ಕರಾವಳಿ

ಮಂಗಳೂರು : ಒಂದೇ ವಿಮಾನದಲ್ಲಿ 2 ಅಕ್ರಮ ಚಿನ್ನ ಸಾಗಾಟ ಪ್ರಕರಣ ಪತ್ತೆ – ನಾಲ್ಕುವರೆ ಕೆ.ಜಿ ಚಿನ್ನ ವಶ

Pinterest LinkedIn Tumblr

ಮಂಗಳೂರು, ಮಾರ್ಚ್.17 : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದೇ ದಿನದಲ್ಲಿ ಅಕ್ರಮ ಚಿನ್ನ ಸಾಗಾಟಕ್ಕೆ ಸಂಬಂಧಿಸಿ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆಹಚ್ಚಿರುವ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಶನಿವಾರ ಬೆಳಿಗ್ಗೆ ದುಬೈಯಿಂದ ಮಂಗಳೂರಿಗೆ ಆಗಮಿಸಿದ ಜೆಟ್ ಏರ್ವೇಸ್ ವಿಮಾನದ ಶೌಚಾಲಯದಲ್ಲಿ ಆಡಗಿಸಿಟ್ಟ ಒಂದು ಕಿಲೋ ಗ್ರಾಂ ತೂಕದ ನಾಲ್ಕು ಚಿನ್ನದ ಬಾರ್ ಪತ್ತೆಯಾಗಿದೆ. ಇದನ್ನು ಜೆಟ್ ಏರ್ವೇಸ್ ಭದ್ರತಾ ಸಿಬ್ಬಂದಿಯ ಸಹಾಯದಿಂದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ವಿಮಾನ ಮಂಗಳೂರಿನಿಂದ ಮುಂಬಾಯಿಗೆ ಪ್ರಯಾಣ ಬೆಳೆಸುವ ಮೊದಲು ಕಸ್ಟಮ್ಸ್ ಅಧಿಕಾರಿಗಳು ತಪಾಷಣೆ ನಡೆಸಿದ ಸಂದರ್ಭ ಈ ಅಕ್ರಮ ಚಿನ್ನ ಸಾಗಾಟ ಪ್ರಕರಣ ಬಯಲಿಗೆ ಬಂದಿದೆ. ಚಿನ್ನ ಸಾಗಾಟದ ಆರೋಪಿ ಪ್ರಯಾಣಿಕನಿಗಾಗಿ ಶೋಧಕಾರ್ಯ ನಡೆದಿದೆ ಎನ್ನಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಇದೇ ವಿಮಾನದಲ್ಲಿ ಆಗಮಿಸಿದ ಯಾನಿಯು ತನ್ನ ಗುದಧ್ವಾರದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಕರಣವನ್ನು ಡಿಆರ್ ಐ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈತನ ಬಳಿ ಎರಡು ಚಿನ್ನದ ಬಿಸ್ಕತ್ ಪತ್ತೆಯಾಗಿದ್ದು, ೨೩೦ ಗ್ರಾಂ ತೂಕದ ಈ ಚಿನ್ನದ ಮೌಲ್ಯ ಸುಮಾರು ಏಳು ಲಕ್ಷವಿರ ಬಹುದೆಂದು ಅಂದಾಜಿಸಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಅಕ್ರಮ ಚಿನ್ನ ಸಾಗಾಟಕ್ಕೆ ಸಂಬಂಧಪಟ್ಟಂತೆ ಇತ್ತೀಚಿನ ದಿನಗಳಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದೇ ದಿನದಲ್ಲಿ ಪತ್ತೆ ಹಚ್ಚಿರುವ ಅತೀ ದೊಡ್ಡ ಪ್ರಕರಣ ಇದು ಎನ್ನಲಾಗಿದೆ.

Comments are closed.