ಕರಾವಳಿ

ನವಜಾತ ಶಿಶುವಿನ ಹೊಕ್ಕಳಿಗೆ “ಡ್ರೈ ಕೇರ್ ನೀಡುವ ವಿಧಾನ ಬಲ್ಲಿರಾ…?

Pinterest LinkedIn Tumblr

ಕೊನೆಗೂ ಸುಮಾರು ನಲವತ್ತು ವಾರಗಳ ಕಾಲ ಕಾದು, ನಿಮ್ಮ ಮುದ್ದು ಕಂದಮ್ಮನನ್ನು ಕೊನೆಗೂ ಈ ಭೂಮಿಗೆ ಬರಮಾಡಿಕೊಂಡಿರಿ. ಹೆರಿಗೆ ಆದ ನಂತರ ಕೆಲವು ದಿನಗಳಷ್ಟರಲ್ಲೇ ನೀವು ಆಸ್ಪತ್ರೆಯಿಂದ ಮನೆಗೆ ಮರಳುತ್ತೀರ. ಇಲ್ಲಿ ನಿಮಗೆ ಸಹಾಯ ಮಾಡಲು ಯಾವುದೇ ಆಸ್ಪತ್ರೆ ಸಿಬ್ಬಂದಿಗಳು ಇರುವುದಿಲ್ಲ. ಈ ಬದಲಾವಣೆಯು ಬಹಳಷ್ಟು ಅಮ್ಮಂದಿರಿಗೆ ಭಯ ಹುಟ್ಟಿಸುವಂತದ್ದು ಆಗಿರುತ್ತದೆ. ಮಾಡಲು ಎಷ್ಟೋಂದು ಕೆಲಸಗಳು ಇರುತ್ತವೆ. ಈ ಕೆಲಸಗಳ ಪಟ್ಟಿಯಲ್ಲಿ ಒಂದು ಸಣ್ಣ ಕೆಲಸ ಎಂದರೆ ಅದು ನಿಮ್ಮ ಮಗುವಿನ ಹೊಕ್ಕಳನ್ನು ಹೇಗೆ ಸ್ವಚ್ಛ ಮಾಡಬೇಕು ಎಂಬುದು.

ವಿಶ್ವ ಅರೋಗ್ಯ ಸಂಸ್ಥೆ (WHO) ಪ್ರಕಾರ ಮೊದಲ ಒಂದೆರೆಡು ವಾರದವರೆಗೆ, ಮಗುವಿನ ಹೊಕ್ಕಳು ಬಳ್ಳಿಯಲ್ಲಿ ಉಳಿದುಕೊಂಡಿರುವ ಕರುಳು ಬಳ್ಳಿಯ ಸ್ಟಂಪ್ ಉದುರುವವರೆಗೂ, ಹಸಿ ಮಾಡದಂತೆ ಹೊಕ್ಕಳನ್ನು ಶುಚಿಯಾಗಿರಿಸಬೇಕು. ಅಂದರೆ, ಹೊಕ್ಕಳಿಗೆ “ಡ್ರೈ ಕೇರ್” ನೀಡಬೇಕು.

ನಿಮ್ಮ ಮಗುವಿನ ಕರುಳು ಬಳ್ಳಿಯ ಸ್ಟಂಪ್ ಉದುರುವವರೆಗೂ, ನೀವು ಆ ಹೊಕ್ಕಳು ಭಾಗವನ್ನ ವದ್ದೆ ಆಗದಂತೆ ಇಡಬೇಕು ಮತ್ತು ಮಗುವಿನ ಮೂತ್ರದಿಂದ ಹೊಕ್ಕಳು ವದ್ದೆ ಆಗದೆ ಇರಲು ಡಯಾಪರ್ ಅನ್ನು ಅದಕ್ಕೆ ತಾಗದಂತೆ ಮಡಚಿ ಹಾಕಬೇಕು. ಹೊಕ್ಕಳಿನಿಂದ ಸ್ಟಂಪ್ ಉದುರಿಲ್ಲ ಎಂದರೆ, ಈ ಸಮಯದಲ್ಲಿ ನೀವು ಮಗುವಿಗೆ ಸಂಪೂರ್ಣ ಸ್ನಾನ ಮಾಡಿಸಬಾರದು. ಬೇಕಿದ್ದಲ್ಲಿ, ಸ್ಪಂಜುವನ್ನು ನೀರಿನಲ್ಲಿ ಅದು ಮಗುವಿನ ದೇಹ ಸ್ವಚ್ಛಪಡಿಸಬಹುದು. ಒಂದು ವೇಳೆ ಹೊಕ್ಕಳು ಸ್ಟಂಪ್ ಮೇಲೆ ಮೂತ್ರ ಅಥವಾ ಮಲ ಮೆತ್ತಿಕೊಂಡಿದ್ದಲ್ಲಿ, ಅದನ್ನು ಸ್ವಲ್ಪವೇ ನೀರಿನಿಂದ ತೊಳೆಯಿರಿ.

ಹೊಕ್ಕಳನ್ನ ಹೇಗೆ ಶುಚಿಯಾಗಿ ಇಡಬೇಕು ಎಂಬುದಕ್ಕೆ ಉತ್ತರ ಸುಲಭವಿದೆ. ಅದು ಒಂದು ತಿಂಗಳ ಮಗುವಾಗಿದ್ದರೂ, 20 ವರ್ಷದ ವಯಸ್ಕರಾಗಿದ್ದರೂ ಹೊಕ್ಕಳನ್ನು ಶುಚಿಗೊಳಿಸಿಕೊಳ್ಳುವ ವಿಧಾನ ಒಂದೇ. ಇದನ್ನು ನೀವು ದೇಹದ ಇತರ ಭಾಗಗಳಲ್ಲಿರುವ ನೆರಿಗೆಯಾದ ಅಥವಾ ಮಡಚಿದ ಚರ್ಮದಂತೆ ನೋಡಿಕೊಳ್ಳಬೇಕು. ತುಂಬಾ ಒತ್ತಡ ಹಾಕಿ ಉಜ್ಜಬೇಡಿ, ಮೃದುವಾಗಿರಿ, ಬೇಕಿದ್ದರೆ ಇಯರ್ ಬಡ್ ಅನ್ನು ಬಳಸಿ ಹೊಕ್ಕಳಿನಲ್ಲಿನ ಗಲೀಜು ಅಥವಾ ನೀರನ್ನು ಹೊರತೆಗೆಯಿರಿ.

ಪ್ರತಿಯೊಬ್ಬರ ಹೊಕ್ಕಳು ಸೆಳೆತವು ವಿಭಿನ್ನ ಆಗಿರುತ್ತದೆ. ಬಾಹ್ಯ ರೂಪದ ಹೊರತಾಗಿ, ಕೆಲವರ ಹೊಕ್ಕಳು ಆಳವಾಗಿ ಇರುತ್ತದೆ, ಕೆಲವರದ್ದು ಹೆಚ್ಚು ಸುಳಿಗಳನ್ನ ಹೊಂದಿರುತ್ತವೆ, ಕೆಲವರದ್ದು ಹೆಚ್ಚು ಮಡಚಿಕೊಂಡಿರುತ್ತದೆ.

Comments are closed.