ಕರಾವಳಿ

ದ.ಕ.ಜಿಲ್ಲೆಯ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳ ಸಭೆ / ಚುನಾವಣಾ ಸಿಬ್ಬಂದಿಗಳಿಗೆ ಹೆಸರು ನೋಂದಾಯಿಸಲು ಸೂಚನೆ

Pinterest LinkedIn Tumblr

ಮಂಗಳೂರು ಎಪ್ರಿಲ್ 11 : ರಾಜ್ಯ ವಿಧಾನಸಭಾ ಚುನಾವಣೆಯ ಪ್ರಯುಕ್ತ ಜಿಲ್ಲೆಯಲ್ಲಿ ರಚಿಸಲಾಗಿರುವ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳ ಸಭೆಯು ಬುಧವಾರ ಅಪರ ಜಿಲ್ಲಾಧಿಕಾರಿ ವೈಶಾಲಿ ಅಧ್ಯಕ್ಷತೆಯಲ್ಲಿ ನಡೆಯಿತು.

ಚುನಾವಣಾ ಸಿಬ್ಬಂದಿಗಳಿಗೆ ಮತದಾನ : ಹೆಸರು ನೋಂದಾಯಿಸಲು ಸೂಚನೆ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ವಿಧಾನ ಸಭಾ ಚುನಾವಣೆಯ ಕರ್ತವ್ಯ ನಿರ್ವಹಿಸುವ ಬಗ್ಗೆ ಜಿಲ್ಲೆಯ ಎಲ್ಲಾ ಕೇಂದ್ರ/ರಾಜ್ಯ ಸರಕಾರಗಳ ಮತ್ತು ಅದರ ಅಧೀನಕ್ಕೊಳಪಟ್ಟ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ವಿಶ್ವವಿದ್ಯಾನಿಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ ಸಿಬ್ಬಂದಿಯವರನ್ನು ನೇಮಕ ಮಾಡಲಾಗುವುದು. ಆಯೋಗದ ನಿರ್ದೇಶನದಂತೆ ಚುನಾವಣಾ ಕರ್ತವ್ಯ ನಿರ್ವಹಿಸುವ ಬಗ್ಗೆ ನೇಮಕ ಮಾಡಲಾಗುವ ಇಂತಹ ಎಲ್ಲಾ ಅಧಿಕಾರಿ/ಸಿಬ್ಬಂದಿಯವರ ಹೆಸರು ಮತದಾರರ ಪಟ್ಟಿಗಳಲ್ಲಿ ನೊಂದಣಿಯಾಗಿ ಅವರಿಗೆ ಮತದಾನದ ಹಕ್ಕನ್ನು ನೀಡಬೇಕಾಗಿರುತ್ತದೆ.

ಈಗಾಗಲೇ ಅಂತಹ ಎಲ್ಲಾ ಅಧಿಕಾರಿ / ಸಿಬ್ಬಂದಿಯವರ ಪಟ್ಟಿಗಳನ್ನು ಪಡೆಯುವಾಗ ಅವರ ಹೆಸರು ಮತದಾರರ ಪಟ್ಟಿಗಳಲ್ಲಿ ನೋಂದಾಸಲ್ಪಟ್ಟ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ. ಆದಾಗ್ಯೂ ಸಾರ್ವಜನಿಕ / ಕೇಂದ್ರ / ರಾಜ್ಯ ಸರಕಾರಿ ಸಿಬ್ಬಂದಿಗಳ ಹೆಸರು ಈ ತನಕ ಮತದಾರರ ಪಟ್ಟಿಗಳಲ್ಲಿ ನೋಂದಣಿಯಾಗದಿದ್ದಲ್ಲಿ ಅವರು ಕೂಡಲೇ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳುವ ಬಗ್ಗೆ www.ceokarnataka.kar.nic.in ಸಂದರ್ಶಿಸಿ ಆನ್‍ಲೈನ್ ಮೂಲಕ ಎಪ್ರಿಲ್ 14 ರೊಳಗೆ ಮನವಿ ಸಲ್ಲಿಸಿ ಹೆಸರು ನೊಂದಾಯಿಸಿಕೊಳ್ಳಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ದ.ಕ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Comments are closed.