ಕರಾವಳಿ

ಕೋಟೇಶ್ವರದಲ್ಲಿ ರೋಡ್ ಶೋ ಮೂಲಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭರ್ಜರಿ ಮತಪ್ರಚಾರ!

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಕೋಟೆಶ್ವರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮಂಗಳವಾರ ಸಂಜೆ ಅಬ್ಬರದ ಪ್ರಚಾರ ನಡೆಸಿದರು. ಕೋಟೇಶ್ವರದ ಸರಕಾರಿ ಶಾಲೆ ಬಳಿಯಿಂದ ಕುಂದಾಪುರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ರೋಡ್ ಶೋ ನಡೆಸಿದರು.

ಕಳೆದ ನಾಲ್ಕು ಅವಧಿಯಲ್ಲಿ ಶಾಸಕರಾಗಿರುವ ಹಾಲಾಡಿಯವರ ಮತಪ್ರಚಾರಕ್ಕೆ ಮಧ್ಯಪ್ರದೇಶ ಸಂಸದ ಗಣೇಶ್ ಸಿಂಗ್ ಜಿ. ಸಾಥ್ ನೀಡಿದ್ದಲ್ಲದೇ ನೂರಾರುಮಂದಿ ಕಾರ್ಯಕರ್ತರು, ಅಭಿಮಾನಿಗಳು ಜೊತೆಗಿದ್ದರು. ಮತಪ್ರಚಾರದ ವೇಳೆ ಮೋದಿ ಗುಣಗಾನ, ಅಭಿಮಾನಿಗಳಿಂದ ಸಖತ್ ಸ್ಟೆಪ್ ಕಂಡುಬಂತು.

ಈ ಸಂದರ್ಭ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಮುಖಂಡರಾದ ಕಿರಣ್ ಕುಮಾರ್ ಕೊಡ್ಗಿ, ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ಸದಾನಂದ ಬಳ್ಕೂರು, ಸುನೀಲ್ ಶೆಟ್ಟಿ ಹೇರಿಕುದ್ರು, ಸತೀಶ್ ಪೂಜಾರಿ ವಕ್ವಾಡಿ, ಪ್ರೇಮಾನಂದ ಶೆಟ್ಟಿ ಕಟ್ಕೆರೆ, ಮಂಜು ಬಿಲ್ಲವ, ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್, ಜಿ.ಪಂ ಸದಸ್ಯೆಯರಾದ ಶ್ರೀಲತಾ ಸುರೇಶ್ ಶೆಟ್ಟಿ, ಲಕ್ಷ್ಮಿ ಮಂಜು ಬಿಲ್ಲವ, ತಾ.ಪಂ ಹಾಗೂ ಗ್ರಾ,ಪಂ ಪ್ರತಿನಿಧಿಗಳಿದ್ದರು.

ಚಿತ್ರ, ವರದಿ- ಯೋಗೀಶ್ ಕುಂಭಾಸಿ

Comments are closed.