ಕರಾವಳಿ

ಇತಿಹಾಸ ಪ್ರಸಿದ್ದ ಕಾಪು ಮಾರಿ ಕ್ಷೇತ್ರದಲ್ಲಿ ಸುಗ್ಗಿ ಮಾರಿ ಪೂಜೆ

Pinterest LinkedIn Tumblr

ಉಡುಪಿ: ಇತಿಹಾಸ ಪ್ರಸಿದ್ದ ಕಾಪು ಮಾರಿ ಕ್ಷೇತ್ರದಲ್ಲಿ ಮೂರು ಮಾರಿ ಗುಡಿಗಳ ಸುಗ್ಗಿ ಮಾರಿ ಪೂಜೆಯೂ ಎಕ ಕಾಲದಲ್ಲಿ ಭಕ್ತಿ ಸಡಗರ ಸಂಭ್ರಮದಿಂದ ಜರಗಿತು.ಕಾಪುವಿನ ಹಳೆ ಮಾರಿಗುಡಿ , ಹೊಸ ಮಾರಿಗುಡಿಗೆ ಹಾಗೂ ಮುಖ್ಯ ಮಾರಿಯಮ್ಮ ದೇವಸ್ತಾನಕ್ಕೆ ,ಕಾಪುವಿನ ವೆಂಕಟರಮಣ ಹಾಗೂ ಲಕ್ಷ್ಮೀ ಜನಾರ್ಧನ ದೇವಸ್ಥಾನದಿಂದ ದೇವಿಯ ಆಭರಣಗಳನ್ನು ಮೆರವಣಿಗೆಯ ಮೂಲಕ ತಂದು, ದೇವಿಯನ್ನ ಗದ್ದಿಗೆಯಲ್ಲಿ ಪ್ರಾತಿಷ್ಠಾಪನೆ ಮಾಡುವ ಮೂಲಕ ಪ್ರಸಿದ್ದ ಮಾರಿ ಪೂಜೆಗೆ ಚಾಲನೆ ನೀಡಲಾಯಿತು.

ವರ್ಷಕ್ಕೆ ಮೂರು ಮಾರಿ ಪೂಜೆ ನಡೆಯುವ ಈ ಕ್ಷೇತ್ರದಲ್ಲಿ ಅಟಿ ಮಾರಿ,ಜಾರ್ದೆ ಮಾರಿ ಹಾಗೂ ಸುಗ್ಗಿ ಮಾರಿ ಪೂಜೆಯನ್ನ ಆಚರಿಸಲಾಗುತ್ತೆ.ಸುಗ್ಗಿ ಮಾರಿ ಪೂಜೆ ಪ್ರಮುಖ ಪೂಜೆಯಾಗಿರೋ ಕಾರಣಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿ ಮಾರಿಯಮ್ಮನಿಗೆ ಪೂಜೆ ಸಲ್ಲಿಸಿ ಕೋಳಿ ಕುರಿಗಳನ್ನ ಬಲಿ ರೂಪದಲ್ಲಿ ಸಮರ್ಪಿಸುತ್ತಾರೆ.

ಎರಡು ದಿನ ನಡೆದ ಸುಗ್ಗಿ ಮಾರಿಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿ ಮಾರಿಯಮ್ಮ ದೇವರ ದರುಶ ಪಡೆದು ಪ್ರಸಾದ ಪಡೆದರು .ಪ್ರಾಣಿ ಬಲಿಗಳನ್ನು ನಿಷೇಧ ಮಾಡಿದ್ದರು ಕೂಡ ಸಂಪ್ರದಾಯಿಕವಾಗಿ ನಡೆದು ಬಂದಿರುವ ಪದ್ದತಿ ಪ್ರಕಾರ ಜನ ಭಕ್ತಿಯಿಂದ ಕೋಳಿ ಬಲಿಗಳನ್ನು ಮಾಡುವುದರ ದೇವಿಗೆ ಸಮರ್ಪಿಸಿದರು.

ಅಷ್ಟೇ ಅಲ್ಲದೇ ಕಳೆದ ಮಾರಿ ಜಾತ್ರೆಗಿಂತಲೂ ಈ ಬಾರೀ ಕೋಳಿ ಮಾರಾಟದಲ್ಲೂ ಕೂಡ ದಾಖಲೆಯ ಮಾರಾಟ ಕೂಡ ಕಂಡು ಬಂದಿದೆ.

ಇನ್ನೂ ..ಮಾರಿ ಜಾತ್ರೆಯ ಸಂಭ್ರಮದಲ್ಲಿ ದೇವಸ್ಥಾನಕ್ಕೆ ವಿಶೇಷವಾಗಿ ದೀಪಲಾಂಕಾರವನ್ನು ಮಾಡಲಾಗಿತ್ತು,ರಾತ್ರಿ ಹೊತ್ತಲ್ಲಿ ನಡೆದ ಸಿಡಿ ಮದ್ದು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಲಕ್ಷಾಂತರ ಮಂದಿ ಭಾಗವಹಿಸುವ ಈ ಮಾರಿ ಜಾತ್ರೆಯಲ್ಲಿ ಬಿಗಿ ಪೊಲೀಸ್ ಬಂದೂ ಬಸ್ತನ್ನ ಎರ್ಪಡಿಸಲಾಗಿತ್ತು .ಸುಮಾರು 100 ಕ್ಕೂ ಹಚ್ಚು ಸಿಸಿಟಿವಿ ಗಳನ್ನ ಅಳವಡಿಸಲಾಗಿತ್ತು.

Comments are closed.