ಕರಾವಳಿ

ಗೋವಿಂದದಾಸ ಕಾಲೇಜಿನ ಬಿಂದಿಯಾ ಶೆಟ್ಟಿಗೆ ವಾಣಿಜ್ಯ ವಿಭಾಗದಲ್ಲಿ ಐದನೇ ರ್‍ಯಾಂಕ್

Pinterest LinkedIn Tumblr

ಮಂಗಳೂರು : 2017-18ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯಲ್ಲಿ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಮತ್ತೋರ್ವ ವಿದ್ಯಾರ್ಥಿನಿ ಬಿಂದಿಯಾ ಎಲ್. ಶೆಟ್ಟಿ ರಾಜ್ಯಕ್ಕೆ ಐದನೇ ಸ್ಥಾನವನ್ನು ಪಡೆದಿದ್ದಾರೆ.

ಸುರತ್ಕಲ್ ಕಟ್ಲ ನಿವಾಸಿ ಲೀಲಾಧರ ಶೆಟ್ಟಿ ಹಾಗೂ ಸುಜಾತ ಶೆಟ್ಟಿ ದಂಪತಿ ಪುತ್ರಿಯಾಗಿರುವ ಬಿಂದಿಯಾ ಎಲ್. ಶೆಟ್ಟಿ ಎಸೆಸೆಲ್ಸಿಯಲ್ಲಿ 6ನೇ ರ್‍ಯಾಂಕ್ ಪಡೆದಿದ್ದರು.

ಇದೀಗ ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ 591 (98.5) ಅಂಕಗಳೊಂದಿಗೆ ಬಿಂದಿಯಾ ಎಲ್. ಶೆಟ್ಟಿ ರಾಜ್ಯಕ್ಕೆ ಐದನೇ ಸ್ಥಾನವನ್ನು ಪಡೆಯುವ ಮೂಲಕ ತಮ್ಮ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ, ಸಂಸ್ಕೃತದಲ್ಲಿ ತಲಾ 100 ಅಂಕಗಳನ್ನು ಪಡೆದಿರುವ ಬಿಂದಿಯಾ, ಅರ್ಥಶಾಸ್ತ್ರದಲ್ಲಿ- 99, ಬಿಸ್ನೆಸ್ ಸ್ಟಡೀಸ್- 99 ಹಾಗೂ ಆಂಗ್ಲ ಭಾಷೆಯಲ್ಲಿ 93 ಅಂಕಗಳನ್ನು ಪಡೆದಿದ್ದಾರೆ.

ನಾನು ನಿರೀಕ್ಷೆ ಮಾಡಿದಂತೆ ಅಂಕ ಬಂದಿದೆ. ಮುಂದೆ ಪದವಿ ಜೊತೆ ಸಿಎ ಮಾಡಬೇಕೆಂಬ ಆಶೆ ಇದೆ ಎಂಬ ಅನಿಸಿಕೆಯನ್ನು ಬಿಂದಿಯಾ ವ್ಯಕ್ತಪಡಿಸಿದ್ದಾರೆ.

Comments are closed.