ಕರಾವಳಿ

ಉಡುಪಿಯ ಜನತೆ ತಲೆ ತಗ್ಗಿಸುವ ಕೆಲಸ ಮಾಡಿದವರಿಂದ ನನ್ನ ಮೇಲೆ ಚಾರ್ಜ್ ಶೀಟ್ ಹಾಸ್ಯಾಸ್ಪದ: ಸಚಿವ ಪ್ರಮೋದ್

Pinterest LinkedIn Tumblr

ಉಡುಪಿ: ಟಿ.ಜೆ ಅಬ್ರಹಂ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ, ಈಗಾಗಲೇ ಆರ್.ಟಿ.ಐ ಮೂಲಕ ಅರ್ಜಿ ಹಾಕಿದ್ದೇವೆ. ಈ ಬಗ್ಗೆ ದೆಹಲಿಯ ಹಣಕಾಸು ಇಲಾಖೆಯಿಂದ ಕಡತ ಬರಬೇಕಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

2019 ರಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ. ಈಗಾಗಲೇ ಬಿಜೆಪಿಯ ಸೋಲಿನ ದಿನಗಳು ಆರಂಭವಾಗಿದೆ. ತಾಯಿ ಬಿಜೆಪಿಗೆ ಸೇರುವಾಗ ನಾನೂ ಬರುತ್ತೇನೆ ಅಂತ ಹೇಳಿಲ್ಲ. ಕಾಂಗ್ರೆಸ್ ಗೆ ನಾನು ದ್ರೋಹ ಬಗೆಯುವುದಿಲ್ಲ. ನನ್ನನ್ನು ನಂಬಿದ ಕಾರ್ಯಕರ್ತರಿಗೆ ಮೋಸ ಮಾಡುವುದಿಲ್ಲ. ರಾಜ್ಯದಲ್ಲೇ ನಂ1 ಅಂತರದಲ್ಲಿ ಈ ಬಾರಿ ಗೆಲ್ಲುತ್ತೇನೆ. ದೆಹಲಿಯಲ್ಲಿ ಯಾವುದೇ ಬಿಜೆಪಿ ನಾಯಕರನ್ನು ಭೇಟಿಯಾಗಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರವಾಗಿದೆ ಎಂದರು.

ನನ್ನ ಮೇಲೆ ಬಿಜೆಪಿ ಚಾರ್ಜ್ ಶೀಟ್ ಬಿಡುಗಡೆ ಮಾಡಿದೆ. ಶಾಸಕರ ಸಮೀಕ್ಷೆಯಲ್ಲಿ ನನಗೆ ನಂ 1 ಸ್ಥಾನ ಸಿಕ್ಕಿದೆ. ನಾನು ಉಡುಪಿಯ ಜನತೆ ತಲೆ ತಗ್ಗಿಸುವ ಕೆಲಸ ಮಾಡಿಲ್ಲ. ನನಗಿಂತ ಹಿಂದಿನ ಶಾಸಕ ರಾಜ್ಯದ ಮುಂದೆ ತಲೆ ತಗ್ಗಿಸುವ ಕೆಲಸ ಮಾಡಿದ್ದರು. ನನ್ನ ವಿಷನ್ 2025 ವರೆಗೆ ಇದೆ. ಬಿಜೆಪಿ ಇನ್ನೂ 7 ವರ್ಷ ಬಿಟ್ಟು ಚಾರ್ಜ್ ಶೀಟ್ ಹಾಕಲಿ ಎಂದರು.

ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ, ಶೋಭಾ ಕರಂದ್ಲಾಜೆ ಮೂಲಕ ನಾನು ಕೆಲಸ ಮಾಡಲು ಅಸಮರ್ಥನಾಗಿದ್ದೇನೆ. ಸಂಸದೆಯಿಂದ 4 ವರ್ಷದಲ್ಲಿ ಯಾವುದೇ ರೀತಿಯ ಸಹಕಾರ ಸಿಕ್ಕಿಲ್ಲ. ನನ್ನನ್ನು ಪ್ರಶ್ನಿಸುವ ಬದಲು ಸಂಸದರ ಸಾಧನೆಯ ಲೆಕ್ಕ ಕೊಡಲಿ ಎಂದು ಪ್ರಮೋದ್ ಸವಾಲೆಸೆದರು.

Comments are closed.