ಕರಾವಳಿ

ಡಿ.ಸಿ.ಐ.ಬಿ ಪೊಲೀಸರ ಕಾರ್ಯಾಚರಣೆ: ದರೋಡೆ ಪ್ರಕರಣದ ಆರೋಪಿಗಳ ಬಂಧನ

Pinterest LinkedIn Tumblr

ಉಡುಪಿ: ಉಡುಪಿ ಜೋಡುಕಟ್ಟೆಯ ಬಳಿ ಸುಗಂಧ ವಿಹಾರ್ ಎಂಬ ಮನೆಯಲ್ಲಿ ಕಳೆದೆರಡು ತಿಂಗಳ ಹಿಂದೆ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

ಜನವರಿ ತಿಂಗಳ 18 ರಂದು ರಾತ್ರಿವೇಳೆ ಸುಗಂಧ ವಿಹಾರ್ ಎಂಬ ಮನೆಗೆ ಅಕ್ರಮ ಪ್ರವೇಶ ಮಾಡಿ, ಮನೆಯಲ್ಲಿದ್ದ ಹೆಂಗಸರಿಗೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಮೂಡುಬೆಳ್ಳೆ ನಿವಾಸಿ ಅಜಯ್ ಕುಮಾರ್ @ ಅಣ್ಣು (30), ಉಡುಪಿ ಕೊಡಂಕೂರು ನಿವಾಸಿ ವಿಕ್ರಮ್ ಕುಂದರ್ (23) ಎಂಬವರನ್ನು ಬಂಧಿಸಲಾಗಿದೆ.

ದರೋಡೆ ಮಾಡಿದ್ದ ಹಣದಲ್ಲಿ ಖರೀದಿಸಿದ್ದ ಗೋಲ್ಡನ್ ಬಣ್ಣದ lephone ಕಂಪೆನಿಯ ಮೊಬೈಲ್ ಫೋನ್‌ನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ವಿಕ್ರಮ್ ಕುಂದರ್ ಎಂಬವನು ಈ ಹಿಂದೆ ಭಟ್ಕಳದಲ್ಲಿ ಕಳವು ಪ್ರಕರಣದ ಆರೋಪಿಯಾಗಿದ್ದು, ಅಲ್ಲದೇ ಮಣಿಪಾಲ ಪೊಲೀಸ್ ಠಾಣಾ ಸರಹದ್ದಿನ ಶಿವಳ್ಳಿ ಗ್ರಾಮದ ಹಯಗ್ರೀವ ನಗರ ಎಂಬಲ್ಲಿರುವ ಭಾಸ್ಕರ ಶೆಟ್ಟಿ ಎಂಬವರ ಮನೆಯಲ್ಲಿ ಕಳ್ಳತನ ನಡೆಸಿದ ಪ್ರಕರಣದ ಆರೋಪಿಯಾಗಿರುತ್ತಾನೆ.

ಕಾರ್ಯಾಚರಣೆಯಲ್ಲಿದ್ದವರು….
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬ. ನಿಂಬರಗಿ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಮತ್ತು ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ.ಆರ್.ಜೈಶಂಕರ್ ಮಾರ್ಗದರ್ಶನದಲ್ಲಿ, ಉಡುಪಿ ಡಿ.ಸಿ.ಐ.ಬಿ ಇನ್‌ಸ್ಪೆಕ್ಟರ್ ಸಂಪತ್ ಕುಮಾರ್ ಎ., ಡಿ.ಸಿ.ಐ.ಬಿ ಘಟಕದ ಎಎಸ್‌ಐ ರವಿಚಂದ್ರ ಹಾಗೂ ಸಿಬ್ಬಂದಿಯವರಾದ ಸುರೇಶ, ಸಂತೋಷ ಕುಂದರ್, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ಪ್ರವೀಣ, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ ಹಾಗೂ ಚಾಲಕ ರಾಘವೇಂದ್ರ ರವರು ಸಹಕರಿಸಿರುತ್ತಾರೆ.

Comments are closed.