ಕರಾವಳಿ

ಮಲ್ಪೆ ಬೀಚ್‌ನಲ್ಲಿರುವ ಎಲ್ಲಾ ಅಂಗಡಿಗಳಿಗೆ ಕನ್ನಡ ಬೋರ್ಡ್ ಹಾಕಿ!

Pinterest LinkedIn Tumblr

ಉಡುಪಿ: ಮಲ್ಪೆ ಬೀಚ್‌ನಲ್ಲಿರುವ ಎಲ್ಲ ಅಂಗಡಿಗಳಿಗೆ ಕನ್ನಡ ಬೋರ್ಡ್ ಹಾಕುವ ಬಗ್ಗೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟವರಿಗೆ ಸೂಚನೆ ನೀಡಿದರು. ಇಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿ, ಬೀಚ್ ಅಭಿವೃದ್ಧಿಗೆ ಪೂರಕವಾಗಿ ನಡೆಯುವ ಅಭಿವೃದ್ಧಿ ಕಾಮಗಾರಿಗೆ ಘಟನೋತ್ತರ ಅನುಮತಿ ನೀಡಿದರು.

ಸೈಂಟ್ ಮೇರಿಸ್ ದ್ವೀಪದಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಕ್ಮಕೈಗೊಳ್ಳಲಾಗಿದೆ. ಹೊಸ ಆಡಿಟರ್ ನೇಮಕದ ಸಂಬಂಧ ಕೈಗೊಂಡ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸೈಂಟ್ ಮೇರಿಸ್ ದ್ವೀಪದಲ್ಲಿ ಮೂಲಭೂತ ಸೌಕರ್ಯ, ಅತ್ಯುತ್ತಮ ಶೌಚಾಲಯಗಳನ್ನು ನಿರ್ಮಿಸಲು ಸೂಚಿಸಿದರು. ಸೀವಾಕ್ ವೇಯ ಮುಖ್ಯದ್ವಾರಕ್ಕೆ ಒಂದು ಲುಕ್ ಕೊಡಲು ಸ್ವಾಗತ ಕಮಾನು ರಚಿಸಲು ತೀರ್ಮಾನಿಸಲಾಯಿತು.

ಮಲ್ಪೆ ಬೀಚ್‌ನಲ್ಲಿರುವ ಸ್ಮಶಾನದ ನಿರ್ವಹಣೆ ಮಾಡಿದ ಬಗ್ಗೆಯೂ ಚರ್ಚಿಸಲಾಯಿತು. ಮಲ್ಪೆ ಬೀಚ್‌ನಲ್ಲಿ ವ್ಯಾಪಾರ ಮಾಡುತ್ತಿರುವ ಗೂಡಂಗಡಿಗಳಲ್ಲಿ ಆಹಾರಗುಣಮಟ್ಟ ಪರಿಶೀಲನೆಗೆ ಆದ್ಯತೆ ನೀಡಲು ಸಚಿವರು ಸೂಚಿಸಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್ ರಾಜ್, ನಗರಸಭಾ ಸದಸ್ಯರಾದ ಗಣೇಶ್ ನೇರ್ಗಿ , ನಾರಾಯಣ ಕುಂದರ್, ಯಶ್‌ಪಾಲ್ ಸುವರ್ಣ, ಪ್ರಶಾಂತ್ ಅಮೀನ್, ಪೌರಾಯುಕ್ತ ಮುಂಜುನಾಥಯ್ಯ ಹಾಗೂ ಸಿ‌ಆರ್‌ಝಡ್ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.