ಕರಾವಳಿ

ಮನುಷ್ಯನ ಬೆಳವಣಿಗೆಗೆ ಮತ್ತು ಉತ್ತಮ ಆರೋಗ್ಯಕ್ಕೆ ಈ ಜ್ಯುಸ್ ಕುಡಿವುದರ ಪ್ರಯೋಜನ ತಿಳಿಯಿರಿ…

Pinterest LinkedIn Tumblr

ಹಸಿರು ಎಲೆಗಳ ತರಕಾರಿಗಳು ಎಲ್ಲಾ ರೀತಿಯ ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು, ಇವು ಮನುಷ್ಯನ ಬೆಳವಣಿಗೆಗೆ ಮತ್ತು ಉತ್ತಮ ಆರೋಗ್ಯಕ್ಕೆ ತುಂಬಾ ಅತ್ಯಾವಶಕವಾಗಿವೆ.

ನಮ್ಮ ದೇಶದಲ್ಲಿ, ಅತಿ ವ್ಯಾಪಕ ಪ್ರಮಾಣದಲ್ಲಿ ಹಸಿರು ಎಲೆ ತರಕಾರಿಗಳನ್ನು ಉಪಯೋಗಿಸುತ್ತಾರೆ ಅದರಲ್ಲಿ ಜನಪ್ರಿಯವಾದವೆಂದರೆ ಪಾಲಕ್‌ ಸೊಪ್ಪು, ದಂಟಿನ ಸೊಪ್ಪು, ಪುಂಡಿಪಲ್ಯ , ಮೆಂತ್ಯೆ ಸೊಪ್ಪು, ನುಗ್ಗೆ ಸೊಪ್ಪು, ಪುದೀನ ಸೊಪ್ಪು, ಇತ್ಯಾದಿ. ಈ ಪುದೀನ ಸೊಪ್ಪಿನಲ್ಲಿ ಪ್ರೋಟೀನ್. ಐರನ್. ಕ್ಯಾಲ್ಸಿಯಂ. ಪೊಟ್ಯಾಸಿಯಂ. ಮೆಗ್ನಿಸಿಯಂ. ಫಾಸ್ಪರಸ್. ವಿಟಮಿನ್ ಬಿ. ಎ ಜೀವಸತ್ವಗಳು ಇದ್ದು ಇವು ನಮ್ಮ ಆರೋಗ್ಯವನ್ನು ಕಾಪಾಡುವುದರಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದೆ.

ಹಾಗೆಯೇ ಬೇಸಿಗೆ ಕಾಲದಲ್ಲಿ ಎಲ್ಲರೂ ಹೆಚ್ಚಾಗಿ ತಂಪು ಪಾನೀಯಗಳು. ಹೆಚ್ಚು ತಂಪು ನೀಡುವ ಹಣ್ಣುಗಳು. ಹೆಚ್ಚು ಸೊಪ್ಪು ತರಕಾರಿಗಳನ್ನು ಬಳಸುತ್ತಾರೆ.ಏಕೆಂದರೆ ಇವು ನಮ್ಮ ದೇಹದ ಉಷ್ಣತೆ ಯನ್ನು ಕಡಿಮೆ ಮಾಡುತ್ತದೆ ಎಂದು. ಈ ಹಣ್ಣುಗಳಲ್ಲಿ ಹೆಚ್ಚಾಗಿ ಜ್ಯುಸ್ ಮಾಡಿಕೊಂಡು ಕುಡಿಯುತ್ತಾರೆ. ಅದೇ ರೀತಿಯಲ್ಲಿ ಪುದೀನ ಸೊಪ್ಪಿನಿಂದ ಜ್ಯುಸ್ ಮಾಡಿಕೊಂಡು ಕುಡಿದರೆ ನಮ್ಮ ದೇಹವು ತಂಪಾಗಿ ಇರುವ ಜೊತೆಗೆ ನಮ್ಮ ಆರೋಗ್ಯವೂ ಸಹ ಉತ್ತಮವಾಗಿ ಇರುತ್ತದೆ.

ಹಾಗಾದರೆ ಈ ಪುದೀನ ಜ್ಯುಸ್ ನಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…

ಪುದೀನ ಜ್ಯುಸ್ ಮಾಡುವ ವಿಧಾನ.
ಪುದೀನ ಸೊಪ್ಪನ್ನು ಚೆನ್ನಾಗಿ ತೊಳೆದುಕೊಂಡು. ಅದಕ್ಕೆ ಸ್ವಲ್ಪ ಜೀರಿಗೆ. ಜೇನುತುಪ್ಪ. ಹಾಕಿ ನುಣ್ಣಗೆ ರುಬ್ಬಿಕೊಂಡು ಅದನ್ನು ಚೆನ್ನಾಗಿ ಸೋಸಿ ದರೆ ಪುದೀನ ಜ್ಯುಸ್ ರೆಡಿಯಾಗುತ್ತದೆ.

