ಕರಾವಳಿ

ಮಕ್ಕಳ ಆರಾಮದಾಯಕ ಸುಖನಿದ್ರೆ ಹಾಗೂ ಸ್ಮರಣಶಕ್ತಿ ಹೆಚ್ಚಿಸಲು ಹಾಲಿನೊಂದಿಗೆ ಕಲ್ಲುಸಕ್ಕರೆ

Pinterest LinkedIn Tumblr

ಸಕ್ಕರೆಯನ್ನು ಹರಳುಗಟ್ಟಿಸಿ ಮಾಡುವ ಪದಾರ್ಥವೇ ಕಲ್ಲುಸಕ್ಕರೆ. ಈ ಕಲ್ಲುಸಕ್ಕರೆಯನ್ನು ಸಕ್ಕರೆಯಿಂದ ಮಾಡಿದರು ಸಹ ಇದು ಹೆಚ್ಚು ಸಿಹಿ ಅಂಶವನ್ನು ಒಳಗೊಂಡಿಲ್ಲ. ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು, ಖನಿಜಗಳು ಹಾಗೂ ಅಮೈನೋ ಆಮ್ಲವಿದೆ. ಸಾಮಾನ್ಯವಾಗಿ ಮಾಂಸಾಹಾರದಲ್ಲಿ ಮಾತ್ರ ಕಂಡುಬರುವ ವಿಟಮಿನ್ ಬಿ12 ಕಲ್ಲುಸಕ್ಕರೆಯಲ್ಲಿದೆ. ಸಕ್ಕರೆಗಿಂತಲೂ ಕಲ್ಲು ಸಕ್ಕರೆ ಹೆಚ್ಚು ಆರೋಗ್ಯ ಕರವಾಗಿದೆ. ಹಾಗಾಗಿ ಸಿಹಿಕಾರಕವಾಗಿ ಸಕ್ಕರೆಯ ಬದಲು ಬಳಸುವುದರಿಂದ ಕೆಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಹಾಗಾದರೆ ಈ ಕಲ್ಲುಸಕ್ಕರೆಯಿಂದ ಏನೆಲ್ಲ ಉಪಯೋಗವಿದೆ ಎಂದು ತಿಳಿಯೋಣ ಬನ್ನಿ.

