವಂತೆ ಮನವಿ ಮಾಡಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ವೇದವ್ಯಾಸ್ ರವರು ಕೇಂದ್ರ ಸರ್ಕಾರ ಬೀಡಿ ಉದ್ಯಮವನ್ನು ನಿಷೇಧಗೊಳಿಸಲಿದೆ ಎಂದು ಸುಳ್ಳು ಅಪಪ್ರಚಾರ ನಡೆಸುತ್ತಿರುವವ ಮಾತಿಗೆ ಕಿವಿಗೊಡಬೇಡಿ. ಇತ್ತೀಚೆಗೆ ಮಂಗಳೂರಿನ ವ್ಯಕ್ತಿಯೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಸರ್ಕಾರ “ಬೀಡಿ ಉದ್ಯಮವನ್ನು ನಿಷೇಧಗೊಳಿಸುವ ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಗೃಹ ಉದ್ಯಮಕ್ಕೆ ಇನ್ನೂ ಹೆಚ್ಚಿನ ಬೆಂಬಲ ನೀಡಿ ಬಡ ಹಾಗೂ ಮಧ್ಯಮ ವರ್ಗದವರನ್ನು ಸ್ವಾವಲಂಭಿಗಳನ್ನಾಗಿಸುವ ಕಾರ್ಯಕ್ಕೆ ಒತ್ತು ನೀಡಲಿದ್ದೇವೆ ಎಂಬ ಮಾಹಿತಿ ಬಂದಿದೆ” ಎಂದು ವೇದವ್ಯಾಸ್ ಕಾಮತ್ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಹ ಸಂಚಾಲಕ್ ಶ್ರೀ ರವಿಶಂಕರ್ ಮಿಜಾರ್, ಪ್ರೇಮಾನಂದ ಶೆಟ್ಟಿ, ಶಿವ ಪ್ರಸಾದ್, ಗಿರಿ ಪ್ರಸಾದ್, ಸುಧೀಂದ್ರ, ವಸಂತ್ ಜೆ ಪೂಜಾರಿ, ಸಾತ್ವಿಕ್, ಅಜಿತ್, ಭಾಸ್ಕರ್ ಚಂದ್ರ ಶೆಟ್ಟಿ, ಲತಾ.ಕೆ.ರಾವ್, ಕಾರ್ತಿಕ್, ದಯಾನಂದ್, ಗಿರೀಶ್ ಮುಂತಾದವರು ಉಪಸ್ಥಿತರಿದ್ದರು.

Comments are closed.