ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕರಿಗೆ ಸನ್ಮಾನ

Pinterest LinkedIn Tumblr

ಮಂಗಳೂರು ಮಾರ್ಚ್ 16 : ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಮಾರ್ಚ್ 15ರಂದು ವಾರದ ಕವಾಯತು ನಡೆಸಲಾಯಿತು. ಮಹಿಳಾ ದಿನಾಚರಣೆಯ ಅಂಗವಾಗಿ ಗೃಹರಕ್ಷಕಿ ಮಧುಮತಿ, ಮತ್ತು ವಾರಿಜ ಕೆ. ಇವರನ್ನು ಜಿಲ್ಲಾ ಸಮಾದೇಷ್ಠರು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಉಪಸಮಾದೇಷ್ಟರಾದ ರಮೇಶ್‍ರವರನ್ನು ಸನ್ಮಾನಿಸಲಾಯಿತು. ಸಮಾದೇಷ್ಟರಾದ ಡಾ| ಮುರಲೀ ಮೋಹನ್ ಚೂಂತಾರು ಮಾತನಾಡಿ ಪ್ರತಿಯೊಬ್ಬ ಗೃಹರಕ್ಷಕರು ಚುನಾವಣಾ ಕರ್ತವ್ಯವನ್ನು ನಿರ್ವಹಿಸಬೇಕು ಮತ್ತು ಗುರುತಿನ ಚೀಟಿಯನ್ನು ಪಡೆಯದ ಗೃಹರಕ್ಷಕರು ಜಿಲ್ಲಾ ಕಛೇರಿಗೆ ಬಂದು ಗುರುತಿನ ಚೀಟಿಯನ್ನು ಪಡೆದುಕೊಳ್ಳಬೇಕಾಗಿ ಸೂಚಿಸಿದರು.

ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್‍ಶೇರಾ ಮತ್ತು ಹಿರಿಯ ಗೃಹರಕ್ಷಕ ಸುರೇಶ್ ಶೇಟ್ ಉಪಸ್ಥಿತರಿದ್ದರು.

Comments are closed.