ಉಡುಪಿ: ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಉಡುಪಿಯ ಅಷ್ಟ ಮಠಗಳ ಪೈಕಿ ಶೀರೂರು ಮಠದ ಶ್ರೀ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಪ್ರಕಟಿಸಿದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಬಾರೀ ಬೆಳವಣಿಗೆಗಳು ನಡೆಯುತ್ತಿದೆ.
ಸ್ವಾಮೀಜಿಯವರಿಗೆ ಜೆಡಿಯು ಪಕ್ಷದಿಂದ ಟಿಕೆಟ್ ನೀಡಲು ಪಕ್ಷದವರು ಮುಂದೆ ಬಂದಿದ್ದಾರೆ. ಜನತಾದಳ (ಸಂಯುಕ್ತ) ಜಿಲ್ಲಾಧ್ಯಕ್ಷ ರಾಜೀವ ಕೋಟ್ಯಾನ್ ಅವರು ಸೋಮವಾರ ಸ್ವಾಮೀಜಿಯವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದಾರೆ. ಮೌಲ್ಯಾಧಾರಿತ ರಾಜಕೀಯಕ್ಕೆ ಹೆಸರಾದ ರಾಮಕೃಷ್ಣ ಹೆಗಡೆ ಯವರ ಪಕ್ಷ ಜೆಡಿಯುನಿಂದ ಸ್ಪರ್ಧಿಸಬೇಕೆಂದು ಕೋರಿದ್ದಾರೆ ಎನ್ನಲಾಗಿದೆ.
ಆದರೇ ಸ್ವಾಮೀಜಿ ಮಾತ್ರ ಕೆಲ ದಿನಗಳ ಬಳಿಕ ಈ ಬಗ್ಗೆ ಪ್ರಕಟಿಸುತ್ತೇನೆ ಎಂದಿದ್ದಾರೆ ಎನ್ನಲಾಗಿದೆ.