ಕರಾವಳಿ

ಶ್ವಾಸಕೋಶ ಸಮಸ್ಯೆ ಇರುವವರು ಪ್ರತಿದಿನದ ವ್ಯಾಯಾಮ ಅತಿ ಅವಶ್ಯಕ ಯಾಕೆ…?

Pinterest LinkedIn Tumblr

ಧೂಮಪಾನ ಮಾಡುವುದನ್ನು ನಿಲ್ಲಿಸಿ. ಧೂಮಪಾನದಿಂದ ಯಾವುದೇ ರೀತಿಯ ಅನುಕೂಲಗಳಿಲ್ಲ. ನೀವು ಹೆಚ್ಚು ಧೂಮಪಾನ ಮಾಡಿದಂತೆ ಕ್ಯಾನ್ಸರ್ ಮತ್ತಿತರ ದೀರ್ಘಕಾಲದ ಎದೆಗೆಮ್ಮು ಮತ್ತು ವಾತಕ್ಕೆ ಹೊಂದಿರುವ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಧೂಮಪಾನ ಅತಿ ಕೆಟ್ಟದ್ದಾಗಿದ್ದು ಇದು ಕೇವಲ ಧೂಮಪಾನ ಮಾಡುವವರಿಗೆ ಮಾತ್ರವಲ್ಲ ಧೂಮಪಾನ ಮಾಡುವಾಗ ಅವರ ಸುತ್ತಲಿರುವವರಿಗೂ ಇದು ಕೆಟ್ಟ ಪರಿಣಾಮವನ್ನು ಬೀರುತ್ತದೆ

ಸ್ವಚ್ಚವಾದ ಗಾಳಿ ಮುಖ್ಯ 155 ಮಿಲಿಯನ್‌ ಗೂ ಹೆಚ್ಚು ಜನರು ವಾಯು ಮಾಲಿನ್ಯ ಅಧಿಕವಾಗಿರುವ ಸ್ಥಳದಲ್ಲಿ ಜೀವಿಸುತ್ತಿದ್ದಾರೆ. ವಾಯುಮಾಲಿನ್ಯದಿಂದ ಅಸ್ಥಮಾ ಮಾತ್ರವಲ್ಲ ಇದು ಮನುಷ್ಯನನ್ನು ಕೊಂದುಬಿಡುವಷ್ಟು ಕೆಟ್ಟ ಪರಿಣಾಮ ಬೀರುತ್ತದೆ. ನೀವು ಕಾಯಿದೆಗಳನ್ನು ಬೆಂಬಲಿಸುವುದರ ಮೂಲಕ ಪರಿಸರದ ಸ್ವಚ್ಚತೆಯನ್ನು ಕಾಪಾಡಲು ಸಹಕರಿಸಬೇಕು. ಇದರಿಂದ ವಾಯುಮಾಲಿನ್ಯ ತಡೆಯಬಹುದು. ವಾಯುಮಾಲಿನ್ಯವನ್ನು ತಡೆಯಲು ಕಸವನ್ನು ಸುಡುವುದು, ಹೆಚ್ಚು ಎಲೆಕ್ಟ್ರಿಸಿಟಿ ಬಳಕೆ, ವಾಹನಗಳ ಅಧಿಕ ಚಲಾವಣೆ ಇವುಗಳನ್ನು ಮೊದಲು ತಡೆಯಬೇಕು.

