ಕರಾವಳಿ

ಮಂಗಳೂರು ಚಲೋ-ಜನಸುರಕ್ಷಾ ಯಾತ್ರೆ’ ಸಮಾರೋಪ ಹಿನ್ನೆಲೆ : ಜ್ಯೋತಿ ವೃತ್ತದಿಂದ ಸಾವಿರಾರು ಮಂದಿಯಿಂದ ಕಾಲ್ನಡಿಗೆ ಜಾಥ

Pinterest LinkedIn Tumblr

ಮಂಗಳೂರು, ಮಾರ್ಚ್.6: ಬಿಜೆಪಿ ರಾಜ್ಯ ಘಟಕ ಹಮ್ಮಿಕೊಂಡಿರುವ ‘ಮಂಗಳೂರು ಚಲೋ-ಜನಸುರಕ್ಷಾ ಯಾತ್ರೆ’ ಇಂದು ನಗರದ ಕೇಂದ್ರ ಮೈದಾನದಲ್ಲಿ ಸಮಾಪನಗೊಳ್ಳಲಿರುವ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ್ದು, ನಗರದ ಅಂಬೇಡ್ಕರ್ ವೃತ್ತದಿಂದ ಸಾಗಿಬಂದ ಯಾತ್ರೆಯಲ್ಲಿ ಸಂಸದರಾದ ನಳೀನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ,ಪ್ರತಾಪ್ ಸಿಂಹ, ಅನಂತ್‌ಕುಮಾರ್ ಹೆಗಡೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟಂದೂರು ಸಹಿತಾ ಸಾವಿರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.

ನಗರದ ಕೇಂದ್ರ ಮೈದಾನದಲ್ಲಿ ಇಂದು ಸಂಜೆ ಹಮ್ಮಿಕೊಂಡಿರುವ ‘ಮಂಗಳೂರು ಚಲೋ’ ಜನಸುರಕ್ಷಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಮುಖ್ಯ ಭಾಷಣಕಾರರಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಿದ್ದು, ಸಮಾರೋಪ ಸಮಾರಂಭದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಮಂಗಳೂರು ಚಲೋ-ಜನಸುರಕ್ಷಾ ಯಾತ್ರೆ’ ಸಮಾರೋಪ ಹಿನ್ನೆಲೆಯಲ್ಲಿ ನಗರವನ್ನು ಬಿಜೆಪಿ ಪಕ್ಷದ ಬಾವುಟ ಮತ್ತು ಕೇಸರಿ ಪತಾಕೆಗಳಿಂದ ಅಲಂಕರಿಸಲಾಗಿದೆ. ಮಂಗಳೂರು ಚಲೋ-ಜನಸುರಕ್ಷಾ ಯಾತ್ರೆ’ಗೆ ಬರುವ ಉತ್ತರ ಕನ್ನಡ, ಉಡುಪಿ, ಕಾರ್ಕಳ ಭಾಗದ ಕಾರ್ಯಕರ್ತರು ಕದ್ರಿಯಿಂದ ಮತ್ತು ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮಡಿಕೇರಿಯಿಂದ ಬರುವವರು ಪಂಪ್‌ವೆಲ್‌ನಿಂದ ಪಾದಯಾತ್ರೆ ಆರಂಭಿಸಿದ್ದಾರೆ. ಪಾದಯಾತೆಯಲ್ಲಿ ೫೦ ಸಾವಿರಕ್ಕೂ ಅಧಿಕ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದು, ಜ್ಯೋತಿ ವೃತ್ತದಿಂದ ಸಮಾರಂಭ ನಡೆಯುವ ಕೇಂದ್ರ ಮೈದಾನಕ್ಕೆ ಕಾಲ್ನಡಿಗೆಯಲ್ಲಿ ತೆರಳಿದರು.

ಮಂಗಳೂರು ಚಲೋ-ಜನಸುರಕ್ಷಾ ಯಾತ್ರೆ ಸಮಾರೋಪ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.ಆಯಕಟ್ಟಿನ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು ಪೊಲೀಸರು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರು.

Comments are closed.