ಕರಾವಳಿ

ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ನ 70ಕ್ಕೂ ಅಧಿಕ ಕಾರ್ಯಕರ್ತರು ಬಿ ಜೆ ಪಿ ಸೇರ್ಪಡೆ

Pinterest LinkedIn Tumblr

ಮಂಗಳೂರು : ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಜಗರಾಜ್ ರೈ ಹಾಗೂ ಕಾಂಗ್ರೆಸ್ ಮುಖಂಡ ಗಜರಾಜ್ ಕುಂದರ್ ರ ಸಹಿತ 70ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಇಂದು ಬಿ ಜೆ ಪಿ ಸೇರ್ಪಡೆ ಗೊಂಡರು.

ಬಿ ಜೆ ಪಿ ದಕ್ಷೀಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಡಿ ವೇದವ್ಯಾಸ್ ಕಾಮತ್, ಪಕ್ಷದ ಪ್ರಮುಖರಾದ ಭಾಸ್ಕರ್ ಚಂದ್ರ ಶೆಟ್ಟಿ, ರತ್ನಕರ್ ನಾಯಕ್ ಮುಂತಾದವರ ಸಮ್ಮುಖದಲ್ಲಿ ಬಿ ಜೆ ಪಿ ಮಂಗಳೂರು ದಕ್ಷಿಣದ ಚುನಾವಣಾ ಕಚೇರಿಯಲ್ಲಿ ಬಿ ಜೆ ಪಿ ಸೇರ್ಪಡೆ ಗೊಂಡರು.

ಜೆ.ಆರ್ ಲೋಬೋ ಅವರ ಜಾತಿವಾದ ಮತ್ತು ಕಾರ್ಯಕರ್ತರನ್ನು ಕಡೆಗಣಿಸುವ ಅವರ ಮನೋಭಾವ ಮತ್ತು ಸಿದ್ಧಾಂತಗಳೊಂದಿಗೆ ಹೊಂದಾಣಿಕೆಯ ರೀತಿ ಇವೆಲ್ಲದರಿಂದ ನೊಂದುಕೊಂಡು ಕಾಂಗ್ರೆಸ್ಸನ್ನು ತ್ಯಜಿಸುವುದಾಗಿ ಕಾಂಗ್ರೆಸ್ ಮುಖಂಡ ಗಜರಾಜ್ ಕುಂದರ್ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಅವರ ಕಾರ್ಯವೈಖರಿ ಮತ್ತು ಅವರು ಹೇಳುತ್ತಿರುವ ಸುಳ್ಳುಗಳಿಂದ ಕಾಂಗ್ರೆಸ್ಸಿನ ಕಾರ್ಯಕರ್ತರು ಬೇಸತ್ತಿದ್ದಾರೆ. ಅವರ ದರ್ಪ ಮತ್ತು ಕಾರ್ಯಕರ್ತರ ಮಾತುಗಳನ್ನು ಕಡೆಗಣಿಸಿ ತಮಗನಿಸಿದಂತೆ ಮಾಡುವ ಕಾರ್ಯಶೈಲಿ ಇತರರು ಮಾಡುವ ಕೆಲಸಗಳನ್ನು ತಮ್ಮದೆಂದು ಹೇಳಿಕೊಂಡು ತಿರುಗಾಡುವ ಅವರ ರೀತಿ ನೀತಿಗೆ ಬೇಸತ್ತು ಕಾಂಗ್ರೆಸ್ ತೊರೆಯುತ್ತಿರುವುದಾಗಿ ಅವರು ಹೇಳಿದ್ದಾರೆ.

Comments are closed.