ಕರಾವಳಿ

ಭವಿಷ್ಯದಲ್ಲಿ ಹಾರ್ಟ್ ಅಟ್ಯಾಕ್ ಬರದಂತೆ ತಡೆಯಲು ಈ ಪಾನೀಯ

Pinterest LinkedIn Tumblr

ಹಾರ್ಟ್ ಅಟ್ಯಾಕ್ ಹೇಗೆ ಬರುತ್ತದೆ? ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗಿ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೆ ಆಗ ಹಾರ್ಟ್ ಅಟ್ಯಾಕ್ ಬರುತ್ತದೆ. ಇಂದು ಬಹಳಷ್ಟು ಮಂದಿಗೆ ಹಾರ್ಟ್ ಅಟ್ಯಾಕ್ ಬರುತ್ತಿದೆ. ಇದರಿಂದ ಬಹಳಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲ ಸಲ ಹಾರ್ಟ್ ಅಟ್ಯಾಕ್ ಆಗಿ ಬದುಕುಳಿದ ಬಳಿಕ ಇದು ಮತ್ತೆ ಬರಲ್ಲ ಎಂದು ಹೇಳಲಾಗದು. ಎಚ್ಚರದಿಂದ ಇರಬೇಕು. ವೈದ್ಯರು ನೀಡುವ ಔಷಧಿಗಳನ್ನು ಬಳಸಬೇಕು. ನಿತ್ಯ ವ್ಯಾಯಾಮ ಮಾಡಬೇಕು. ಇದರ ಜತೆಗೆ ಕೆಳಗೆ ಸೂಚಿಸಿದ ರೀತಿಯಲ್ಲಿ ಒಂದು ಪಾನೀಯ ತಯಾರಿಸಿಕೊಂಡು ಕುಡಿದರೆ ಹಾರ್ಟ್ ಅಟ್ಯಾಕ್ ಇನ್ನು ನಿಮಗೆ ಜನ್ಮದಲ್ಲಿ ಬರಲ್ಲ. ಆರೋಗ್ಯವಾಗಿ ಇರುವವರು ಸಹ ಈ ಪಾನೀಯ ಸೇವಿಸಬಹುದು. ಇದರಿಂದ ಭವಿಷ್ಯದಲ್ಲಿ ಹೃದಯ ಸಮಸ್ಯೆಗಳು ಬರಲ್ಲ. ಹಾಗಿದ್ದರೆ ಆ ಪಾನೀಯ ಯಾವುದು, ಅದನ್ನು ತಯಾರಿಸಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣವೇ..?

ಬೇಕಾದ ಪದಾರ್ಥಗಳು..
ಬೆಳ್ಳುಳ್ಳಿ ಎಸಳು – 30
ನಿಂಬೆಹಣ್ಣು – 6

ತಯಾರಿಸುವ ವಿಧಾನ..
ನಿಂಬೆಹಣ್ಣನ್ನು ಹೆಚ್ಚಿ ರಸ ತೆಗೆಯಬೇಕು. ಬೆಳ್ಳುಳ್ಳಿ ಹೊಟ್ಟು ಸುಲಿದು ಚಿಕ್ಕದಾಗಿ ಹೆಚ್ಚಿಕೊಳ್ಳಬೇಕು. ಬಳಿಕ ಸ್ವಲ್ಪ ನೀರು ಹಾಕಿಕೊಂಡು ಅವನ್ನು ಮಿಕ್ಸಿಗೆ ಹಾಕಬೇಕು. ಚೆನ್ನಾಗಿ ಮಿಕ್ಸ್ ಆದ ಬಳಿಕ ಅದರಲ್ಲಿ ಎರಡು ಲೀಟರ್ ನೀರು ಹಾಕಿಕೊಳ್ಳಬೇಕು. ಬಳಿಕ ಬರುವ ಮಿಶ್ರಣವನ್ನು 5-6 ನಿಮಿಷಗಳ ಕಾಲ ಬಿಸಿ ಮಾಡಬೇಕು. ಆ ಬಳಿಕ ಸ್ಪವ್‌ನಿಂದ ಇಳಿಸಿ ಶೋಧಿಸಬೇಕು. ಆ ಮಿಶ್ರಣವನ್ನು ಗಾಜಿನ ಸೀಶೆಯಲ್ಲಿ ಸಂಗ್ರಹಿಸಿ ಫ್ರಿಜ್‌ನಲ್ಲಿ ಇಟ್ಟುಕೊಳ್ಳಬೇಕು.

