
ಮಂಗಳೂರು : ಬ್ರಾಹ್ಮಣ ಸಮಾಜದ ವೇಷ ಭೂಷಣಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ ಆದರೆ ವೈದಿಕ ಮೌಲ್ಯಗಳು ಬದಲಾವಣೆಯಾಗದಂತೆಎಚ್ಚರ ವಹಿಸಬೇಕಾದುದು ಅವಶ್ಯ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವತಿಯಿಂದ ಬೆಂಗಳೂರಿನಲ್ಲಿ ಜರಗಿದ ವಿಪ್ರ ಸಮಾವೇಶ ಹಾಗೂ ಗುರುವಂದನೆ ಕಾರ್ಯಕ್ರಮ ಕ್ಕೆ ಮಂಗಳೂರಿನ ಮಲ್ಲಿಕಾ ಬಡಾವಣೆಯಲ್ಲಿರುವ ‘ಮಂಜು ಪ್ರಸಾದ’ ನಿಲಯದಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ಪೂಜ್ಯ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.

ಮಧ್ವಾಚಾರ್ಯರ ಸಂದೇಶ ಪ್ರಸಾರದೊಂದಿಗೆ, ಜನಸೇವೆ ಹಾಗೂ ಭಗವಂತನ ಸೇವೆ ಜೀವನದಗುರಿಯಾಗಲೆಂದುಅವರು ಹಾರೈಸಿದರು. ಏಕತೆ-ಸಂಘಟನೆಯಿಂದಲೇ ಸದೃಢ ಸಮಾಜದ ನಿರ್ಮಾಣ ಸಾಧ್ಯ. ಸಮಾಜದಲ್ಲಿದ್ವೈತಅದ್ವೈತ ಎಂಬ ಸಾಂಪ್ರದಾಯಿಕ ಭಿನ್ನತೆಇದ್ದರೂಒಗ್ಗಟ್ಟಾಗಿ ಮುಂದಕ್ಕೆ ಸಾಗುವ ಮೂಲಕ ಸಮಾಜವನ್ನು ಸುದೃಢಗೊಳಿಸಬೇಕೆಂದರು.

ಈ ಸಂದರ್ಭ ಬೆಂಗಳೂರು ವಿಪ್ರ ಸಮಾಜ ವಿಶ್ವಸ್ಥ ಗುರುಪ್ರಸಾದ್, ಪ್ರಮುಖರಾದ ಎಸ್. ಪದೀಪ ಕುಮಾರ ಕಲ್ಕೂರ, ಪೊಳಲಿ ನಿತ್ಯಾನಂದಕಾರಂತ, ಡಾ. ರಾಘವೇಂದ್ರರಾವ್, ದಿವಾಣರಘುರಾಮ ಆಚಾರ್ಯ, ವಿಷ್ಣು, ಸುಬ್ರಹ್ಮಣ್ಯ ಮೊದಲಾದವರು ಉಪಸ್ಥಿತರಿದ್ದರು.

ಕಲಿಬೀಸಿದ ಬಲೆಯೊಳಗೆ ವಿಪ್ರ ಸಮಾಜ :
ಕಲಿಬೀಸಿದ ಬಲೆಯೊಳಗೆ ವಿಪ್ರ ಸಮಾಜ ಸಿಲುಕಿಕೊಂಡಿದೆ. ದ್ವೈತಅದ್ವೈತ ಎಂಬ ಸಾಂಪ್ರದಾಯಿಕ ಭಿನ್ನತೆ ಇದ್ದರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ. ಈ ಬಲೆಯಿಂದ ಹೊರಬರಲು ಸಾಧ್ಯ. ಏಕತೆ ಹಾಗೂ ಸಂಘಟನೆಯ ಮೂಲಕ ಸಮಾಜ ನಿರ್ಮಾಣ ಸಾಧ್ಯ : ಪೇಜಾವರ ಶ್ರೀ
Comments are closed.