ಕೇವಲ ವ್ಯಾಯಾಮ ಮಾಡುವುದರಿಂದ ಶ್ವಾಸಕೋಶ ಬಲಿಷ್ಠವಾಗಲಾರದು ಆದರೆ ವ್ಯಾಯಾಮ ಮಾಡುವುದರಿಂದ ಕೆಲವು ಸಮಸ್ಯೆಗಳಿಂದ ದೂರವಿರಬಹುದು. ನೀವು ಹೃದಯ ಸಂಬಂಧಿ ವ್ಯಾಯಾಮಗಳನ್ನು ಮಾಡುವುದರಿಂದ ಶ್ವಾಸಕೋಶ ಇನ್ನಿತರ ದೇಹದ ಅಂಗಗಳಿಗೆ ಅಗತ್ಯ ಆಮ್ಲಜನಕವನ್ನು ಪೂರೈಸುವಲ್ಲಿ ಸಹಾಯಕವಾಗುತ್ತದೆ.ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿರುವವರಿಗೆ ಪ್ರತಿದಿನದ ವ್ಯಾಯಾಮ ಅತಿ ಅವಶ್ಯಕವಾಗಿದೆ.

ಒಳಗಿನ ಗಾಳಿ ಉತ್ತಮವಾಗಿರಲಿ: ವಾಯುಮಾಲಿನ್ಯ ಕೇವಲ ಹೊರಗೆ ಮಾತ್ರವಲ್ಲ.ಮನೆಯ ಒಳಗೂ ಕೂಡ ವಾಯುಮಾಲಿನ್ಯ ಇರುತ್ತದೆ. ಉದಾಹರಣೆಗೆ ಸುಡುವ ಒಲೆ, ಕಟ್ಟಿಗೆ ಒಲೆಗಳು, ನಿರ್ಮಾಣ ಸಾಮಗ್ರಿಗಳು, ಕೆಲವು ಸಾಕುಪ್ರಾಣಿಗಳಿಂದ, ಏರ್ ಫ್ರೆಶ್ನರ್, ಕೆಲವು ಸುಗಂಧಭರಿತ ಮೇಣದ ಬತ್ತಿಗಳು ಇವುಗಳೆಲ್ಲ ವಾಯುಮಾಲಿನ್ಯಕ್ಕೆ ಅಸ್ತಮಾ ಹೆಚ್ಚಲು ಕಾರಣವಾಗಬಹುದು. ಇಂತಹ ಸಂದರ್ಭದಲ್ಲಿ ಹೊರಗಿನ ಗಾಳಿ ಸೂಕ್ತವಾಗಿ ಬರುವಂತೆ ಮಾಡುವುದು ಜೊತೆಗೆ ಏರ್ ಕ್ಲೀನರ್ ಬಳಸುವುದರಿಂದ ಆಮ್ಲಜನಕದ ಪ್ರಾಮಾಣವನ್ನು ಹೆಚ್ಚಿಸಬಹುದು. ಏರ್ ಕ್ಲೀನರ್ ಬೇಡದ ಕಣಗಳನ್ನು ನಾಶಮಾಡುತ್ತದೆ ಮತ್ತು ಇದು ಗ್ಯಾಸ್ ಉತ್ಪತ್ತಿ ಮಾಡುವುದಿಲ್ಲ ಇದರಿಂದ ವಾಯುಮಾಲಿನ್ಯವಾಗುವುದಿಲ್ಲ.

ಆರೋಗ್ಯಕರ ಆಹಾರವನ್ನು ಬಳಸಿ. ಆಂಟಿ ಆಕ್ಸಿಡೆಂಟ್ ಹೆಚ್ಚಿರುವ ಆಹಾರಗಳು ಶ್ವಾಸಕೋಶಕ್ಕೆ ಸಹಾಯಕ ಎನ್ನಲಾಗುತ್ತದೆ. 2011 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಹೂಕೋಸು, ಎಲೆಕೋಸು, ಬ್ರೋಕೊಲಿ ಇವುಗಳನ್ನು ಹೆಚ್ಚು ತಿಂದವರು ಕಡಿಮೆ ಬಳಸಿದವರಿಗಿಂತ ಹೆಚ್ಚು ಶ್ವಾಸಕೋಶದ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಹಸಿರು ಎಲೆ ಮತ್ತು ತರಕಾರಿಗಳು ಶ್ವಾಸಕೋಶದ ಅರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಸೂಕ್ತ ಎನ್ನಲಾಗುತ್ತದೆ.

Comments are closed.