ಕರಾವಳಿ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಲಸ್ಸಿಯು ಒಂದು ಆರೋಗ್ಯಕಾರಿ ಪೇಯ.

Pinterest LinkedIn Tumblr

ಬೇಸಿಗೆ ಬಂದರೆ ಸಾಕು ಈ ಬೇಸಿಗೆಯ ಬಿಸಿಲು. ಧೂಳು. ಆಹಾರ. ಗಾಳಿ. ಇವುಗಳಿಂದ ಮುಕ್ತಿಯನ್ನು ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳಲು ಹರ ಸಹಾಸವನ್ನೇ ಮಾಡಬೇಕು. ಜೊತೆಗೆ ಈ ದೆಗೆಗೆ ಬರುವ ಆರೋಗ್ಯದ ಸಮಸ್ಯೆಗಳನ್ನು ಸುದಾರಿಸಿ ಕೊಳ್ಳಲು ಬಲು ಕಷ್ಟ. ಆದ್ದರಿಂದ ಈ ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡುವ . ನಮ್ಮ ಆರೋಗ್ಯವನ್ನು ಕಾಪಾಡುವ ಉತ್ತಮ ಆಹಾರಗಳಲ್ಲಿ ಒಂದಾಗಿರುವ ಲಸ್ಸಿ ಯ ಸೇವನೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಈ ಲಸ್ಸಿ ರುಚಿಯಲ್ಲಿ ಸಿಹಿ ಮತ್ತು ಆಹ್ಲಾದಕಾರಿ ಗುಣಗಳಿಂದ ಸಮೃದ್ಧವಾಗಿದೆ.ಹಾಗಾದರೆ ಈ ಲಸ್ಸಿಯ ಸೇವನೆ ಯಾವ ರೀತಿ ಪ್ರಯೋಜನವನ್ನು ತರುತ್ತದೆ ಎಂದು ನೋಡೋಣ.. ಲಸ್ಸಿಯನ್ನು ಯೋಗರ್ಟ್ ಇಲ್ಲವೇ ಮೊಸರಿನಿಂದ ತಯಾರಿಸುತ್ತಾರೆ.
ಯೋಗರ್ಟ್ ಅನ್ನು ಹಾಲಿನಿಂದ ತಯಾರಿಸುತ್ತಾರೆ ಇದು ಮೂತ್ರಸೋಂಕನ್ನು ನಿವಾರಿಸುವಲ್ಲಿ ಸಹಕಾರಿ.ಹಾಗೂ ಹೊಟ್ಟೆಗೆ ತುಂಬಾ ಒಳ್ಳೆಯದು. ಹೊಟ್ಟೆಯ ಉರಿಯನ್ನು ಶಮನಗೊಳಿಸಿ ದೇಹಕ್ಕೆ ತಂಪನ್ನು ಒದಗಿಸುವಲ್ಲಿ ಲಸ್ಸಿ ತುಂಬಾ ಉತ್ತಮವಾಗಿದೆ.

ಈ ಲಸ್ಸಿಯನ್ನು ಹಲವಾರು ವಿಧಾನಗಳಿಂದ ತಯಾರಿಸಬಹುದು. ಅವುಗಳು ಸಕ್ಕರೆ ಹಾಗೂ ರೋಸ್ ವಾಟರ್ ಅನ್ನು ಬೆರೆಸಿ ಲಸ್ಸಿಯನ್ನು ತಯಾರು ಮಾಡುತ್ತಾರೆ. ಮಾವಿನ ಹಣ್ಣು ಹಾಗೂ ಏಲಕ್ಕಿಯನ್ನು ಮಿಶ್ರ ಮಾಡಿ ಸುವಾಸನೆಯುಕ್ತ ಲಸ್ಸಿಯನ್ನು ತಯಾರಿಸುತ್ತಾರೆ.

