ಕರಾವಳಿ

ಪದೇ ಪದೇ ಕಾಡುವ ಹೊಟ್ಟೆಯುರಿ ನಿವಾರಣೆಗೆ ಸರಳ ಟಿಪ್ಸ್ ….!

Pinterest LinkedIn Tumblr

ಕೆಲವರು ಹೊಟ್ಟೆ ಉರಿಯುತ್ತಿದೆಯೆಂದು ಆಗಾಗ್ಗೆ ಹೇಳುತ್ತಿರುತ್ತಾರೆ. ಹೀಗೆ ಹೊಟ್ಟೆಯಲ್ಲಿ ಉರಿಬರಲು ಹಲವು ಕಾರಣಗಳಿವೆ. ಸರಿಯಾದ ಸಮಯಕ್ಕೆ ಊಟ ಮಾಡದಿರುವುದು, ಅತಿಯಾದ ಧೂಮಪಾನ, ಮದ್ಯಸೇವಿಸುವುದು, ರಸ್ತೆ ಬದಿಯಲ್ಲಿ ಮಾರಲ್ಪಡುವ ತಿಂಡಿಗಳನ್ನು ತಿನ್ನುವುದು, ಫಾಸ್ಟ್ ಫುಡ್ ತಿನ್ನುವುದು ಹೀಗೆ ಹಲವಾರು ಕಾರಣಗಳಿಂದ ಹೊಟ್ಟೆಯುರಿ ಕಾಣಿಸಿಕೊಳ್ಳುತ್ತದೆ. ಯಾವಾಗಲೋ ಒಮ್ಮೆ ಹೊಟ್ಟೆ ಉರಿಯುತ್ತದೆಂದು ಅಲಕ್ಷ್ಯ ಮಾಡಿ, ಮೇಲೆ ತಿಳಿಸಿದ ಅಭ್ಯಾಸಗಳನ್ನು ಮುಂದುವರಿಸುವುದರಿಂದ ಹೊಟ್ಟೆಯುರಿ ಮರುಕಳಿಸುವ ಸಾಧ್ಯತೆಗಳಿವೆ. ಹೀಗೆ ಪದೇ ಪದೇ ಹೊಟ್ಟೆಯುರಿ ಬರುತ್ತಿದ್ದರೆ, ಅಲ್ಸರ್ ಆಗಿ, ಹೊಟ್ಟೆಯಲ್ಲಿ ಕ್ಯಾನ್ಸರ್ ಆದರೂ ಆಗಬಹುದು.

ಆದರೆ, ಈ ಕೆಳಗೆ ತಿಳಿಸಲಾಗಿರುವ ಸುಲಭವಾದ ಕ್ರಮಗಳನ್ನು ಅನುಸರಿಸುವುದರಿಂದ ಹೊಟ್ಟೆಯುರಿಯನ್ನು ತಡೆಗಟ್ಟಬಹುದು.

ಅತೀ ಸುಲಭವಾದ ಸಲಹೆಯೆಂದರೆ…ಒಂದು ಲೋಟ ನೀರಿಗೆ ಸಕ್ಕರೆ ಬೆರೆಸಿ ಕುಡಿಯುವುದು. ಉರಿ ಕಡಿಮೆಯಾಗದಿದ್ದರೆ, ಮತ್ತೊಮ್ಮೆ ಕುಡಿಯಿರಿ.

ಹಸಿಶುಂಠಿ ಹೊಟ್ಟಿಯುರಿಯನ್ನು ಹೋಗಲಾಡಿಸುವಲ್ಲಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಒಂದು ತುಂಡು ಶುಂಠಿಯನ್ನು ಚೆನ್ನಾಗಿ ಅಗಿದು ನೀರು ಕುಡಿಯಿರಿ. ಇಲ್ಲವೇ ಹಾಲಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕುಡಿಯುವುದರಿಂದಲೂ ಹೊಟ್ಟೆಯುರಿ ಕಡಿಮೆಯಾಗುತ್ತದೆ.

ಪಪ್ಪಾಯಿ ತಿನ್ನುವುದರಿಂದಲೂ ಹೊಟ್ಟೆಯುರಿ ಬಹಳಷ್ಟು ಕಡಿಮೆಯಾಗುತ್ತದೆ.
ಕೊನೆಯದಾಗಿ ಹೇಳುವ ಆದರೆ, ಅತ್ಯಂತ ಪರಿಣಾಮಕಾರಿ ಸಲಹೆಯೆಂದರೆ…ಎಳನೀರು ಕುಡಿಯುವುದು. ಪ್ರತೀದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದರೆ… ಜನ್ಮದಲ್ಲಿ ಮತ್ತೆಂದೂ ಹೊಟ್ಟೆಯುರಿ ನಿಮ್ಮನ್ನು ಪೀಡಿಸುವುದಿಲ್ಲ.

Comments are closed.