ಕರಾವಳಿ

ಕುದ್ಮುಲ್ ರಂಗರಾವ್ ಸಮಾಧಿ ಹೊಸ ಚೈತನ್ಯದ ತಾಣ : ವೇದವ್ಯಾಸ ಕಾಮತ್

Pinterest LinkedIn Tumblr

ಮಂಗಳೂರು : ಕುದ್ಮುಲ್ ರಂಗರಾವ್ ಅವರು ಜೀವಮಾನವೀಡಿ ತಮ್ಮ ಸರ್ವಸ್ವವನ್ನು ದಲಿತರ ಅಭ್ಯುದಯಕ್ಕೆ ಧಾರೆ ಎರೆದರು. ಅವರ ಆರ್ಶೀವಾದ ಪಡೆದು ಕಣಕ್ಕೆ ಇಳಿಯುವುದು ಹೊಸ ಚೈತನ್ಯ ನೀಡಿದೆ ಎಂದು ಮಂಗಳೂರು ನಗರ ದಕ್ಷಿಣ ಅಭ್ಯರ್ಥಿ ಡಿ.ವೇದವ್ಯಾಸ ಕಾಮತ್ ಹೇಳಿದರು.

ಅವರು ಅತ್ತಾವರ-ಬಾಬುಗುಡ್ಡೆಯ ಕುದ್ಮುಲ್ ರಂಗರಾವ್ ಸಮಾಧಿಗೆ ಗೌರವ ಸಲ್ಲಿಸಿ ಮಾತನಾಡಿದರು. ಪ್ರಾತ:ಸ್ಮರಣೀಯ ಕುದ್ಮುಲ್ ರಂಗರಾವ್ ದಲಿತರು ಏಳಿಗೆ ಕಾಣಲು ತಮ್ಮ ಜೀವನವನ್ನೇ ಪಣವಾಗಿಟ್ಟಿದ್ದರು. ಅವರ ಸಮಾಧಿ ಇರುವ ಸ್ಥಳ ಅಭಿವೃದ್ಧಿ ಕಾಣಬೇಕೆನ್ನುವುದು ಅವರ ಅಭಿಮಾನಿಗಳ ಬೇಡಿಕೆಯಾಗಿದೆ.

ಜಿಲ್ಲೆ, ರಾಜ್ಯಗಳಿಂದ ಕುದ್ಮುಲ್ ರಂಗರಾವ್ ಅವರ ಅಭಿಮಾನಿಗಳು ಬರುವ ಅತ್ತಾವರ-ಬಾಬುಗುಡ್ಡೆಯ ಸ್ಮಾರಕ ಪ್ರದೇಶದಲ್ಲಿ ಅಭಿವೃದ್ಧಿಯ ಶಕೆ ಪ್ರಾರಂಭಿಸಲು ಬಿಜೆಪಿಯನ್ನು ಗೆಲ್ಲಿಸಬೇಕಾಗಿದೆ ಎಂದು ಡಿ ವೇದವ್ಯಾಸ ಕಾಮತ್ ಹೇಳಿದರು.

ಅತ್ತಾವರ ವಾರ್ಡ್ ಅಧ್ಯಕ್ಷ ವಿವೇಕ್ ಶೆಟ್ಟರ್, ಲಲ್ಲೇಶ್, ಗಿರೀಶ್, ಅಜಯ್, ಹರೀಶ್ ಆಚಾರ್ಯ, ಬಸವರಾಜ್ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು .

Comments are closed.