ಕರಾವಳಿ

ಕೊಳಾಯಿ ನೀರಿಗಿಂತಲೂ ಮಿನರಲ್ ವಾಟರ್ ಹೆಚ್ಚು ಹಾನಿಕಾರಕವೇ…!

Pinterest LinkedIn Tumblr

ಮನೆಯಲ್ಲಿದ್ದಾಗ ನಾವು ಸಾಧ್ಯವಾದಷ್ಟು ನಲ್ಲಿ ನೀರು ಅಥವಾ ವಾಟರ್ ಫಿಲ್ಟರ್ ನೀರು ಕುಡಿಯುತ್ತೇವೆ. ಆದರೆ ಹೊರಗೆ ಹೋದರೆ ಮಾತ್ರ ಮಿನರಲ್ ವಾಟರ್ ಬಾಟಲಿಗಳೇ ಗತಿ. ಅದನ್ನು ಬಿಟ್ಟು ಎಲ್ಲೆಂದರಲ್ಲಿ ನೀರು ಕುಡಿಯಲು ನಾವು ಧೈರ್ಯ ಮಾಡಲ್ಲ. ಏನಾದರೂ ಸೋಂಕು ತಗುಲುತ್ತದೆಂದು, ರೋಗಗಳು ಬರುತ್ತವೆಂದು ನಮಗೆ ಭಯ. ಹಾಗಾಗಿ ನಾವು ಹೊರಗೆ ಸಾಧ್ಯವಾದಷ್ಟು ಮಿನರಲ್ ವಾಟರ್ ಬಾಟಲಿ ನೀರಿಗೆ ಪ್ರಾಮುಖ್ಯತೆ ನೀಡುತ್ತೇವೆ. ಆದರೆ ನಾವೀಗ ಹೇಳಲಿರುವ ಸಂಗತಿ ಗೊತ್ತಾದರೆ ಮಾತ್ರ ಇನ್ನು ನೀವು ಹೊರಗೆ ಎಲ್ಲಿಯಾದರೂ ಮಿನರಲ್ ಬಾಟಲಿ ನೀರು ಕುಡಿಯಲು ಭಯಬೀಳುತ್ತೀರ. ಯಾಕೆಂದರೆ ವಿಷಯ ಆ ರೀತಿ ಇದೆ. ಇಷ್ಟಕ್ಕೂ ವಿಷಯ ಏನೆಂದರೆ…

ನ್ಯೂಯಾರ್ಕ್ ಸ್ಟೇಟ್ ಯೂನಿವರ್ಸಿಟಿ ವಿಜ್ಜಾನಿಗಳು ಇತ್ತೀಚೆಗೆ ಒಂದು ಸಂಶೋಧನೆ ಮಾಡಿದರು. ಅವರು ಜರ್ನಲಿಸಂ ಪ್ರಾಜೆಕ್ಟ್ ಆರ್ಚ್ ಮೀಡಿಯಾ ಎಂಬ ಸಂಸ್ಥೆ ಮೇರೆಗೆ ಆ ಸಂಶೋಧನೆ ಮಾಡಿದರು. ಅಮೆರಿಕ, ಚೀನಾ, ಭಾರತ, ಬ್ರೆಜಿಲ್, ಇಂಡೋನೇಷಿಯಾ, ಕೀನ್ಯಾ ಸೇರಿದಂತೆ ಒಟ್ಟು9 ದೇಶಗಳಲ್ಲಿನ 11 ಬ್ರ್ಯಾಂಡ್‌ಗಳ 259 ಮಿನರಲ್ ವಾಟರ್ ಬಾಟಲಿಯಲ್ಲಿನ ನೀರನ್ನು ಪರಿಶೀಲಿಸಿದರು. ಈ ಪರಿಶೀಲನೆಯಲ್ಲಿ ಅವರಿಗೆ ಶಾಕಿಂಗ್ ಸಂಗತಿಗಳು ಗೊತ್ತಾದವು. ಅದೇನೆಂದರೆ…

ಆ 259 ವಾಟರ್ ಬಾಟಲಿಗಳಲ್ಲಿ ಶೇ.90ರಷ್ಟು ಬಾಟಲಿಗಳಲ್ಲಿ ಇರುವ ನೀರಿನಲ್ಲಿ ಪ್ಲಾಸ್ಟಿಕ್ ಅವಶೇಷಗಳು, ಕಣಗಳು ಹೆಚ್ಚಾಗಿ ಇವೆಯಂತೆ. 17 ಬಾಟಲಿಗಳಲ್ಲಿನ ನೀರಿನಲ್ಲಿ ಮಾತ್ರ ಯಾವುದೇ ಪ್ಲಾಸ್ಟಿಕ್ ಅಂಶ ಇರಲಿಲ್ಲ ಎಂದು ಗುರುತಿಸಿದ್ದಾರೆ. ಇನ್ನು ಪ್ಲಾಸ್ಟಿಕ್ ಅವಶೇಷಗಳು ಇರುವ ನೀರಿನ ಬಾಟಲಿಗಳಲ್ಲಿ ಗರಿಷ್ಠ 10 ಸಾವಿರ ತನಕ ಪ್ಲಾಸ್ಟಿಕ್ ಕಣಗಳಿವೆ ಎಂದು ಗುರುತಿಸಿದರು. ಹಾಗಾಗಿ ಎಲ್ಲರೂ ಶಾಕ್‌ಗೆ ಒಳಗಾಗಿದ್ದಾರೆ. ಅಂದರೆ ನಾವು ನಿತ್ಯ ಕುಡಿಯುವ ಮಿನರಲ್ ವಾಟರ್‌ನ ನೀರಿನಲ್ಲಿ ಎಲ್ಲಾ ಪ್ಲಾಸ್ಟಿಕ್ ಕಣಗಳು ಇವೆ ಎಂದಾಯಿತು. ನಿಜವಾಗಿ ಇದು ಶಾಕಿಂಗ್ ಸಂಗತಿ. ಇನ್ನು ನಾವು ನಿತ್ಯ ಕುಡಿಯುವ ಕೊಳಾಯಿ ನೀರಿಗಿಂತಲೂ ಆ ಮಿನರಲ್ ವಾಟರ್ ಹೆಚ್ಚು ಹಾನಿಕಾರಕ ಎಂದು ವಿಜ್ಜಾನಿಗಳು ಗುರುತಿಸಿದ್ದಾರೆ. ಹಾಗಾಗಿ ಈಗ ಮತ್ತೊಮ್ಮೆ ಮಿನರಲ್ ವಾಟರ್ ಬಾಟಲಿ ನೀರನ್ನು ಎಲ್ಲರೂ ಅನುಮಾನದಿಂದ ನೋಡುವಂತಾಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ಶೀಘ್ರದಲ್ಲೇ ಬಾಟಲಿಗಳಲ್ಲಿನ ನೀರು, ಅವುಗಳಿಂದ ಉಂಟಾಗುವ ಅನಾರೋಗ್ಯಗಳ ಬಗ್ಗೆ ಸಂಶೋಧನೆ ಮಾಡುತ್ತೇವೆ ಎಂದಿದೆ. ಅದೇನೇ ಇರಲಿ.. ಕೊನೆಗೆ ಏನಾಗುತ್ತದೋ ನೋಡಬೇಕು.

Comments are closed.