ಉಡುಪಿ: ಕೊಂಕಣಿ ಸಿನೆಮಾದ ಉದಯೋನ್ಮುಖ ನಟಿ ರಂಜಿತಾ ಲುವಿಸ್ ಅವರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಉಡುಪಿಯ ಬ್ರಹ್ಮಾವರ ಸಮೀಪದ ಮಾಬುಕಳದಲ್ಲಿ ನಡೆದ ಅವಘಡ ಇದಾಗಿದೆ. ನಟಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಹಾಗೂ ಬೈಕ್ ನಡುವೆ ಅಪಘಾತ ಮಂಗಳವಾರ ಮಧ್ಯಾಹ್ನ ನಡೆದಿದೆ.
ಬೈಕ್ ಹಾಗೂ ಸ್ಕೂಟರ್ ನಡುವೆ ನಡೆದ ಡಿಕಿಯಲ್ಲಿ ಗಾಯಗೊಂಡ ನಟಿ ರಂಜೊತಾ ಲುವಿಸ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಐ.ಸಿ.ಯು.ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲತಃ ಸಾಸ್ತಾನದವರಾದ ರಂಜಿತಾ ಅವರು ಜಾನ್ವಾಯ್ ನಂಬರ್ ಒನ್, ನಶಿಬಾಚೊ ಖೇಳ್ ಮೊದಲಾದ ಕೊಂಕಣಿ ಚಿತ್ರದಲ್ಲಿ ನಟಿಸಿದ್ದು ಸದ್ಯ ಬಿಡುಗೊಂದು ಪ್ರದರ್ಶನ ಕಾಣುತ್ತಿರುವ ‘ಅಪ್ಪೆ ಟೀಚರ್’ ಎನ್ನುವ ತುಳು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Comments are closed.