ಕರಾವಳಿ

ಏಳನೀರು ಎಂಬ ಅಮೃತದ ವಿಶೇಷ ಬಲ್ಲಿರಾ….?

Pinterest LinkedIn Tumblr

ಬೇಸಿಗೆ ಬಂದರೆ ಸಾಕು ಯಾವ ಊಟ ತಿಂಡಿ ಕೂಡ ಬೇಕಿಲ್ಲ . ಕೇವಲ ತಂಪು ಪಾನೀಯಗಳು ಇದ್ದರೆ ಸಾಕು. ಅದರಲ್ಲೂ ದೇಹವನ್ನು ತಂಪು ಮಾಡುವ . ನಮ್ಮ ದೇಹಕ್ಕೆ ಶಕ್ತಿ ನೀಡುವ. ನಮ್ಮ ದೇಹಕ್ಕೆ ಚೈತನ್ಯ ಕೊಡುವುದರಲ್ಲಿ ಎಳನೀರನ್ನು ಬಿಟ್ಟರೆ ಇನ್ನು ಯಾವ ತಂಪು ಪಾನಿಯವಾಗಲಿ. ಆಹಾರವಾಗಲಿ. ಸಾಟಿ ಇಲ್ಲ.

ಅದಕ್ಕಾಗಿ ಹಳ್ಳಿಗಳಲ್ಲಿ ಎಲ್ಲರ ಮನೆಯಲ್ಲೂ ಒಂದೊಂದು ಎಳನೀರಿನ ಮರಗಳು ಇದ್ದೆ ಇರುತ್ತವೆ. ಕೆಲವರ ಮನೆಗಳಲ್ಲಿ ಏಳನೀರಿನ ತೋಟಗಳನ್ನು ಮಾಡಿರುತ್ತಾರೆ ಅದರಿಂದ ಒಳ್ಳೆಯ ಆದಾಯವನ್ನು ಗಳಿಸುತ್ತಿರುತ್ತಾರೆ.

ಈ ಎಳನೀರು ನಿಸರ್ಗ ದತ್ತವಾಗಿ ಇರುವುದರಿಂದ ಯಾರು ಕುಡಿದರೂ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.
ಈ ಎಳನೀರು ಕುಡಿಯುವುದರಿಂದ ಆಗುವ ಲಾಭಗಳ ಬಗ್ಗೆ ನೋಡೋಣ ಬನ್ನಿ…
ಈ ಎಳನೀರು ಕೇವಲ ನೀರಲ್ಲ ಇದು ಸಕ್ಕರೆಯ ಅಂಶವನ್ನು. ಖನಿಜ. ಲವಣ. ಸೋಡಿಯಂ. ಪೊಟ್ಯಾಸಿಯಂ. ಗಳನ್ನು ಹೊಂದಿದ್ದು. ನಮ್ಮ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ತುಂಬುತ್ತದೆ.
ವಾಂತಿ. ಭೇದಿ. ಜ್ವರಕ್ಕೆ ಎಳನೀರು ಉತ್ತಮ ಔಷಧಿಯಾಗಿದೆ.
ದೇಹದ ರಕ್ತ ಚಲನೆಯನ್ನು ಸುಗಮಗೊಳ್ಳಿಸುತ್ತದೆ. ಹಾಗೂ ಹೃದಯಕ್ಕೆ ಬೇಕಾದ ರಕ್ತ ಸಂಚಾರವನ್ನು ಕೊಡುವ ಜೊತೆಗೆ ಹೃದಯದ ಸಮಸ್ಯೆಗಳನ್ನು ಹತೋಟಿಯಲ್ಲಿ ಇಡುತ್ತದೆ.
ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರು. ಹಾಗೂ ಜೀರ್ಣಕ್ರಿಯೆ ಸಮಸ್ಯೆ. ಮಲಬದ್ಧತೆ ಸಮಸ್ಯೆ ಇರುವವರಿಗೆ ಎಳನೀರು ಉತ್ತಮ ಪಾನೀಯ.
ದೇಹದಲ್ಲಿ ಹೆಚ್ಚಾಗುವ ಉಷ್ಣತೆಯನ್ನು ಎಳನೀರು ಹತೋಟಿಯಲ್ಲಿ ಇಡುತ್ತದೆ.
ಎಳನೀರಿನಲ್ಲಿ ಕ್ಯಾಲ್ಸಿಯಂ ಇದ್ದು ಇದು ನಮ್ಮ ಮುಳೆಗಳನ್ನು ಗಟ್ಟಿಗೊಳಿಸುತ್ತದೆ.
ಎಳನೀರಿನಲ್ಲಿ ಇರುವ ಬಿ ಕಾಂಪ್ಲೆಕ್ಸ್ ವಿಟಮಿನ್ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಈ ಎಳನೀರು.
ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಜಂತುಹುಳುಗಳನ್ನು. ಹೊಟ್ಟೆನೋವನ್ನು ಎಳನೀರು ಕಡಿಮೆ ಮಾಡುತ್ತದೆ.
ಎಳನೀರು ರಕ್ತದ ಒತ್ತಡವನ್ನು ಕಡಿಮೆ ಮಾಡಿ ನಮ್ಮ ದೇಹದಲ್ಲಿ ಸೋಡಿಯಂ ಮತ್ತು ಪೊಟ್ಯಾಸಿಯಂ ಅನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.
ಎಳನೀರಿನಲ್ಲಿ ಇರುವ ಪೊಟ್ಯಾಸಿಯಂ ಅಂಶವು ಕಿಡ್ನಿಯಲ್ಲಿ ಉತ್ತ್ಪತಿ ಆಗುವ ಕಲ್ಲುಗಳನ್ನು ಕರಗಿಸುತ್ತದೆ.
ಎಳನೀರಿನಲ್ಲಿ ಇರುವ ಆಂಟಿ ಆಕ್ಸಿಡೆಂಟ್ ನಮ್ಮ ದೇಹದಲ್ಲಿ ಆಗುವ ಊತ. ಉರಿಯನ್ನು ಕಡಿಮೆ ಮಾಡುತ್ತದೆ.
ಶರೀರಕ್ಕೆ ಅಗತ್ಯವಿರುವ ಹೆಚ್ ಡಿ ಎಲ್ ಎಂಬ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿಸಲು ಸಹಾಯಕವಾಗಿದೆ.
ಎಳನೀರು ಕರುಳಿನ ಕಾರ್ಯವನ್ನು ಮತ್ತು ಪಚನಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಶಿಶುಗಳಲ್ಲಿ ಪಚನಕ್ರಿಯೆಗೆ ಮತ್ತು ಕರುಳಿನ ಸಮಸ್ಯೆಗೆ ತುಂಬಾ ಪರಿಣಾಮಕಾರಿಯಾಗಿದೆ.
ಎಳನೀರಿನಲ್ಲಿರುವ ಸಲೈನ್ ಮತ್ತು ಅಲ್ಬುಮಿನ್ ಕಾಲರಾ ರೋಗಕ್ಕೆ ಅತ್ಯುಪಯುಕ್ತ ಔಷಧಿ.