ಊಟದ ನಂತರ ಒಂದು ಕಲ್ಲುಸಕ್ಕರೆಯನ್ನು ತಿಂದರೆ ಬಾಯಿಯಲ್ಲಿ ಅಡಕವಾಗಿರುವ ಬ್ಯಾಕ್ಟೀರಿಯಾಗಳ ಸತ್ತು ಹೋಗುತ್ತವೆ. ಜೊತೆಗೆ ಬಾಯಿಯ ವಾಸನೆ ಕೂಡ ಹೋಗುತ್ತದೆ.
ಕೆಮ್ಮಿದ್ದಾಗ ಕಲ್ಲುಸಕ್ಕರೆಯ ತುಂಡನ್ನು ಬಾಯಲ್ಲಿರಿಸಿ ನಿಧಾನವಾಗಿ ಚೀಪುವ ಮೂಲಕ ಸತತವಾಗಿರುವ ಕೆಮ್ಮು ಸಹಾ ಕಡಿಮೆಯಾಗುತ್ತದೆ.
ಕಲ್ಲುಸಕ್ಕರೆಯಲ್ಲಿರುವ ಪೋಷಕಾಂಶಗಳು ಹೀಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ ರಕ್ತಹೀನತೆ, ಬಿಳಿಚಿಕೊಂಡ ಚರ್ಮ, ತಲೆಸುತ್ತುವಿಕೆ, ಸುಸ್ತು ಮೊದಲಾದ
ಈ ತೊಂದರೆಗಳನ್ನು ನಿವಾರಿಸುತ್ತದೆ ಹಾಗೂ ರಕ್ತಪರಿಚಲನೆಯನ್ನೂ ಉತ್ತಮಗೊಳಿಸುತ್ತದೆ.
ಕಲ್ಲುಸಕ್ಕರೆ ಜೊತೆ ಜೀರಿಗೆಯನ್ನು ಸೇವಿಸಿದರೆ ಜೀರ್ಣಶಕ್ತಿಯನ್ನೂ ಹೆಚ್ಚಿಸುತ್ತದೆ.
ಊಟದ ಬಳಿಕ ಸೇವಿಸುವ ಕಲ್ಲುಸಕ್ಕರೆಯಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುವ ಮೂಲಕ ನಮ್ಮನ್ನು ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ.
ಮೂಗಿನಿಂದ ರಕ್ತ ಸುರಿಯುತ್ತಿದ್ದರೆ ತಕ್ಷಣವೇ ಒಂದು ತುಂಡು ಕಲ್ಲುಸಕ್ಕರೆಯನ್ನು ನೀರಿನಲ್ಲಿ ಬೆರೆಸಿ ಕುಡಿಯಬೇಕು. ಇದರಿಂದ ಕೆಲವೇ ನಿಮಿಷಗಳಲ್ಲಿ ರಕ್ತಸ್ರಾವ ನಿಲ್ಲುತ್ತದೆ
ಕಲ್ಲುಸಕ್ಕರೆ ಮೆದುಳಿಗೆ ಒಂದು ನೈಸರ್ಗಿಕ ಔಷಧಿಯಂತೆ ಕೆಲಸ ಮಾಡುತ್ತದೆ. ಸ್ಮರಣ ಶಕ್ತಿ ಹೆಚ್ಚಿಸಲು ಹಾಗೂ ಮೆದುಳಿನ ಮೇಲಿನ ಒತ್ತಡದಿಂದ ಪರಿಹಾರ ಒದಗಿಸುತ್ತದೆ.
ಬೆಚ್ಚಗಿನ ಹಾಲಿನಲ್ಲಿ ಕೊಂಚ ಕಲ್ಲುಸಕ್ಕರೆಯನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಇದರಿಂದ ಸುಖನಿದ್ದೆ ಆವರಿಸುತ್ತದೆ ಹಾಗೂ ಸ್ಮರಣಶಕ್ತಿಯೂ ಹೆಚ್ಚುತ್ತದೆ.
ಕಲ್ಲುಸಕ್ಕರೆ ಬಾಣಂತಿಯರಿಗೆ ಉಪಯುಕ್ತವಾದ ಆಹಾರವಾಗಿದೆ. ಇದರ ಸೇವನೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಹಾಗೂ ತಾಯಿಹಾಲಿನ ಉತ್ಪತ್ತಿ ಹೆಚ್ಚುತ್ತದೆ.
ಕಣ್ಣುಗಳ ದೃಷ್ಟಿ ಉತ್ತಮವಾಗಿರಲು ದಿನವಿಡೀ ಕುಡಿಯುವ ನೀರಿನಲ್ಲಿ ಕೊಂಚವೇ ಕಲ್ಲುಸಕ್ಕರೆ ಬೆರೆಸಿ ಸೇವಿಸಿ ಹಾಗೂ ಊಟದ ಬಳಿಕವೂ ಒಂದು ಲೋಟ ನೀರಿನಲ್ಲಿ ಚಿಕ್ಕ ಕಲ್ಲುಸಕ್ಕರೆಯ ತುಂಡನ್ನು ಬೆರೆಸಿ ಸೇವಿಸಬೇಕು.
ದಿನನಿತ್ಯ ಒಂದು ತುಂಡು ಕಲ್ಲುಸಕ್ಕರೆ ತಿಂದರೆ ಸ್ಮರಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ಮೆದುಳಿನ ಒತ್ತಡವನ್ನು ಸಹ ಕಡಿಮೆ ಮಾಡಿಕೊಳ್ಳಲು ಸಹಾಯಕವಾಗುತ್ತದೆ.
ಜಠರ. ಅಮ್ಮ ಈ ರೀತಿಯ ಗುಳ್ಳೆಗಳು ಆಗಿದ್ದಾಗ ಕಲ್ಲುಸಕ್ಕರೆ ತಿಂದರೆ ಬೇಗ ಗುಣವಾಗುತ್ತದೆ.
ದೇಹದಲ್ಲಿ ಸುಸ್ತು ಆಯಾಸವಾಗಿ ದೇಹದಲ್ಲಿ ನೀರಿನ ಅಂಶ ಕಡಿಮೆಯಿದ್ದಾಗ ಕಲ್ಲುಸಕ್ಕರೆ ತಿಂದರೆ ಒಳ್ಳೆಯದು.
ನೋಡಿ ಕಲ್ಲುಸಕ್ಕರೆಯು ಎಷ್ಟೆಲ್ಲ ಆರೋಗ್ಯದ ಅಂಶಗಳನ್ನು ಹೊಂದಿದೆ ಅಗಾಗಿ ನೀವು ಸಹ ಸಕ್ಕರೆ ಬದಲು ಕಲ್ಲುಸಕ್ಕರೆ ಬಳಸಿ.

Comments are closed.