ಕರಾವಳಿ

ಸರ್ವ ರೋಗ ನಿವಾರಣಿಗೆ ಪ್ರಕೃತಿ ನೀಡಿದ ದಿವ್ಯಔಷಧ ಎಳನೀರು, ಅದುವೇ ಕಲುಷಿತಗೊಂಡರೆ…?

Pinterest LinkedIn Tumblr

ದೇಹದ ಉಷ್ಣತೆ ಹೆಚ್ಚಾಗಿದ್ದರೆ, ಜ್ವರ ಬಂದರೆ ಹೀಗೆ ಎಂತಹ ಖಾಯಿಲೆಗಾದರೂ ಪ್ರಕೃತಿ ಸಹಜವಾಗಿ ದೊರೆಯುವ ಸರ್ವ ರೋಗ ನಿವಾರಣಿ ಎಂದೇ ಹೆಸರಾಗಿರುವ ತಂಪಾದ ಪಾನೀಯ ಎಳನೀರು. ಬೇಸಿಗೆಯಲ್ಲಿ ಬಿಸಿಲಿನ ತಾಪವನ್ನು ತಡೆಯಲು ಉಪಯುಕ್ತವಾಗುವ ಎಳನೀರು ಪ್ರಕೃತಿ ನೀಡಿದ ಔಷಧ ಎನ್ನುವುದು ಈ ಹಿಂದಿನ ಮಾತು. ಆದರೆ ಈಗ ಎಳನೀರಿನ ಬೆಳೆಯಲ್ಲೂ ಕಲುಷಿತವಾಗಿದೆ.

ಹಾಲು, ಎಣ್ಣೆ, ಬೇಳೆ, ಉಪ್ಪು ಇವುಗಳೆಲ್ಲವು ಕಲುಷಿತವಾದಂತೆ ಈಗ ಎಳನೀರು ಸಹಾ ಈ ಪಟ್ಟಿಯಲ್ಲಿ ಸೇರಿಕೊಂಡಿದೆ. ಆದ್ದರಿಂದ ಎಳನೀರು ಕುಡಿದಲ್ಲಿ ಖಾಯಿಲೆ ವಾಸಿಯಾಗುತ್ತದೆ ಎಂಬುದಕ್ಕೆ ಬದಲಾಗಿ ಆರೋಗ್ಯಕ್ಕೆ ಹಾನಿ ಉಂಟಾಗುವುದೆಂದು ವೈದ್ಯರು ಎಚ್ಚರಿಸುತ್ತಿದ್ದಾರೆ. ಅಧಿಕ ಇಳುವರಿಗಾಗಿ ಗಿಡಗಳಿಗೆ ಪ್ರಾಣಾಂತಕ ರಸಾಯನಿಕಗಳನ್ನು ಹಾಕುತ್ತಾರೆ. ಬೇರುಗಳಿರುವ ಕಡೆ ಅಗೆದು ತಾಯಿ ಬೇರನ್ನು ಕಂಡು ಹಿಡಿದು ನಂತರ ಮೋನೋಕ್ರೊಟೋಫಾಸ್ ಎಂಬ ರಾಸಾಯನಿಕವನ್ನು ಚೀಲಕ್ಕೆ ತುಂಬಿ, ಕತ್ತರಿಸಿದ ತಾಯಿ ಬೇರನ್ನು ಅದರಲ್ಲಿಟ್ಟು ಮಣ್ಣಿನಿಂದ ಮುಚ್ಚುತ್ತಾರೆ. ಹೀಗೆ ಮಾಡುವುದರಿಂದ ಎಳೆನೀರು ಬೇಗ ದೊಡ್ಡದಾಗಿ ಬೆಳೆಯುತ್ತದೆ.

ಸಾವಿರಗಳಲ್ಲಿ ಬೆಳೆಯುವ ಇವು ಲಕ್ಷಗಳಲ್ಲಿ ಬೆಳೆಯುವುದಲ್ಲದೆ ಇವುಗಳಲ್ಲಿ 2-3 ಪಟ್ಟು ನೀರು ಅಧಿಕವಾಗಿರುತ್ತದೆ. ಎಳೆನೀರನ್ನು ಬೆಳೆಸುವವರಿಗೆ ದುಡ್ಡಿನ ಮಳೆ ಸುರಿಯುತ್ತದೆ.ಆದರೆ ಈ ರಾಸಾಯನಿಕವು ನಮ್ಮ ದೇಹದಲ್ಲಿ ಸೇರಿ ಹೃದಯ, ಕಿಡ್ನಿ ಹಾಗೂ ಲಿವರ್ ಸಮಸ್ಯೆಗಳು ಎದುರಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ.

ಅಧಿಕವಾಗಿ ಎಳನೀರನ್ನು ಬೆಳೆಯಲು ಮೋನೋಕ್ರೊಟೋಫಾಸ್ ಗಿಡಕ್ಕೆ ಸೇರಿಸುವ ವಿಧಾನವನ್ನು ಬೇವಿನ ಎಣ್ಣೆಯನ್ನೂ ಬಳಸಿ ಮಾಡಬಹುದು. ಆದರೂ ರಾಸಾಯನಿಕಗಳಿಗೇ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ರಾಸಾಯನಿಕಗಳು ತುಂಬಿಕೊಂಡ ಎಳನೀರು ಮೊದಲಿನ ಸ್ಥಿತಿಗೆ ತಲುಪುವುದಕ್ಕೆ ಸುಮಾರು 10 ದಿನಗಳು ಬೇಕಾಗುತ್ತವೆ. ಆದರೆ ನಮಗೆ ಸಿಗುವ ಎಳನೀರು ಎಷ್ಟು ದಿನಗಳ ಹಿಂದಿನವು ಎಂದು ನಮಗೆ ತಿಳಿಯುವುದಿಲ್ಲ ಅಲ್ಲವೆ?

ರೈತರು ಸಹಾ ಜನರ ಪ್ರಾಣಗಳೊಂದಿಗೆ ಆಟವಾಡುತ್ತಿರುವುದನ್ನು ರೂಢಿಸಿಕೊಂಡಲ್ಲಿ ನಮ್ಮನ್ನು ರಕ್ಷಿಸುವವರು ಯಾರು..??

Comments are closed.