ಎಳನೀರು ದೇಹವನ್ನು ತಂಪಾಗಿಸುವ ಗುಣಹೊಂದಿರುವುದರಿಂದ ಬೇಸಿಗೆಯಲ್ಲಿ ಉಂಟಾಗುವ ಬೆವರುಸಾಲೆ, ಮೀಸಲ್ಸ್, ದಡಾರಗಳಿಂದ ಉಂಟಾಗುವ ಬೊಬ್ಬೆ ಗಳಿಗೆ ಎಳನೀರು ಲೇಪಿಸುವುದರಿಂದ ಕಡಿಮೆಯಾಗುತ್ತದೆ .
ಎಳನೀರನ್ನು ಒಂದು ಬೌಲ್‌ನಲ್ಲಿ ಹಾಕಿಕೊಂಡು ಹತ್ತಿಯ ಉಂಡೆಯಿಂದ ಅದ್ದಿ ಮುಖಕ್ಕೆ ಹಚ್ಚಬೇಕು. ಹದಿನೈದು ನಿಮಿಷ ಬಿಡಬೇಕು. ಇದರಿಂದ ಚರ್ಮದ ಹೊಳಪು ಹೆಚ್ಚುತ್ತದೆ.
ಎಳನೀರಿನಲ್ಲಿ ಸೈಟೋಕೈನ್ ಮತ್ತು ಲಾರಿಕ್ ಆಮ್ಲ ಇದೆ. ನಮ್ಮ ಜೀವಕೋಶದ ಸಮರ್ಪಕ ಬೆಳವಣಿಗೆ ಮತ್ತು ನಿಯಂತ್ರಣಕ್ಕೆ ನೆರವಾಗುತ್ತವೆ.
ಎಳನೀರಿನ ನಿರಂತರ ಸೇವೆಯಿಂದ ಚರ್ಮದ ಸೆಳೆತವೂ ಹೆಚ್ಚುತ್ತದೆ, ಇದರಿಂದ ಚರ್ಮದ ಮೇಲೆ ನೆರಿಗೆ ಬೀಳುವುದನ್ನು ತಪ್ಪಿಸುತ್ತದೆ.
ಎಳನೀರು ಅಪ್ಪಟ ನೀರಿನ ಪಿಎಚ್ ಸಂಖ್ಯೆ ಹೊಂದಿರುವುದರಿಂದ ಜಠರದಲ್ಲಿ ಆಮ್ಲೀಯತೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ.
ಏಳನೀರಿನ ಸೇವನೆಯಿಂದ ಒಣಗಿದ ಮತ್ತು ಬಿಳಿಚಿದ ಚರ್ಮವೂ ನಿಧಾನಕ್ಕೆ ಸೆಳೆತ ಪಡೆದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
ಎಳನೀರಿನ ಸೇವನೆಯಿಂದ ಚರ್ಮದಡಿಯಲ್ಲಿ ಎಣ್ಣೆ ಉತ್ಪತ್ತಿಯಾಗುವುದು ಕಡಿಮೆಯಾಗಿ ಚರ್ಮ ಸಹಜ ವರ್ಣವನ್ನು ಪಡೆಯಲು ನೆರವಾಗುತ್ತದೆ.
ಎಳನೀರಿನಲ್ಲಿ ಇರುವ ವಿಟಮಿನ್ ಕೆ ಮತ್ತು ಕಬ್ಬಿಣದ ಅಂಶ ಕೂದಲಿಗೆ ಸಹಕಾರಿಯಾಗಿದೆ.
ಎಳನೀರು ನಮ್ಮ ದೇಹದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿ ದೇಹವನ್ನು ಸುಸ್ಥಿತಿಯಲ್ಲಿಡುತ್ತದೆ.
ಎಳನೀರು ಎಷ್ಟೆಲ್ಲ ಆರೋಗ್ಯದ ಅಂಶಗಳನ್ನು ಒಳಗೊಂಡಿದೆ ನೀವು ಸಹ ಕುಲ್ ಡ್ರಿಂಕ್ಸ್ ಮತ್ತು ಇನ್ನಿತರ ತಂಪು ಪಾನೀಯಗಳನ್ನು ಕುಡಿಯುವ ಬದಲು ಎಳನೀರು ಕುಡಿಯಲು ಅಭ್ಯಾಸ ಮಾಡಿಕೊಳ್ಳಿ.

Comments are closed.