ಕರಾವಳಿ

ಮುಂಬಯಿ ಪಂಚಮುಖಿ ಗಾಯತ್ರಿ ಮಾತಾ ಮಂದಿರದ ವಾರ್ಷಿಕೋತ್ಸವ ಹಾಗೂ ಹನುಮಾನ್ ಜಯಂತಿ ಆಚರಣೆ

Pinterest LinkedIn Tumblr

ಮುಂಬಯಿ :ಅಂಧೇರಿ ಪೂರ್ವ ಚಕಾಲದ ಪಂಚಮುಖಿ ಗಾಯತ್ರಿ ಮಾತಾ ಮಂದಿರ ಟ್ರಷ್ಟ್ ನ ವತಿಯಿಂದ ಪಂಚಮ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಮಂದಿರದ ದ್ವಿತೀಯ ವಾರ್ಷಿಕೋತ್ಸವ ಸಮಾರಂಭ ಹಾಗೂ ಹನುಮಾನ್ ಜಯಂತಿ ಆಚರಣೆಯು ವಿವಿಧ ದಾರ್ಮಿಕ ಕಾರ್ಯಗಳೊಂದಿಗೆ ನೆರವೇರಿತು.

ಬೆಳಿಗ್ಗೆ ಗಣಹೋಮ, ಆಂಜನೇಯ ಜನ್ಮಾರತಿ, ಶನೀಶ್ವರ ಪೂಜೆ, ಭಜನೆ, ಮಹಾ ಆರತಿ ಮಧ್ಯಾಹ್ನ ಅನ್ನ ಸಂತರ್ಪಣೆ, ಅಪರಾಹ್ನ ನಿತ್ಯ ಪೂಜೆ, ಮಂಗಳಾರತಿ, ರಾತ್ರಿ ಅನ್ನ ಸಂತರ್ಪಣೆ ನಡೆಯಿತು. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಆನಂತರ ಗುರುನಾರಾಯಣ ಯಕ್ಷಗಾನ ಮಂಡಳಿಯವರಿಂದ ’ಮಹಿಷ ಮರ್ಧಿನಿ’ ತುಳು ಯಕ್ಷಗಾದನ ಪ್ರದರ್ಶನ ನಡೆಯಿತು.

ಈ ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸಿದ ಭಕ್ತಾದಿಗಳಿಗೆ ಸದ್ಗುರು ಪಂಚಮ್ ಸ್ವಾಮಿಜಿಯವರು, ಮಾತೆ ಶರಣಮ್ಮ, ಪಂಚಮುಖಿ ಗಾಯತ್ರಿ ಮಾತಾ ಮಂದಿರ ಟ್ರಷ್ಟ್ ನ ಅಧ್ಯಕ್ಷರಾದ ಯಶವಂತ ಬಂಗೇರ, ಉಪಾಧ್ಯಕ್ಷ ರಾಮ ಸಿ. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಕರ್ಕೇರ, ಕೋಶಾಧಿಕಾರಿ ವಿಜಯ ಕೆ ಶೆಟ್ಟಿ, ಪ್ರಕಾಶ್ ಡಿ. ರೈ, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಸತೀಷ್ ಡಿ. ರೈ, ಉಪಕಾರ್ಯಾಧ್ಯಕ್ಷ ರವಿ ಪೂಜಾರಿ, ಸತೀಷ್ ಪೂಜಾರಿ, ಕೃಷ್ಣಾನಂದ ಪೂಜಾರಿ ಹಾಗೂ ಇತರ ಸದಸ್ಯರುಗಳು ಕೃತಜ್ನತೆ ಸಲ್ಲಿಸಿದರು.

ವರದಿ : ಈಶ್ವರ ಎಂ. ಐಲ್  / ಚಿತ್ರ : ದಿನೇಶ್ ಕುಲಾಲ್

Comments are closed.