ಪ್ರತಿ ನಿತ್ಯ ಈ ಪುದೀನ ಜ್ಯುಸ್ ಕುಡಿಯುತ್ತ ಬಂದರೆ ದೇಹದಲ್ಲಿ ಹೆಚ್ಚುವ ಉಷ್ಣತೆ ಕಡಿಮೆಯಾಗುತ್ತದೆ.

ಪುದೀನ ಜ್ಯುಸ್ ತಯಾರಿಸುವ ಮೊದಲು ಅದಕ್ಕೆ ಸ್ವಲ್ಪ ಗರಿಕೆ. ಶುಂಠಿ. ತುಳಸಿ ಎಲೆಗಳನ್ನು ಸೇರಿಸಿ ಜ್ಯುಸ್ ಮಾಡಿ ಕುಡಿದರೆ ಶೀತ. ಕೆಮ್ಮು. ನೆಗಡಿ.ಸಮಸ್ಯೆ ಹತ್ತಿರ ಸುಳಿಯುವುದಿಲ್ಲ.

ಪುದೀನ ಜ್ಯುಸ್ ಗೆ ಸ್ವಲ್ಪ ಉಪ್ಪು ಮತ್ತು ಮೆಣಸಿನ ಪುಡಿ ಸೇರಿಸಿ ಕುಡಿದರೆ ಗಂಟಲಿನ ಸಮಸ್ಯೆಗಳು ಹೋಗುತ್ತವೆ.

ಪುದೀನ ಜ್ಯುಸ್ ಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿದರೆ ಹೊಟ್ಟೆನೋವು ಕಡಿಮೆಯಾಗುತ್ತದೆ.

ಈ ಪುದೀನ ಜ್ಯುಸ್ ಸೇವನೆಯಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ದೂರವಾಗುತ್ತವೆ.

ಪುದೀನ ಜ್ಯುಸ್ ಗೆ ಸ್ವಲ್ಪ ನಿಂಬೆರಸ. ಹಾಗೂ ಶುಂಠಿ ಬೆರೆಸಿ ಕುಡಿಯುವುದರಿಂದ ವಾಂತಿ ಪೂರ್ಣವಾಗಿ ನಿಲ್ಲುತ್ತದೆ.

ಪುದೀನ ಜ್ಯುಸ್ ಸೇವನೆಯು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ದೇಹದ ರಕ್ತ ಸಂಚಾರವನ್ನು ಸುಗಮಗೊಳ್ಳಿಸುತ್ತದೆ.

ಪುದೀನ ಜ್ಯುಸ್ ಗ್ಯಾಸ್ಟ್ರಿಕ್ ಸಮಸ್ಯೆ ಗೆ ಉತ್ತಮ ಮನೆ ಮದ್ದು.

ಈ ಜ್ಯುಸ್ ಅಲ್ಸರ್ ಸಮಸ್ಯೆಯನ್ನು ದೂರ ಮಾಡಿ ಲಿವರ್ ನ ಆರೋಗ್ಯವನ್ನು ಕಾಪಾಡುತ್ತದೆ.

ಪುದೀನ ನಮ್ಮ ಕೂದಲಿನ ಆರೈಕೆಗೂ ಉತ್ತಮ ಔಷಧಿ.

ಪುದೀನ ನಮ್ಮ ದಂತ ಸಮಸ್ಯೆಗಳನ್ನು ನಿವಾರಿಸುತ್ತದೆ. ಜೊತೆಗೆ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ.

ಈ ಪುದೀನ ಜ್ಯುಸ್ ಕುಡಿಯುವುದರಿಂದ ನಮ್ಮ ಒತ್ತಡಗಳನ್ನು ದೂರ ಮಾಡಿ ಮನಸ್ಸಿಗೆ ನೆಮ್ಮದಿ ನೀಡುತ್ತದೆ.

ಇದು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.

ನೋಡಿದರಲ್ಲ ಪುದೀನ ಸೊಪ್ಪು ಎಷ್ಟೆಲ್ಲ ಆರೋಗ್ಯದ ಗುಟ್ಟುಗಳನ್ನು ಇಟ್ಟುಕೊಂಡಿದೆ ಎಂದು ಅದಕ್ಕಾಗಿ ನೀವು ಕೂಡ ಇದರ ಪ್ರಯೋಜನ ಪಡೆದುಕೊಳ್ಳಿ.

Comments are closed.