ಕುಂದಾಪುರ: ಬೆಲೆ ಬಾಳುವ ಜೈನ ತೀರ್ಥಂಕರರ ವಿಗ್ರಹ ಮಾರಾಟಕ್ಕೆ ಪ್ರಯತ್ನಿಸಿ ಕುಂದಾಪುರ ಪೊಲೀಸರ ಕೈಗೆ ಸಿಕ್ಕಿಬಿದ್ದ ಮೂವರು ಆರೋಪಿತರ ಮಂಗಳವಾರ ಕುಂದಾಪುರ ತೆರೆದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು 5 ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಕಾರಿನ ಸೀಟಿನಡಿ ವಿಗ್ರಹ ತಂದ ಮಾರಾಟಕ್ಕೆ ಪ್ರ್ರಯತ್ನಿಸಿದ ಮಂಗಳೂರು ಪಡೀಲ್ ನಿವಾಸಿ ನೆವಿಲ್ ವಿಲ್ಪಿ ಮಸ್ಕರೇನಿಯಸ್ (36), ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ತಾಳಗುಪ್ಪ ನಿವಾಸಿ ಅನಿಲ್ ಪೋರ್ಟಡೋ (34) ಮತ್ತು ಮಂಗಳೂರು ನಿವಾಸಿ ಆಸ್ಟೀನ್ ಸಿಕ್ವೆರಾ (28) ಎಂಬವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಸೋಮವಾರ ತೆರೆದ ನ್ಯಾಯಾಲಕ್ಕೆ ಹಾಜರಾದ ಕುಂದಾಪುರ ಎಸ್ಸೈ ಹರೀಶ್ ಆರ್.ನಾಯ್ಕ್ ಆರೋಪಿತರ ಹೆಚ್ಚಿನ ವಿಚಾರಣೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಕಸ್ಟಡಿಗೆ ನೀಡುವಂತೆ ವಿನಂತಿ ಮಾಡಿದ್ದರು. ನ್ಯಾಯಾದೀಶರು ಆರೋಪಿತರ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸೂಚಿಸಿದ ತರುವಾಯ ಕಾರಾವರದ ಜೈಲಿನಲ್ಲಿದ್ದ ಆರೋಪಿಗಳನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ವಿಗ್ರಹ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳ ಬಳಿ ಹಣ ಎಣಿಸುವ ಯಂತ್ರ, ಕಾರ್ ಹಾಗೂ ನಗದು 46,060 ರೂ. ಪೊಲೀಸರು ವಶ ಪಡಸಿಕೊಂಡಿದ್ದರು. ಆರೋಪಿತರು ಇದ್ದ ಸ್ಥಳದಲ್ಲಿ ಸಿಕ್ಕಿದ್ದ ಪತಿ,ಪತ್ನಿ ಪೊಲೀಸರು ಬಿಡುಗಡೆ ಮಾಡಲಾಗಿತ್ತು. ವಿಗ್ರಹ ಚೋರರು ಹಿಂದಿನ ಬ್ಯಾಕ್ ಗ್ರೌಂಡ್ ಏನು? ಹಿಂದೆ ಯಾವುದಾದರೂ ಅಪರಾಧದಲ್ಲಿ ಮಾಲ್ಗೊಂಡಿದ್ದಾರಾ, ವಿಗ್ರಹ ಅಪಹರಣ ಹಿಂದೆ ಮತ್ಯಾರೆಲ್ಲಾ ಇದ್ದಾರೆ ಎನ್ನುವುದ ತಿಳಿಯಲು ಹೆಚ್ಚಿನ ವಿಚಾರಣೆ ಜರೂರತ್ತಿದ್ದರಿಂದ ಪೊಲೀಸರು ಕಷ್ಟಡಿಗೆ ಕೇಳಲಾಗಿದೆ.
ವಿಗ್ರಹ ಅಪಹರಣದಲ್ಲಿ ಮೂವರಲ್ಲಿ ಒಬ್ಬರು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಎನ್.ಎಸ್.ಯು.ಐ ಘಟಕದ ಕಾರ್ಯಕರ್ತನಾಗಿದ್ದು, ಪ್ರತಿಷ್ಠಿತರ ಜತೆ ಇರುವ ಪೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಠೀಕೆಗಳು ಕೇಳಿಬಂದಿದ್ದವು. ಆಸ್ಟೀನ್ ಸಿಕ್ವೇರಾನನ್ನು ಸದ್ಯ ಹುದ್ದೆಯಿಂದ ವಜಾಗೊಳಿಸಲಾಗಿದೆ.
ಇದನ್ನೂ ಓದಿರಿ: ಬೆಲೆಬಾಳುವ ಪ್ರಾಚೀನ ‘ಜೈನ ತೀರ್ಥಾಂಕರ’ ವಿಗ್ರಹ ಡೀಲಿಂಗ್: ಕುಂದಾಪುರ ಪೊಲೀಸರಿಂದ ಮೂವರ ಬಂಧನ
Comments are closed.