ಮೇಲೆ ತಿಳಿಸಿದ ಮಿಶ್ರಣವನ್ನು ಈ ರೀತಿ ಬಳಸಬೇಕು..
ಪ್ರತಿ ದಿನ ಈ ಮಿಶ್ರಣವನ್ನು 50 ಎಂಎಲ್ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಈ ರೀತಿ ಮೂರು ವಾರಗಳ ಕಾಲ ನಿಯಮಿತವಾಗಿ ತೆಗೆದುಕೊಳ್ಳಬೇಕು. ಮತ್ತೆ ವಾರಕಾಲ ಗ್ಯಾಪ್ ಕೊಟ್ಟು ಮತ್ತೆ ಬೇಕಿದ್ದರೆ ಇನ್ನೂ ಮೂರು ವಾರ ತೆಗೆದುಕೊಳ್ಳಬೇಕು. ಈ ರೀತಿ 6 ತಿಂಗಳಿಗೊಮ್ಮೆ ಮಾಡಬಹುದು. ಇದರಿಂದ ಹೃದಯ ತೊಂದರೆ ಎಂಬುದು ಬರಲ್ಲ. ಹೃದಯಕ್ಕೆ ಪಂಪ್ ಮಾಡುವ ರಕ್ತನಾಳಗಳಲ್ಲಿ ಕೊಬ್ಬು ಕರಗಿ ಅವು ಫ್ರೀಯಾಗುತ್ತವೆ. ಇದರಿಂದ ರಕ್ತ ಸಂಚಲನಕ್ಕೆ ಯಾವುದೇ ತೊಂದರೆಯಾಗಲ್ಲ. ಹಾಗಾಗಿ ಹೃದಯ ರೋಗಗಳು ಹತ್ತಿರ ಸುಳಿಯಲ್ಲ. ಆರೋಗ್ಯವಾಗಿರುವವರು ಸಹ ಈ ಮಿಶ್ರಣವನ್ನು ನಿತ್ಯ ಬಳಸಿದರೆ, ಅವರಿಗೆ ಭವಿಷ್ಯದಲ್ಲಿ ಯಾವುದೇ ಅನಾರೋಗ್ಯ ಸಮಸ್ಯೆಗಳು ಬರಲ್ಲ. ನಿಜವಾಗಿ ಕೊಲೆಸ್ಟರಾಲನ್ನು ಕರಗಿಸುವ, ಹೃದಯ ಸಂಬಂಧಿ ಸಮಸ್ಯೆಗಳನ್ನು ಗುಣಪಡಿಸುವ ಅನೇಕ ಔಷಧಿಗಳಲ್ಲಿ ನಿಂಬೆರಸ, ಬೆಳ್ಳುಳ್ಳಿಯಲ್ಲಿನ ಕೆಮಿಕಲ್ಸ್ ಬಳಸುತ್ತಾರೆ. ಆದರೆ ಈ ಸಂಗತಿ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಹಾಗಾಗಿ ಈ ಎರಡು ಪದಾರ್ಥಗಳಿಂದ ತಯಾರಿಸಿದ ಆ ಮಿಶ್ರಣವನ್ನು ಕುಡಿದರೆ ಹಾರ್ಟ್ ಅಟ್ಯಾಕ್ ಬರದಂತೆ ನೋಡಿಕೊಳ್ಳಬಹು

Comments are closed.