ಕರಾವಳಿ

ರ್‍ಯಾಂಕ್ ವಿಜೇತೆ ಯಕ್ಷಗಾನ ಕಲಾವಿದೆ ಬಿಂದಿಯಾ ಶೆಟ್ಟಿಗೆ ಪಟ್ಲ ಸಂಭ್ರಮದಲ್ಲಿ ಚಿನ್ನದ ಪದಕದೊಂದಿಗೆ ಸನ್ಮಾನ

Pinterest LinkedIn Tumblr

ಮಂಗಳೂರು : ಸುರತ್ಕಲ್ ಗೋವಿಂದದಾಸ ಪದವಿಪೂರ್ವ ಕಾಲೇಜ್‌ನಲ್ಲಿ 591 ಅಂಕಗಳೊಂದಿಗೆ ರಾಜ್ಯದಲ್ಲಿ ವಾಣಿಜ್ಯ ವಿಭಾಗದಲ್ಲಿ 5ನೇ ರ್‍ಯಾಂಕ್ ಪಡೆದಿರುವ ಯಕ್ಷಗಾನ ಕಲಾವಿದೆ ಬಿಂದಿಯಾ ಎಲ್, ಶೆಟ್ಟಿ ಅವರಿಗೆ ಮೇ 27ರಂದು ಅಡ್ಯಾರ್‌ಗಾರ್ಡ್‌ನ್‌ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಆಶ್ರಯದಲ್ಲಿ ನಡೆಯುವ ಪಟ್ಲ ಸಂಭ್ರಮದಲ್ಲಿ ಚಿನ್ನದ ಪದಕ ನೀಡಿ ಗೌರವಿಸಲಾಗುವುದು ಎಂದು ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.

ಬಿಂದಿಯಾ ಎಲ್. ಶೆಟ್ಟಿ ಎಸ್‌ಎಸ್‌ಎಲ್‌ಸಿ ಯಲ್ಲಿ 6ನೇ ರ್‍ಯಾಂಕ್ ಪಡೆದಿದ್ದರು. ಈಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ಮತ್ತು ಸುಜಾತ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದಾಳೆ.

ಬಿಂದಿಯಾ ಯಕ್ಷಗಾನ, ಸಂಗೀತ ಹಾಗೂ ಕಾರ್ಯಕ್ರಮ ನಿರ್ವಹಣೆಯಲ್ಲಿ ಪ್ರಸಿದ್ಧ ಪಡೆದಿದ್ದಾರೆ. ಅಧ್ಯಯನದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅವರು ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಬಿಂದಿಯಾ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸದಸ್ಯೆಯೂ ಆಗಿದ್ದಾರೆ. ಬಿಂದಿಯಾ ಭವಿಷ್ಯದಲ್ಲಿ ಲೆಕ್ಕ ಪರಿಶೋಧನೆ ಅಧ್ಯಯನದ ಆಸಕ್ತಿ ಹೊಂದಿದ್ದಾರೆ.

Comments are closed.