ಲಸ್ಸಿಯನ್ನು ಸೇವನೆ ಮಾಡಿದರೆ ದೇಹವನ್ನು ಹೈಡ್ರೇಟ್ ಮಾಡಿ ನೀರಿನ ಮಟ್ಟವನ್ನು ನಿಯಂತ್ರಿಸುತ್ತದೆ. ದೇಹದ ಉಷ್ಣವನ್ನು ಶಮನಗೊಳಿಸುತ್ತದೆ.ಲಸ್ಸಿ ಯು ಆರೋಗ್ಯವಂತ ಬ್ಯಾಕ್ಟೀರಿಯಾವನ್ನು ಹೊಂದಿದ್ದು ಮೂತ್ರದ ಸೋಂಕನ್ನು ತಡೆಯುವಲ್ಲಿ ಮಹತ್ವಕಾರಿಯಾಗಿದೆ. ಲಸ್ಸಿಯಲ್ಲಿ ಪೊಟ್ಯಾಶಿಯಂ, ಕ್ಯಾಲ್ಶಿಯಂ, ಪ್ರೊಟೀನ್ ಹಾಗೂ ವಿಟಮಿನ್‌ ಬಿ ಇದ್ದು ಇದು ಬಿ -12 ನಷ್ಟು ಪರಿಣಾಮಕಾರಿಯಾಗಿದೆ. ಇದೊಂದು ನ್ಯೂಟ್ರೀಶನ್ ಉಳ್ಳ ಬೇಸಿಗೆ ಪಾನೀಯವಾಗಿದ್ದು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ.ಲಸ್ಸಿ ಆರೋಗ್ಯಕರ ಪ್ರೊಬೊಯೋಟಿಕ್ಸ್ ಅನ್ನು ಹೊಂದಿದ್ದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ.
ಇದು ನಿಯಮಿತ ಕರುಳ ಚಲನೆಯನ್ನು ಅಭಿವೃದ್ಧಿಸುತ್ತದೆ.ಲಸ್ಸಿ ಕ್ರೀಂ ಮತ್ತು ತುಪ್ಪದಿಂದ ಸಮೃದ್ಧವಾಗಿದೆ. ಸಾಂಪ್ರದಾಯಿಕ ಲಸ್ಸಿಯು ತೂಕ ಏರಿಕೆಗೆ ಸಹಕಾರಿಯಾಗಿದೆ.

ಡೈರಿ ಉತ್ಪನ್ನಗಳಿಂದ ತಯಾರು ಮಾಡಲಾದ ಲಸ್ಸಿ ಕ್ಯಾಲ್ಶಿಯಂ ಭರಿತವಾಗಿದೆ. ಇದು ಮೂಳೆಗೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ.ಲಸ್ಸಿಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.ಲಸ್ಸಿ ನಿಮ್ಮ ಹೊಟ್ಟೆಯನ್ನು ಭರ್ತಿ ಮಾಡಿ ಹಸಿವನ್ನು ನಿಯಂತ್ರಿಸುತ್ತದೆ ಹಾಗೂ ತೂಕ ಏರುವುದಕ್ಕೆ ಕಡಿವಾಣ ಹಾಕುತ್ತದೆ.ಲಸ್ಸಿಯ ಸೇವನೆ ಬೇಸಿಗೆಯ ಸಮಸ್ಯೆಗಳನ್ನು ದೂರಮಾಡುತ್ತದೆ.ಲಸ್ಸಿಯನ್ನು ಸೇವಿಸುತ್ತಾ ಬಂದರೆ ನಮ್ಮ ಚರ್ಮವು ಕೂಡ ಮೃದುವಾಗಿ. ತುರಿಕೆ. ಗುಳ್ಳೆ. ಬೆವರು ಸೆಲೆ. ಗಳಂತಹ ಸಮಸ್ಯೆಗಳು ಹೋಗುತ್ತವೆ. ಆದ್ದರಿಂದ ಲಸ್ಸಿಯನ್ನು ಸೇವಿಸಿ ದೇಹವನ್ನು ತಂಪು ಮಾಡಿ ಆರೋಗ್ಯ ಜೋಪಾನ ಮಾಡಿಕೊಳ್ಳಿ.

Comments are closed.