ಕರಾವಳಿ

ಅಂಗಡಿ ಎತ್ತಂಗಡಿ ಹಿನ್ನೆಲೆ : ಸುರತ್ಕಲ್‌ನಲ್ಲಿ ತಾತ್ಕಾಲಿಕ ಮಾರುಕಟ್ಟೆಗೆ ಚಾಲನೆ

Pinterest LinkedIn Tumblr

ಸುರತ್ಕಲ್: ಸುರತ್ಕಲ್ ನ ತಾತ್ಕಾಲಿಕ ಮಾರುಕಟ್ಟೆಯನ್ನು ಶಾಸಕ ಮೊಹಿದಿನ್ ಬಾವಾ ಉದ್ಘಾಟಿಸಿದರು.ಈ ಮೂಲಕ ಸುರತ್ಕಲ್‌ನಲ್ಲಿ ಹಳೆಯ ಮಾರುಕಟ್ಟೆ ತೆರವುಗೊಳಿಸಿ ನೂತನ ಮಾರುಕಟ್ಟೆ ಕಾಮಗಾರಿ ಆರಂಭವಾಗಲಿದ್ದು, ಇದೀಗ ಸುರತ್ಕಲ್ ಕೃಷ್ಣಾಪುರ ಬಸ್ ನಿಲ್ದಾಣವನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ಚಾಲನೆ ದೊರೆಯಿತು.

ಈ ವೇಳೆ ಮಾತನಾಡಿದ ಶಾಸಕ ಮೊಯ್ದಿನ್ ಬಾವ ಅವರು, ಸುರತ್ಕಲ್‌ನಲ್ಲಿ ಅತ್ಯಾಧುನಿಕ ಸುಸಜ್ಜಿತ ಮಾರುಕಟ್ಟೆಯನ್ನು ಒಂದೂವರೆ ವರ್ಷದೊಳಗೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಫುಟ್ ಬಳಿ ಸುಮಾರು ಆರು ಅಡಿ ಜಾಗವಿರುವ ಸ್ಥಳದಲ್ಲಿ ಬಸ್ ನಿಲ್ದಾಣ ಮಾಡಲು ಸೂಚಿಸಿದರು. ಇದಕ್ಕೆ ಪೂರಕವಾಗಿ ಇಂಟರ್‌ಲಾಕ್ ಅಳವಡಿಸಿ ನೀಡಲು ಶಾಸಕರ ಅನುದಾನ ಇಲ್ಲವೆ ಪ್ರಿಮಿಯರ್ ಎಫ್ ಐ ಆರ್ ಅನುದಾನ ಬಳಸಲಾಗುವುದು ಎಂದು ಶಾಸಕ ಮೊಹಿದಿನ್ ಬಾವಾ ಹೇಳಿದರು.

ನೂತನ ಮಾರುಕಟ್ಟೆ ನಿರ್ಮಾಣವಾಗುವ ವರೆಗೆ ವ್ಯಾಪಾರಿಗಳ ಹಿತ ದೃಷ್ಟಿಯಿಂದ ಅವರ ಅನುಕೂಲಕ್ಕೆ ತಕ್ಕಂತೆ ಪಾಲಿಕೆ ವತಿಯಿಂದ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಹೊಸ ಮಾರುಕಟ್ಟೆ ನಿರ್ಮಾಣವಾದ ಬಳಿಕ ನೂತನ ಮಾರುಕಟ್ಟೆಗೆ ಸ್ಥಳಾಂತರಿಸಲಾಗುವುದು ಎಂದರು. ಜನತೆಗೆ ಮಾರುಕಟ್ಟೆ ಸ್ಥಳಾಂತರವಾದರೂ ಯಾವುದೇ ಸಮಸ್ಯೆಯಾಗದಂತೆ ವಾಹನ ವ್ಯವಸ್ಥೆ, ಟ್ರಾಫಿಕ್ ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಸಂಚಾರಿ ಪೊಲೀಸರಿಗೆ ಸೂಚಿಸಿದರು.

ಅಭಿವೃದ್ಧಿ ಕೆಲಸ ಮಾಡುವ ವೇಳೆ ಆರಂಭಿಕವಾಗಿ ಕೆಲವೊಂದು ತೊಂದರೆಯಾಗುತ್ತದೆ. ಆಡಳಿತದ ಜೊತೆ ಸ್ವಲ್ಪ ಸಹಕಾರ ನೀಡಿದರೆ ಭವಿಷ್ಯದಲ್ಲಿ ಎಲ್ಲರಿಗೂ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭ ಉಪಮೇಯರ್ ಮೊಹಮ್ಮದ್, ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ವಲಯಾಯುಕ್ತ ರವಿಶಂಕರ್, ಪಾಲಿಕೆ ಎಂಜಿನಿಯರ್‌ಗಳಾದ ಕೃಷ್ಣ ಮೂರ್ತಿ ರೆಡ್ಡಿ, ಖಾದರ್, ವ್ಯಾಪಾರಿಗಳ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments are closed.