ಕರಾವಳಿ

ಕುಂದಾಪುರ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ನಾಮಪತ್ರ ಸಲ್ಲಿಕೆ: ಅವರ ಆಸ್ತಿ ವಿವರ ಹೀಗಿದೆ ನೋಡಿ

Pinterest LinkedIn Tumblr

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಶನಿವಾರ ನಾಮಪತ್ರ ಸಲ್ಲಿಸಿದರು.

ಬೆಂಬಲಿಗರ ಜೊತೆ ಮಿನಿವಿಧಾಸೌಧಕ್ಕೆ ಆಗಮಿಸಿದ ಅವರು ಕಾಂಗ್ರೆಸ್ ಮುಖಂಡರಾದ ಜಿ.ಎ ಬಾವಾ, ಮಲ್ಯಾಡಿ ಶಿವರಾಮ ಶೆಟ್ಟಿ ಮೊದಲಾದವರ ಜೊತೆ ಕಚೇರಿಯೊಳಕ್ಕೆ ತೆರಳಿ ಚುನವಾಣಾಧಿಕಾರಿ ಭೂಬಾಲನ್ ಅವರಿಗೆ ನಾಮಪತ್ರ ಸಲ್ಲಿಸಿದರು.

ರಾಕೇಶ್‌ ಮಲ್ಲಿಯವರ ಬಳಿ 1,63,87,281.47, ಪತ್ನಿಯ ಬಳಿ 1,56,77,891, ಅವಲಂಭಿತರ ಬಳಿ 4,13,884.18 ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ ಮಲ್ಲಿ ಬಳಿ 3,37,48,281.47 ಹಾಗೂ ಪತ್ನಿ ಬಳಿ 2,86,27,891ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಮಲ್ಲಿ ಅವರ ಬ್ಯಾಂಕ್‌ ಖಾತೆಯಲ್ಲಿ 6,35,932.67 ರೂಪಾಯಿ, ನಗದು 48,000 ರೂಪಾಯಿ. ಪತ್ನಿಯ ಹೆಸರಿನಲ್ಲಿ 17,18,193.8 ರೂಪಾಯಿ, ನಗದು 45,000 ರೂಪಾಯಿ, ಪತ್ನಿಯ ಹೆಸರಲ್ಲಿ 25,000 ರೂಪಾಯಿ ಮೌಲ್ಯದ ಷೇರ್‌ ಹಾಗೂ ಅವಲಂಭಿತರ ಬ್ಯಾಂಕ್‌ ಖಾತೆಯಲ್ಲಿ 24,135.59 ಇರುವುದಾಗಿ ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ವಿವರದಲ್ಲಿ ಮಲ್ಲಿ 9,31,800 ರೂಪಾಯಿ ವಾರ್ಷಿಕ ಆದಾಯ ಹಾಗೂ 27,44,200 ರೂಪಾಯಿ ಕೃಷಿ ಆದಾಯ ಇರುವುದಾಗಿ ಹೇಳಿದ್ದಾರೆ. ಪತ್ನಿ ವಿನುತಾ 13,44,855 ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. 7,58,625 ಮಹೇಂದ್ರ ಎಕ್ಸ್‌ಯುವಿ ಹಾಗೂ 34,68, ಮರ್ಸಿಡಿಸ್‌ ಬೆಂಜ್‌ ವಾಹನ ಮಲ್ಲಿವರಲ್ಲಿದೆ. ಪತ್ನಿಯ ಬಳಿ 22,04,128 ರೂಪಾಯಿ ಮೌಲ್ಯದ ಟೋಯಾಟೋ ಇನೋವಾ ಕಾರು, 6,09,450 ರೂಪಾಯಿ ಮೌಲ್ಯದ ಮಹೇಂದ್ರ ಪಿಕ್‌ ಆಪ್‌, 15,50,000 ಮೌಲ್ಯದ 3 ಟಾಟಾ 10 ವೀಲರ್‌, ಮಲ್ಲಿಯವರ ಬಳಿ 13,14,000 ಮೌಲ್ಯದ ಚಿನ್ನಾಭರಣ ಹಾಗೂ ಪತ್ನಿಯ ಬಳಿ 42,50,000 ಚಿನ್ನಾಭರಣ, ಇತರ ಕಂಪೆನಿಗಳಲ್ಲಿ ಮಲ್ಲಿಯವರ ಹೂಡಿಕೆ 78,99,788 ಹಾಗೂ ಪತ್ನಿ 20,00,00 ಹೂಡಿಕೆ ಮಾಡಿದ್ದು, ಅವರ ಬಳಿ 2,76,119 ಇತರ ಸ್ವತ್ತುಗಳು ಇರುವುದಾಗಿ ತಿಳಿಸಿದ್ದಾರೆ ಇರುವುದಾಗಿ ತಿಳಿಸಿದ್ದಾರೆ.

ಎಲ್‌ಐಸಿ ಯಲ್ಲಿ ಮಲ್ಲಿ 3,86,648 ರೂಪಾಯಿ, ಪತ್ನಿ 16,80,00 ಹಾಗೂ ಅವಲಂಭಿತರು 3,84,648 ವಿನಿಯೋಗಿಸಿದ್ದಾರೆ. ಪತ್ನಿ 3 ವ್ಯಕಿ್ತಿಗಳಲ್ಲಿ 30,000,000 ಸಾಲದ ವ್ಯವಹಾರ ಮಾಡಿದ್ದಾರೆ. ಪಲ್ಲಮಜಲ್‌ನಲ್ಲಿ 33 ಸೆಂಟ್ಸ್‌, ಬಂಟ್ವಾಳ ಸಜೀಪದಲ್ಲಿ 3.78 ಎಕ್ರೆ ಸೇರಿ ಮಲ್ಲಿಯರಿಗೆ 1,73,61,000 ಮೌಲ್ಯದ ಜಾಗ ಹಾಗೂ ಪತ್ನಿಗೆ ಮಂಗಳೂರು ನೀರು ಮಾರ್ಗದಲ್ಲಿ 64,50,000 ಮೌಲ್ಯದ 43 ಸೆಂಟ್ಸ್‌ ಜಾಗ ಇದೆ. ಮಲ್ಲಿಯವರಿಗೆ 37,84,038,53 ರೂಪಾಯಿ ಹಾಗೂ ಪತ್ನಿಗೆ 20,88,249 ರೂಪಾಯಿ ಸಾಲ ಇದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ರಾಕೇಶ್‌ ಮಲ್ಲಿಯವರ ವಿರುದ್ದ ನ್ಯಾಯಾಲಯದಲ್ಲಿ ಯಾವುದೆ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯಾಗಿಲ್ಲ ಹಾಗೂ ಯಾವುದೆ ಅಪರಾಧ ಪ್ರಕರಣಗಳು ವಿಚಾರಣೆಗೆ ಬಾಕಿ ಇಲ್ಲ ಎಂದು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
.

Comments are closed.