ಕರಾವಳಿ

ನೀತಿ ಸಂಹಿತೆ ಜಾರಿ ಹಿನ್ನೆಲೆ : ಸರ್ಕಾರಿ ಹಾಗೂ ಅನಧಿಕೃತ ಜಾಹೀರಾತು ತೆರವಿಗೆ ಜಿಲ್ಲಾಧಿಕಾರಿ ಅದೇಶ

Pinterest LinkedIn Tumblr

ಮಂಗಳೂರು, ಮಾರ್ಚ್. 28 : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮಂಗಳವಾರ ದಿನಾಂಕ ಘೋಷಣೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಧಿಸಿ ಪ್ರಕ್ರಿಯೆಗಳು ಆರಂಭಗೊಂಡಿದೆ.

ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ನಿನ್ನೆಯಿಂದಲೇ ಜಾರಿಗೊಂಡಿದ್ದು, ಸರಕಾರಿ ಆಸ್ತಿಗಳಲ್ಲಿ ಹಾಕಲಾಗಿರುವ ಅನಧಿಕೃತ ಜಾಹೀರಾತುಗಳನ್ನು 24 ಗಂಟೆಯೊಳಗೆ, ಸಾರ್ವಜನಿಕ ಪ್ರದೇಶಗಳಲ್ಲಿ 48 ಗಂಟೆಯೊಳಗೆ ಹಾಗೂ ಇತರ ಅನಧಿಕೃತ ಜಾಹೀರಾತುಗಳನ್ನು ಮೂರ್ನಾಲು ದಿನಗಳಲ್ಲಿ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಚುನಾವಣೆಗೆ ಸಂಬಂಧಿಸಿ ದ.ಕ. ಜಿಲ್ಲಾಡಳಿತವು ಪ್ರಥಮ ಹಂತದ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರೈಸಿದೆ. 1858 ಮತಗಟ್ಟೆಗಳಲ್ಲಿ 2787 ಬ್ಯಾಲೆಟ್ ಯುನಿಟ್ ಹಾಗೂ 27 ಕಂಟ್ರೋಲ್ ಯುನಿಟ್‌ಗಳು, 2450 ವಿವಿ ಪ್ಯಾಟ್‌ಗಳನ್ನು ಅಳವಡಿಸಲಾಗಿದೆ. ಈಗಾಗಲೇ ಇಲೆಕ್ಟ್ರಾನಿಕ್ ಮತಯಂತ್ರಗಳು ಆಗಮಿಸಿದ್ದು, ಅವುಗಳ ಪರಿಶೀಲನೆ ನಡೆಸಲಾಗಿದೆ.

ದ.ಕ ಜಿಲ್ಲೆಯಲ್ಲಿ ಒಟ್ಟು 16,67,194 ಮತದಾರರು ನೋಂದಣಿಯಾಗಿದ್ದು, ಇವರಲ್ಲಿ ೮,೪೬,೦೩೦ ಮಹಿಳೆಯರು ಮತ್ತು 8,21,123 ಪುರುಷ ಮತದಾರರಾಗಿದ್ದಾರೆ. 2013ರ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 15,01,024 ಮತದಾರರಿದ್ದು, ಈ ಬಾರಿ ಶೇ. 11ರಷ್ಟು ಮತದಾರರ ಸಂಖ್ಯೆ ಹೆಚ್ಚವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ 1766ಮತಗಟ್ಟೆಗಳು ಕಾರ್ಯ ನಿರ್ವಹಿಸಿದ್ದು, ಈ ಬಾರಿ ೧೮೫೮ ಮತಗಟ್ಟೆಗಳನ್ನು ಗುರುತಿಸಲಾಗಿದೆ. (ಇದರಲ್ಲಿ 1790 ಸಾಮಾನ್ಯ ಮತಗಟ್ಟೆಗಳಾಗಿದ್ದು, 68 ಪೂರಕ ಮತಗಟ್ಟೆಗಳಾಗಿವೆ. ಗ್ರಾಮಾಂತರ ಪ್ರದೇಶದಲ್ಲಿ 1300ಕ್ಕಿಂತ ಅಧಿಕ ಹಾಗೂ ನಗರ ಪ್ರದೇಶಗಳಲ್ಲಿ 1400ಕ್ಕಿಂತ ಅಧಿಕ ಮತದಾರರನ್ನು ಹೊಂದಿರುವ ಕಡೆ ಈ ಪೂರಕ ಮತಗಟ್ಟೆಗಳನ್ನು ಗುರುತಿಸಲಾಗಿದೆ). ಇದರೊಂದಿಗೆ ಸಾರ್ವಜನಿಕರ ಹಿತಾಸಕ್ತಿಯ ಮೇರೆಗೆ ಈ ಬಾರಿ ಹಳೆಯ 36 ಮತಗಟ್ಟೆಗಳನ್ನು ಹೊಸತಾಗಿ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

Comments are closed.