ಕರಾವಳಿ

‘ಯುವತಿಯರ ಜೊತೆ ಸೆಲ್ಫಿ’: ಹೋಂ ಗಾರ್ಡ್ ಸಿಬ್ಬಂದಿ ಸಸ್ಪೆಂಡ್!

Pinterest LinkedIn Tumblr

ಉಡುಪಿ: 11 ಹುಡುಗಿಯರ ಜೊತೆ ಸರಸ ಸಲ್ಲಪ ನಡೆಸಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದ ಉಡುಪಿಯ ಹೋಂ ಗಾರ್ಡ್ ಸುಜೀತ್ ಶೆಟ್ಟಿ ಎಂಬಾತನನ್ನು ಗೃಹ ರಕ್ಷಕ ಇಲಾಖೆ ಅಮಾನತು ಗೊಳಿಸಿದೆ. ಉಡುಪಿಯ ಕಾರ್ಕಳ ನಿವಾಸಿಯಾಗಿರುವ ಸುಜೀತ್ ಶೆಟ್ಟಿ ಶಿರ್ವ ಠಾಣೆಯಲ್ಲಿ‌ ಹೋಂ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ.

ಈತ ಹಲವಾರು ಯುವತಿಯರೊಂದಿಗೆ ಸರಸ ಸಲ್ಲಾಪ ನಡೆಸಿ ಅವರೊಂದಿಗೆ ಸೆಲ್ಫಿ ಫೋಟೊ ಕ್ಲಿಕ್ಕಿಸಿ ಕೊಂಡಿದ್ದ ಫೋಟೊ ಫೇಸ್ ಬುಕ್, ವಾಟ್ಸಾಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲ ತಾಣದಲ್ಲಿ ತುಂಬಾನೇ ವೈರಲ್ ಅಗಿತ್ತು.

ಈತನ ವಿರುದ್ದ ಈವರೆಗೆ ಯಾವುದೇ ದೂರು ದಾಖಲಾಗದಿದ್ದರೂ ಶಿರ್ವ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ.ಕೆ. ಪ್ರಶಾಂತ್ ಶೆಟ್ಟಿ ಆದೇಶ ಹೊರಡಿಸಿದ್ದಾರೆ.

ಈತ್ತ ಈತನ ಫೋಟೊ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಗೃಹ ರಕ್ಷಕ ದಳ ಆತನನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಈತನ ಸಮಗ್ರ ತನಿಖೆಯಾಗಬೇಕೆಂದು ಕೂಡ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿರಿ: 

`ಹುಡುಗಿರೇ ಹುಷಾರ್’: ಉಡುಪಿಯಲ್ಲೊಬ್ಬ ಪೋಲಿ ಹೋಂ ಗಾರ್ಡ್; 11 ಯುವತಿಯರೊಂದಿಗಿನ ಲವ್ವಿಡವ್ವಿ ಫೋಟೋ ವೈರಲ್!

Comments are closed.