ಕರಾವಳಿ

ಪಿಲಿಕುಳದ ನೂತನ 3ಡಿ ತಾರಾಲಯದಲ್ಲಿ ಪ್ರತೀ ದಿನ 7 ಪ್ರದರ್ಶನ : ಶನಿವಾರ, ಬಾನುವಾರ 8 ಪ್ರದರ್ಶನ

Pinterest LinkedIn Tumblr

ಮಂಗಳೂರು ಮಾರ್ಚ್ 2: ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಹೊಸದಾಗಿ ಲೋಕಾರ್ಪಣೆಗೊಂಡ 3ಡಿ ತಾರಾಲಯದಲ್ಲಿ ಮಾರ್ಚ್ 1 ರಿಂದ 3 ರವರೆಗೆ ಸಾರ್ವಜನಿಕರಿಗೆ ಪ್ರದರ್ಶನ ವೀಕ್ಷಣೆಗೆ ಉಚಿತಪಾಸನ್ನು ಪ್ರದರ್ಶನವಾರು ಈಗಾಗಲೇ ನೀಡಲಾಗಿದೆ.

ಮಾರ್ಚ್ 4ರಿಂದ ಪ್ರದರ್ಶನ ವೀಕ್ಷಣೆಗೆ ಪಿಲಿಕುಳ ನಿಸರ್ಗಧಾಮದ ಮುಖ್ಯಪ್ರವೇಶ ದ್ವಾರದಲ್ಲಿ ತೆರೆದಿರುವ ಬಾಕ್ಸ್ ಆಫೀಸ್‍ನಲ್ಲಿ ಟಿಕೇಟುಗಳನ್ನು ನೀಡಲಾಗುವುದು. “ವಿ ಆರ್ ದ ಸ್ಟಾರ್ಸ್” ಪ್ರದರ್ಶನವು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಬಿತ್ತರಗೊಳ್ಳಲಿದೆ.

ತಾರಾಲಯದ ಟಿಕೇಟಿನ ದರ ವಯಸ್ಕರಿಗೆ ರೂ.60/- ನಿಗದಿಪಡಿಸಲಾಗಿದೆ. ನಿಸರ್ಗಧಾಮದ ಎಲ್ಲಾ ವಿಭಾಗಗಳ ವೀಕ್ಷಣೆಗಳಿಗೆ ಪ್ರತೀ ಒಬ್ಬರಿಗೆ ಕಾಂಬೊ ರಿಯಾಯಿತಿ ದರ ರೂ.100/-ಇರುವುದು. ಮುಂದಿನ ವಾರದಿಂದ www.bookmyshow.com ನಲ್ಲಿ ಮುಂಗಡ ಟಿಕೇಟುಗಳನ್ನು ಕಾಯ್ದಿರಿಸಬಹುದಾಗಿದೆ.

ಪ್ರತಿ ಮಂಗಳವಾರದಿಂದ ಶುಕ್ರವಾರ ತನಕ ಬೆಳಗ್ಗೆ 10 ರಿಂದ ಸಂಜೆ 5.30 ರ ತನಕ ಪ್ರತೀ ಗಂಟೆಗಳಿಗೊಮ್ಮೆ ದಿನದಲ್ಲಿ ಒಟ್ಟು 7 ಪ್ರದರ್ಶನಗಳು ಹಾಗೂ ವಾರದ ಪ್ರತೀ ಶನಿವಾರ ಹಾಗೂ ಆದಿತ್ಯವಾರ ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ ದಿನದಲ್ಲಿ ಒಟ್ಟು 8 ಪ್ರದರ್ಶನಗಳು ನಡೆಯುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಲು ಪ್ರಕಟಣೆ ತಿಳಿಸಿದೆ.

Comments are closed.