ಕರಾವಳಿ

ಮತದಾರರ ಜಾಗೃತಿ: ಯಕ್ಷಗಾನ ಶೈಲಿಯ ಹಾಡುಗಾರಿಕೆಯ ಧ್ವನಿ ಮುದ್ರಿಕೆ ಬಿಡುಗಡೆ

Pinterest LinkedIn Tumblr

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿಯು ಯಕ್ಷಗಾನ ಶೈಲಿ ಹಾಡುಗಾರಿಕೆಯ ಧ್ವನಿ ಮುದ್ರಿಕೆಯನ್ನು ಹೊರತಂದಿದೆ.

“ಪ್ರಜಾಪ್ರಭುತ್ವ ಹಬ್ಬ” ಎಂಬ ಶೀರ್ಷಿಕೆಯ ಗೀತೆಯನ್ನು ಖ್ಯಾತ ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಪಟ್ಲ ಇವರು ಹಾಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಗೀತೆಯ ಸಾಹಿತ್ಯವನ್ನು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ||ಎಮ್.ಆರ್.ರವಿ ರಚಿಸಿದ್ದಾರೆ.

ಈ ಗೀತೆಯ ಸಿ.ಡಿಯನ್ನು ಪಶ್ಚಿಮವಲಯ ಐ.ಜಿ.ಪಿ ಅರುಣ್ ಚಕ್ರವರ್ತಿ ಅವರು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಮಾರ್ಚ್ 29 ರಂದು ನಡೆದ ಸ್ವೀಪ್ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಿದರು. ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್. ರವಿಕಾಂತೇಗೌಡ ಹಾಗೂ ಜಿ.ಪಂ ಸಿ.ಇ.ಒ ಡಾ|ಎಂ.ಆರ್.ರವಿ ಹಾಜರಿದ್ದರು.

Comments are closed.